HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮಜಿಬೈಲಿನಲ್ಲಿ ಬಂಟರ ಸಮ್ಮಿಲನ
   ಮಂಜೇಶ್ವರ: ಸಮಾಜಕ್ಕೆ ಬಂಟರ ಕೊಡುಗೆ ಅನನ್ಯವಾದದ್ದು. ಸಮ್ಮಿಲನಗಳು ಸಮಾಜದವರನ್ನು ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ನೆರವಾಗುವುದು ಎಂದು ಬಮಟರ ಯಾನೆ ನಾಡವರ ಮಾತೃಸಂಘ ಮಂಗಳೂರಿನ ಅಧ್ಯಕ್ಷ ಕೆ.ಅಜಿತ್ಕುಮಾರ್ ರೈ ಮಾಲಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
  ಹೊಸಂಗಡಿ ಸಮೀಪದ ಮಜಿಬೈಲು ಬೂಡು ಶ್ರೀಮಹಾಗಣಪತಿ ದೇವಸ್ಥಾನ ಸಮೀಪದ ದಿ. ಸರಳಾ ರೈ ವೇದಿಕೆಯಲ್ಲಿ ಭಾನುವಾರ ರಾತ್ರಿ ಬಂಟ್ಸ್ ಮಜಿಬೈಲು ಸಂಸ್ಥೆ ಆಯೋಜಿಸಿದ ಬಂಟರ ಸಮ್ಮಿಲನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ರಾಮಪ್ರಕಾಶ್ ಆಳ್ವ ಪಟ್ಟತ್ತಮೊಗರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬಂಟರ ಸಂಘದ ಜೊತೆ ಕಾರ್ಯದಶರ್ಿ ಕಾಂತಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಂದು ಅಭಿವೃದ್ದಿಹೊಂದುತ್ತಿದ್ದು, ಪುರುಷ ಸಮಾಜ ಇದನ್ನು ಪೈಪೋಟಿಯೆಂದು ಪರಿಭಾವಿಸದೆ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ತಿಳಿಸಿದರು.
  ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದ ಜೊತೆ ಕಾರ್ಯದಶರ್ಿ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಸಂದೀಪ ಶೆಟ್ಟಿ ಮರವೂರು, ಬಂಟರ ಸಂಘದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ ದಾಮೋದರ ಶೆಟ್ಟಿ ಮಜಿಬೈಲು, ಮಜಿಬೈಲು ಘಟಕದ ಅಧ್ಯಕ್ಷ ಜಗದೀಶ ಶೆಟ್ಟಿ ಎಲಿಯಾಣ, ಮಂಗಲ್ಪಾಡಿ ಘಟಕದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಟ್ಟಂ, ವಕರ್ಾಡಿ ಘಟಕದ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿಬೈಲು ಗುತ್ತು,ಮಂಜೇಶ್ವರ ಘಟಕದ ಅಧ್ಯಕ್ಷ ದಾಮೋದರ ಶೆಟ್ಟಿ ಕುಂಜತ್ತೂರು, ರಘು ಶೆಟ್ಟಿ ಕುಂಜತ್ತೂರು, ಬಂಟ್ಸ್ ಮಜಿಬೈಲಿನ ಪದಾಧಿಕಾರಿಗಳಾದ ಕಾತರ್ಿಕ್ ಶೆಟ್ಟಿ ಮಜಿಬೈಲು, ಉದಯಕುಮಾರ್ ಶೆಟ್ಟಿ ಅರಿಬೈಲು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಪ್ರದೀಪ್ ಕುಮಾರ್ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದು ಶುಭಹಾರೈಸಿದರು.
  ನ್ಯಾಯವಾದಿ ದಾಮೋದರ ಶೆಟ್ಟಿ ಮಜಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಗಣೇಶ್ ರೈ ಕೋರಿಕ್ಕಾರ್, ಪ್ರೇಮ್ಜಿತ್ ಸುಲಾಯ ಪಟ್ಟತ್ತಮೊಗರು, ಸೀತಾರಾಮ ಶೆಟ್ಟಿ ಬಂಟರಹಿತ್ತಿಲು, ಮೋಹನ ಹೆಗ್ಡೆ ಬೆಜ್ಜ, ಮೋಹನ ಶೆಟ್ಟಿ ಮಜ್ಜಾರ್, ಹರೀಶ್ ಭಂಡಾರಿ ಕೌಡೂರು ಬೀಡು, ಶಿವರಾಮ ಪಕಳ ಉಪ್ಪಳ ನಡುಮನೆ, ಬಾಬು ಶೆಟ್ಟಿ ಕಂಗುಮೆ, ಆನಂದ ಆಳ್ವ ಮಾಚೆಯವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ತುಳು ಚಲನಚಿತ್ರ ನಟ ರೂಪೇಶ್ ಶೆಟ್ಟಿ,ಶೈನ್ ಶೆಟ್ಟಿ, ನಿದರ್ೇಶಕ ಸೂರಜ್ ಶೆಟ್ಟಿ ಕಂಗುಮೆ ಉಪಸ್ಥಿತರಿದ್ದು ತಾರಾ ಮೆರುಗು ನೀಡಿದರು. ಸಾಹಿಲ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಹೆಗ್ಡೆ ವಂದಿಸಿದರು.
  ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ನಿಜಿಲಿಂಗ್ ಗಯ್ಸ್ ತಂಡದವರಿಂದ ನೃತ್ಯ ಕಾರ್ಯಕ್ರಮ,ವಿಸ್ಮಯ ವಿನಾಯಕ ಬಳಗದವರಿಂದ ಕಡೆ-ಕೊಡಿ ಕಾಮಿಡಿ ಶೋ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಅಪರಾಹ್ನ ರಾಮಪ್ರಕಾಶ್ ಆಳ್ವ ಪಟ್ಟತ್ತಮೊಗರು ದೀಪ ಬೆಳಗಿಸಿ, ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆದು  ಚಾಲನೆ ನೀಡಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries