ವಾಮದೇವ ಪುಣಿಂಚಿತ್ತಾಯ ಮತ್ತು ಸಬ್ಬಣಕೋಡಿಯವರಿಗೆ
ಲಕ್ಷ್ಮೀಚಂದ್ರ ಬಲ್ಲಾಳ ಪ್ರಶಸ್ತಿ ಸಹಿತ ಗುರುವಂದನೆ
ಉಪನಯನದ ಮನೆಯಲ್ಲಿ ಸಂಭ್ರಮದ ಯಕ್ಷಗಾನೋಪಾಸನೆ
ಮುಳ್ಳೇರಿಯ: ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ನುರಿತ ಹಿಮ್ಮೇಳವಾದಕರಾಗಿ ಸುದೀರ್ಘ ಸೇವೆಸಲ್ಲಿಸಿ ಸ್ವಯಂ ನಿವೃತ್ತರಾಗಿ ಪ್ರಸಕ್ತ ಪ್ರಸಿದ್ಧ ಹವ್ಯಾಸಿ ಕಲಾವಿದರಾಗಿ ಸಕ್ರಿಯರಿರುವ ಕಾರಡ್ಕ ರಾಘವ ಬಲ್ಲಾಳ್ ಯಕ್ಷಗಾನಾಭ್ಯಾಸಿ ಕಲಾವಿದರಾದ ತಮ್ಮ ಮಕ್ಕಳಿಬ್ಬರ ಉಪನಯನ ಸಂಸ್ಕಾರದ ದಿನದಂದು ಮನೆಯಂಗಳದಲ್ಲೇ ಏರ್ಪಡಿಸಿದ ಆತ್ಮೀಯ ಸಮಾರಂಭದಲ್ಲಿ ತಮ್ಮ ಕಲಾಗುರುಗಳಿಗೆ ಸಕುಟುಂಬಿಕರಾಗಿ ಆದರೋಪಚಾರ ಸಹಿತ ಗುರುವಂದನೆ ಸಲ್ಲಿಸಿ, ಪ್ರಶಸ್ತಿಯನ್ನಿತ್ತು ಯಕ್ಷಗಾನೋಪಾಸನೆಗೈದು ರಸದೌತಣವಿತ್ತರು. ಕಲಾವಿದ ರಾಘವ ಬಲ್ಲಾಳರ ಮಕ್ಕಳಾದ ನಿಶಾಂತ್.ಕೆ. ಮತ್ತು ನಿರಂಜನ್ ಕೆ.ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದು,ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ವಿದ್ಯಾಥರ್ಿಗಳಾಗಿದ್ದಾರೆ. ಇವರ ಉಪನಯನ ಸಂಸ್ಕಾರವನ್ನು ಇತ್ತೀಚೆಗೆ ಕಾರಡ್ಕದಲ್ಲಿರುವ ತಮ್ಮ ಸ್ವಗೃಹದಲ್ಲಿ ನಡೆಸಿದ್ದು,ಈ ಸಂದರ್ಭ ಮಕ್ಕಳ ಗುರುಗಳಾದ ಸಬ್ಬಣಕೋಡಿ ರಾಮಭಟ್ ಅವರಿಗೆ ಮತ್ತು ರಾಘವ ಬಲ್ಲಾಳರ ಹಿಮ್ಮೇಳ ಗುರುಗಳಾದ ಪುಂಡೂರು ವಾಮದೇವ ಪುಣಿಂಚಿತ್ತಾಯರಿಗೆ ಲಕ್ಷ್ಮೀಚಂದ್ರ ಬಲ್ಲಾಳ ಪ್ರಶಸ್ತಿ ಸಹಿತ ಗುರುವಂದನೆ ಸಲ್ಲಿಸಲಾಯಿತು. ಲಕ್ಷ್ಮೀಚಂದ್ರ ಬಲ್ಲಾಳರು ರಾಘವ ಬಲ್ಲಾಳರ ತೀರ್ಥರೂಪರಾಗಿದ್ದು, ಹವ್ಯಾಸಿ ಯಕ್ಷಗಾನಕ್ಷೇತ್ರದ ಪ್ರಸಿದ್ಧ ಹಿಮ್ಮೇಳ ಕಲಾವಿದರಾಗಿದ್ದರು. ಕೀತರ್ಿಶೇಷರಾದ ಅವರ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.
ಗುರುವಂದನೆ ಸಹಿತ ಪ್ರಶಸ್ತಿ ಸ್ವೀಕರಿಸಿದ ವಾಮದೇವ ಪುಣಿಂಚಿತ್ತಾಯ ಮತ್ತು ಸಬ್ಬಣಕೋಡಿ ರಾಮಭಟ್ ಅವರು ಕೃತಜ್ಞತೆ ಸಲ್ಲಿಸಿ ಮಾತನಾಡಿ 'ಕಲಾರಂಗದ ಕಲಿಕೆ ಮತ್ತು ಕಲಾಜೀವನದಲ್ಲಿ ಯಶಸ್ಸು ಪಡೆಯಬೇಕಿದ್ದರೆ ಗುರುಭಕ್ತಿ ಅತಿಮುಖ್ಯ. ಅತಿ ವೇಗದ ಪ್ರಚಾರ, ಪ್ರಸಿದ್ಧಿಗಿಂತ ತಾಳ್ಮೆಯ ಕಲಿಕೆ, ಸತತ ಅಧ್ಯಯನವೇ ಯಶಸ್ಸನ್ನು ತಂದೊದಗಿಸುತ್ತದೆ' ಎಂದರು. ಕಾರ್ಯಕ್ರಮದಲ್ಲಿ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 'ಯಕ್ಷಗಾನ ಕಲಾವಿದರು ಜನಪ್ರಿಯರಾಗುತ್ತಿರುವಂತೆಯೇ ಕಲೆ ಸೊರಗುತ್ತಿರುವುದನ್ನು ಬೊಟ್ಟುಮಾಡಿ, ಕಲಾ ಔಚಿತ್ಯ ಅರಿತ ಪ್ರಬುದ್ಧ ಪ್ರೇಕ್ಷಕರು ನಿಮರ್ಾಣಗೊಳ್ಳದೇ ಕಲಾಭ್ಯುದಯ ನಡೆಯದು ಎಂದರು. ತೆಂಕುತಿಟ್ಟಿನ ತವರು ನೆಲದ ಕಲಾಶ್ರೀಮಂತಿಕೆಯ ಪರಂಪರೆಯನ್ನು ಕಾಪಾಡುವ ಕೆಲಸ ಈ ನೆಲದಲ್ಲಿ ಪ್ರಾಮಾಣಿಕವಾಗಿ ನಡೆಯಬೇಕು ಮತ್ತು ಕಲೆಗೆ ಔಚಿತ್ಯ ಅರಿತು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಾಪಕ, ಕಲಾವಿದ ಯತೀಶ್ ರೈ ಮುಳ್ಳೇರಿಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಉಪನಯನ ಸಂಸ್ಕಾರ ನಡೆದ ಮನೆಯಂಗಳದಲ್ಲಿ ಊಟೋಪಚಾರದ ಬಳಿಕ ನಡೆದ ಬಯಲಾಟೋಪಾಸನೆಯಲ್ಲಿ ನೂರಾರು ಸಂಖ್ಯೆಯ ಜನರು ಪಾಲ್ಗೊಂಡರು.