ಕಣ್ಣೂರಿನಲ್ಲಿ ಐಸಿಸ್ ಸ್ಲೀಪರ್ ಸೆಲ್ ಕಾಯರ್ಾಚರಣೆ
ಕಾಸರಗೋಡು: ಒಂದೆಡೆ ಕೇರಳದಲ್ಲಿ ಉಗ್ರರ ಅಡ್ಡೆಗಳಿಲ್ಲ,ಸುರಕ್ಷಿತ ರಾಜ್ಯ ಎಂದು ರಾಜ್ಯ ಸರಕಾರ ಪದೇಪದೇ ಹೇಳುತ್ತಿದ್ದರೂ ಇದೀಗ ಆಘಾತಕಾರಿ ಮಾಹಿತಿ ಹೊರಬಂದಿದೆ. ಜಾಗತಿಕ ಉಗ್ರ ಸಂಘಟನೆ ಐಸಿಸ್ ನಂಟು ಹೊಂದಿರುವ ಕಣ್ಣೂರಿನ 20 ಮಂದಿ ವಿವಿಧ ಸಂಘಟನೆಗಳ ಹೆಸರಲ್ಲಿ ಕಾಯರ್ಾಚರಣೆ ನಡೆಸುತ್ತಿದ್ದು, ಯುವಕರನ್ನು ತನ್ನ ತೆಕ್ಕೆಗೆ ಸೇರಿಸುತ್ತಿರುವ ಬಗ್ಗೆ ಕೇರಳ ಗುಪ್ತಚರ ವಿಭಾಗಕ್ಕೆ ಖಚಿತ ಮಾಹಿತಿ ಲಭಿಸಿದೆ. ಈ ಮೂಲಕ ಕಣ್ಣೂರಿನಲ್ಲಿ ಐಸಿಸ್ ಸ್ಲೀಪರ್ ಸೆಲ್ ಕಾಯರ್ಾಚರಿಸುತ್ತಿರುವುದು ಖಚಿತಗೊಂಡಿದೆ.
ಕೇರಳದ ಯುವಕರನ್ನು ಐಸಿಸ್?ಗೆ ಸೇರ್ಪಡೆಗೊಳಿಸಲು ಈ ತಂಡ ರಹಸ್ಯ ಕಾರ್ಯತಂತ್ರ ರೂಪಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿ ಅನ್ವಯ ಗುಪ್ತಚರ ವಿಭಾಗ ಕಣ್ಣೂರು ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾರಂಭಿಸಿದೆ. ಈ 20 ಮಂದಿ ಮತ್ತು ಅವರ ಸಂಘಟನೆ, ಚಟುವಟಿಕೆಗಳ ಪತ್ತೆ ಕಾರ್ಯ ಆರಂಭಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಪಡನ್ನ, ಕಣ್ಣೂರು ಜಿಲ್ಲೆಯ ಕನಕಮಲೆ ಹಾಗೂ ಬೆಹರೇನ್ ಕೇಂದ್ರೀಕರಿಸಿ ಕೇರಳದ ಯುವಕ, ಯುವತಿಯರನ್ನು ಐಸಿಸ್?ಗೆ ಸೇರ್ಪಡೆಗೊಳಿಸುವ ಜಾಲದ ಪ್ರಧಾನ ಸೂತ್ರಧಾರ ಕಣ್ಣೂರು ನಿವಾಸಿ ಹಂಸಾ ಎಂಬುವನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಈತ ನೀಡಿದ ಮಾಹಿತಿ ಅನ್ವಯ ಕಣ್ಣೂರು ಜಿಲ್ಲೆಯ ಇತರ ಐವರನ್ನು ಬಂಧಿಸಲಾಗಿತ್ತು. ಈ ಐವರು ತುಕರ್ಿಯ ಐಸಿಸ್ ಕೇಂದ್ರಕ್ಕೆ ಸಾಗುವ ದಾರಿ ಮಧ್ಯೆ ತುಕರ್ಿ ಪೊಲೀಸರು ಇವರನ್ನು ತಡೆದು ಭಾರತಕ್ಕೆ ಗಡೀಪಾರು ಮಾಡಿದ್ದರು. ನಂತರ ವಳಪಟ್ಟಣ ಪೊಲೀಸರು ಇವರನ್ನು ಬಂಧಿಸಿದ್ದರು.
ಕೇರಳದಲ್ಲಿ ವಿವಿಧ ಸಂಘಟನೆಗಳ ಹೆಸರಲ್ಲಿ ಐಸಿಸ್ ನಂಟು ಹೊಂದಿರುವ 20 ಮಂದಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹಂಸಾ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಎನ್?ಐಎ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ವಿದೇಶಕ್ಕೂ ವಿಸ್ತರಿಸುವ ಸಾಧ್ಯತೆಯಿದೆ.