ಪೆರ್ಲದಲ್ಲಿ ಸೃಜನೋತ್ಸವ
ಪೆರ್ಲ: ಬೇಂಗಪದವು ಶ್ರೀಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ -ಶಿಕ್ಷಕ ಸಂಘದ ಆಶ್ರಯದಲ್ಲಿ ಶಾಲಾ ಮಕ್ಕಳ ಸೃಜನಾತ್ಮಕತೆಗೆ ಪ್ರೇರಣೆ ನೀಡುವ ವಿಶೇಷ ಕಾರ್ಯಕ್ರಮ ಸೃಜನೋತ್ಸವದ ಉದ್ಘಾಟನೆ ಮಂಗಳವಾರ ಪೆರ್ಲ ಶ್ರೀ ಭಾರತೀ ಸದನದಲ್ಲಿ ನಡೆಯಿತು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ ಕುಲಾಲ್ ಕಲರೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ, ನಾಲಂದ ಕಾಲೇಜಿನ ಆಡಳಿತ ಅಧಿಕಾರಿ ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬೇಂಗಪದವು ಶಾಲೆಯ ಮಕ್ಕಳು ಹಳ್ಳಿಯ ಮಣ್ಣಿನಲ್ಲಿ ಕಲಿತವರು. ಯಾವುದೇ ಸಂಕೋಚ , ಭಯವಿಲ್ಲದೆ ಮುಕ್ತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಯಾವ ಆಂಗ್ಲ ಮಾಧ್ಯಮ ಶಾಲೆಗಳು ಕೂಡಾ ನಮ್ಮ ಸಂಸ್ಕೃತಿಯನ್ನು ಕಲಿಸಲು ಸಾಧ್ಯವಿಲ್ಲ. ಈ ಮಕ್ಕಳನ್ನೂ ಮಕ್ಕಳ ಹಿಂದೆ ಮಾರ್ಗದರ್ಶಕತರಾಗಿ ಸಹಕರಿಸಿರುವಂತಹ ಗುರುವೃಂದದವರನ್ನೂ ಅಭಿನಂದಿಸಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಬಿ. ಚೆಟ್ಟಿಯಾರ್ ,ಶಾಲಾ ಮಾತೃಸಂಘದ ಅಧ್ಯಕ್ಷೆ ರೇಖಾ ಕುರೆಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಸ್ವಾಗತಿಸಿ, ವಂದಿಸಿದರು.