ಕುಂಬಳೆಯಲ್ಲಿ ಬೀದಿ ದೀಪ ಸ್ಥಾಪಿಸಲು ಬಿಜೆಪಿ ಆಗ್ರಹ
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ನ ಕೊಯಿಪ್ಪಾಡಿ ಕಡಪ್ಪುರಂನಿಂದ ಕೊಪ್ಪಳದ ವರೆಗಿನ ರಸ್ತೆ ಬದಿಗಳಲ್ಲಿ ಬೀದಿ ದೀಪ ಸ್ಥಾಪಿಸಬೇಕೆಂದು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಸಭೆಯು ಆಗ್ರಹಿಸಿದೆ. ಈ ರಸ್ತೆಯಲ್ಲಿ ಬೀದಿ ದೀಪ ಇಲ್ಲದ ಕಾರಣ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಭೆಯು ಅಭಿಪ್ರಾಯಪಟ್ಟಿದೆ.
ಮರಳು ಮಾಫಿಯಾಗಳಿಗೂ ಕತ್ತಲು ವರದಾನವಾಗಿದೆ. ಪೊಲೀಸರ ಪೆಟ್ರೋಲಿಂಗ್ ಕೂಡ ಇಲ್ಲದ ಕಾರಣ ಪಾದಚಾರಿಗಳು ಆತಂಕದಿಂದ ನಡೆದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೀದಿ ದೀಪ ಅಳವಡಿಸಲು ಮುಂದಾಗಬೇಕೆಂದು ಬಿಜೆಪಿ ಪಂಚಾಯತ್ ಸಮಿತಿಯು ಒತ್ತಾಯಿಸಿದೆ.
ಕುಂಬಳೆ ಬಿಜೆಪಿ ಕಚೇರಿಯಲ್ಲಿ ಜರಗಿದ ಪಕ್ಷದ ಸಭೆಯಲ್ಲಿ ಪಂಚಾಯತಿ ಸಮಿತಿಯ ಅಧ್ಯಕ್ಷ ಕೆ.ಶಂಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದಶರ್ಿ ಮುರಳೀಧರ ಯಾದವ್ ನಾಯ್ಕಾಪು, ಮಂಡಲ ಉಪಾಧ್ಯಕ್ಷ ಕೆ.ವಿನೋದನ್ ಕಡಪ್ಪುರ, ಜಿಲ್ಲಾ ಸಮಿತಿಯ ಸದಸ್ಯ ರಮೇಶ್ ಭಟ್ ಕುಂಬಳೆ, ಪಂಚಾಯತಿ ಘಟಕದ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ, ಪಂಚಾಯತಿ ಸದಸ್ಯರಾದ ಕೆ.ಸುಧಾಕರ ಕಾಮತ್, ಕೆ.ಸುಜಿತ್ ರೈ, ಹರೀಶ್ ಗಟ್ಟಿ ಮಾತನಾಡಿದರು. ಗೋಪಾಲ ಪೂಜಾರಿ ಸ್ವಾಗತಿಸಿ, ಶಶಿ ಕುಂಬಳೆ ವಂದಿಸಿದರು.