ಸ್ವಾಮೀಜಿಸ್ ಹೈಯರ್ಸೆಕೆಂಡರಿ ಶಾಲೆ: ಡಿ.28ರಂದು ರಜತ ಮಹೋತ್ಸವ ಸಮಾರೋಪ
ಕಾಸರಗೋಡು: ಎಡನೀರು ಸ್ವಾಮೀಜಿಸ್ ಹೈಯರ್ ಸೆಕೆಂಡರಿ ಶಾಲೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಡಿ.28ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲೆಯಲ್ಲಿ ಹಮ್ಮಿಕೊಂಡಿರುವುದಾಗಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಮಂಗಳವಾರ ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಾಜ್ಯ ಸಾಂಸ್ಕೃತಿಕ, ಪರಿಶಿಷ್ಟ ಜಾತಿ ಮತ್ತು ವರ್ಗ ಅಭಿವೃದ್ಧಿ ಇಲಾಖೆ ಸಚಿವ ಎ.ಕೆ.ಬಾಲನ್ ಉದ್ಘಾಟಿಸುವರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ಅಂಗವಾಗಿ ನಿಮರ್ಿಸಿದ ನೂತನ ಕಟ್ಟಡದ ಉದ್ಘಾಟನೆ ನಡೆಯಲಿದೆ.
ಕಾಸರಗೋಡು ಸಂಸದ ಪಿ.ಕರುಣಾಕರನ್, ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್, ಜಿ.ಪಂ. ಸದಸ್ಯ, ನ್ಯಾಯವಾದಿ ಕೆ.ಶ್ರೀಕಾಂತ್, ಚೆಂಗಳ ಗ್ರಾಮ ಪಂ. ಅಧ್ಯಕ್ಷೆ ಶಾಹೀನಾ ಸಲೀಂ, ಗೋಕುಲ ಕೃಷ್ಣನ್, ನ್ಯಾಯವಾದಿ ಐ.ವಿ.ಭಟ್, ಇ.ಅಬೂಬಕ್ಕರ್, ಸೂರ್ಯನಾರಾಯಣ ಭಟ್, ಕೆ.ಎಸ್.ಕೇಶವ ನಂಬೂದಿರಿ, ಎಂ.ಗಂಗಾಧರ್, ಸಜಿ ಪಿ.ಮ್ಯಾಥ್ಯೂ ಮತ್ತಿತರರು ಭಾಗವಹಿಸುವರು. ಶಾಲಾ ಪ್ರಾಂಶುಪಾಲ ಎ.ಎನ್.ನಾರಾಯಣನ್ ವರದಿ ನೀಡುವರು.
ಅಲ್ಲದೆ ಬೆಳಿಗ್ಗೆ 9ಗಂಟೆಗೆ ಕಾರ್ಯಕ್ರಮಕ್ಕೆ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡುವರು. ಬಳಿಕ ನಾಸ್ಟಾಲ್ಚಿಯಾ - 2017 ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಡಿವೈಎಸ್ಪಿ ಹರೀಶ್ಚಂದ್ರ ನಾಯ್ಕ, ಗುರುಪ್ರಸಾದ್ ಅಗ್ಗಿತ್ತಾಯ, ರತೀಶ್ ಕುಮಾರ್, ವಾಸುದೇವ ಐ.ಕೆ., ಕೆ.ಮಾಧವ ಹೇರಳ, ಬಾಲಕೃಷ್ಣ ವೊಕರ್ೂಡ್ಲು , ವೇಣುಗೋಪಾಲ, ವಿಷ್ಣುಮೂತರ್ಿ ಕಕ್ಕಿಲ್ಲಾಯ ಪಾಲ್ಗೊಳ್ಳುವರು.
ನಂತರ ನಡೆಯುವ ಕಾರ್ಯಕ್ರಮದಲ್ಲಿ ಪ್ರಾನ್ಸಿಸ್ ಕೆ.ಸಿ., ಸುಕುಮಾರನ್, ಶ್ರೀಜಾ ಟಿ.ಎಂ., ಶಾಂತಾಕುಮಾರಿ ಟೀಚರ್, ಅನಂತ ಪದ್ಮನಾಭ, ವಿಷ್ಣು ಭಟ್, ಶಾರದಾ ಟೀಚರ್, ವಸಂತಕುಮಾರಿ ಟಿ.ಕೆ., ವೆಂಕಟ ಭಟ್, ಶ್ಯಾಮಲಾ ವಿ.ವಿ. ಭಾಗವಹಿಸುವರು. ರಜತ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಂಜೆ 6 ಗಂಟೆಗೆ ಕಲ್ಚರಲ್ ನೈಟ್ ಕಾರ್ಯಕ್ರಮ ಜರಗಲಿದೆ.
ಸುದ್ದಿಗೋಷ್ಠಿಯಲ್ಲಿ ಸೂರ್ಯನಾರಾಯಣ ಭಟ್, ಎಂ.ಗಂಗಾಧರನ್ ಮಾಸ್ತರ್, ಪ್ರಾನ್ಸಿಸ್ ಕೆ.ಸಿ., ವಾಸುದೇವ ಐ.ಕೆ., ಕೆ.ಗಂಗಾಧರ್ ಉಪಸ್ಥಿತರಿದ್ದರು.