ತೆರಿಗೆ ವಂಚನೆ: ಮಲಯಾಳಂ ನಟ ಫಹಾದ್ ಫಾಸಿಲ್ ಬಂಧನ
ತಿರುವನಂತಪುರಂ: ದುಬಾರಿ ಕಾರಿನ ತೆರಿಗೆ ಉಳಿಸುವ ಸಲುವಾಗಿ ನಕಲಿ ವಿಳಾಸ ನೀಡಿ ಪುದುಚೇರಿಯಲ್ಲಿ ಕಾರು ಖರೀದಿಸಿದ್ದ ಮಲಯಾಳಂ ನಟ ಫಹಾದ್ ಫಾಸಿಲ್ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಫಹಾದ್ ಫಾಸಿಲ್ ಜಾಮೀನು ಪಡೆದು ಹೊರ ಬಂದ ಕೂಡಲೇ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಕಳೆದ ವಾರ ಅಲಪುಳಾ ಕೋಟರ್್ ನಿಂದ 50 ಸಾವಿರ ಬಾಂಡ್ ಹಾಗೂ ಇಬ್ಬರ ಶೂರಿಟಿ ಪಡೆದು ಜಾಮೀನು ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಫಹಾದ್ ಹೇಳಿಕೆ ನೀಡಿದ್ದು ಈ ಹೇಳಿಕೆ ಪರಿಶೀಲನೆ ನಂತರ ಆತನ ವಿರುದ್ಧ ಪ್ರಕರಣ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್ ಕ್ಲಾಸ್ ಬೆಂಜ್ ಕಾರ್ ಖರೀದಿಸುವ ಸಲುವಾಗಿ ಕೇರಳ ಮೂಲದ ಫಹಾದ್ ಫಾಸಿಲ್ ಅಲಪುಳಾ ವಿಳಾಸ ನೀಡಿ ಪುದುಚೇರಿಯಲ್ಲಿ ಕಾರು ಖರೀದಿಸಿದ್ದರು. ಇನ್ನು ಕೇರಳದಲ್ಲಿ 20 ಲಕ್ಷ ರೂ. ಮೇಲ್ಪಟ್ಟ ವಿಲಾಸಿ ಕಾರು ಖರೀದಿಸುವುದಕ್ಕೆ ಶೇ.20ರಷ್ಟು ತೆರಿಗೆ ಪಾವತಿಸಬೇಕಿದೆ. ಈ ತೆರಿಗೆಯನ್ನು ತಪ್ಪಿಸುವ ಸಲುವಾಗಿ ಫಹಾದ್ ರೀತಿ ಮಾಡಿದ್ದರು.