HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಪದ್ಮಶಾಲಿ,ದೇವಾಂಗ ಸಮುದಾಯ ಕುಟುಂಬ ಸಂಗಮ
    ಕುಂಬಳೆ: ಕುಟುಂಬ ಸಂಗಮಗಳಿಂದ ಸಮಾಜದ ವಿಕಾಸ ಸಾಧ್ಯವೆಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
   ಕುಂಬಳೆ ಸಮೀಪದ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಜರಗಿದ ಪದ್ಮಶಾಲಿಯ, ದೇವಾಂಗ ಸಮುದಾಯದ ಐದು ನಗರ ಸಮಾಜ ಬಾಂಧವರ ಬೃಹತ್ ಕುಟುಂಬ ಸಂಗಮ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿನೀಡಿ ಕಾರ್ಯಕ್ರಮಕ್ಕೆ ಶುಭ ಕೋರಿ ಆಶೀರ್ವಚಿಸಿದರು.
   ಸಮಾರಂಭದಲ್ಲಿ ಭಾರತೀಯ ಕುಟುಂಬ ಸಂಕಲ್ಪ ಎಂಬ ವಿಷಯದ ಬಗ್ಗೆ ವಿಶೇಷೋಪನ್ಯಾಸ ನೀಡಿದ ಹಿಂದೂ ಐಕ್ಯವೇದಿಯ ಜಿಲ್ಲಾ ಸಂಘಟನಾ ಕಾರ್ಯದಶರ್ಿ ರಾಜನ್ ಮುಳಿಯಾರು ಈ ಸಂದರ್ಭ ಮಾತನಾಡಿ, ಸುಂದರ, ಸುಸಂಸ್ಕೃತವಾದ ಸಮಾಜ ರೂಪುಗೊಳ್ಳಬೇಕಿದ್ದಲ್ಲಿ ಮಾತೆಯರಲ್ಲಿ ಧಾಮರ್ಿಕ ಪ್ರಜ್ಞೆ ಹೇರಳವಾಗಿರಬೇಕು. ಮಾತೆಯರಲ್ಲಿ ಧಾಮರ್ಿಕ ಪ್ರಜ್ಞೆಯಿಲ್ಲದಿದ್ದಲ್ಲಿ ಸಮಾಜವು ಅಧ:ಪತನದತ್ತ ಸಾಗುವುದೆಂದು ತಿಳಿಸಿದರು.
  ಸಮಾಜದಲ್ಲಿ ಧಾಮರ್ಿಕತೆಯ ಕೊರತೆಯೇ ಅನಾಚಾರ, ಅಕ್ರಮಗಳು ಬೆಳೆಯಲು ಮುಖ್ಯ ಕಾರಣ. ಪ್ರತೀ ವ್ಯಕ್ತಿಗೆ ಆತನ ಮನೆಯಿಂದ, ಮುಖ್ಯವಾಗಿ ಎಳವೆಯಲ್ಲಿ ಮಾತೆಯರಿಂದ ಧಾಮರ್ಿಕ ಪ್ರಜ್ಞೆ ದೊರಕುವಂತಾಗಬೇಕು. ಮಕ್ಕಳಲ್ಲಿ ಧಾಮರ್ಿಕ ಮೌಲ್ಯ ಬೆಳೆಯಲು ಅದು ಮಾತೆಯರಿಂದಲೇ ಲಭ್ಯವಾಗಬೇಕು. ಆದ್ದರಿಂದ ಸಮಾಜ ಪರಿವರ್ತನೆಯಲ್ಲಿ ಮಾತೆಯರ ಪಾತ್ರ ಅತೀ ಮುಖ್ಯ ಎಂದರು. ಮನೆಯು ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುವ ಕೇಂದ್ರವಾಗಬೇಕು. ಮನೆ ಹಾಗೂ ಮನಸ್ಸು ಶುಧ್ದವಾಗಿದ್ದಲ್ಲಿ ಮಾತ್ರವೇ ಸಾಮಾಜಿಕ ಸೌಖ್ಯ ಸಾಧ್ಯವಾದೀತು. ಮನೆಗಳಲ್ಲಿ ಭಜನೆ, ಹೋಮ ಸಹಿತ ಧಾಮರ್ಿಕ ಕಾರ್ಯಗಳು ನಡೆಯಬೇಕೆಂದು ಕರೆಯಿತ್ತರು.
   ಮುಖ್ಯ ಅತಿಥಿಗಳಾಗಿ 14 ನಗರ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ.ಕೆ. ಭಾಸ್ಕರನ್ ಉಪಸ್ಥಿತರಿದ್ದು ಮಾತನಾಡಿದರು. 14 ನಗರ ಕ್ಷೇತ್ರ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದಶರ್ಿ ಪುರುಷೋತ್ತಮನ್, ಪದ್ಮಶಾಲಿಯ ಸಂಘದ ಕುಂಬಳೆ ಶಾಖೆ ಅಧ್ಯಕ್ಷ ಪಿ. ಕೃಷ್ಣನ್, ಐದು ನಗರ ಸಮಿತಿಯ ಅಧಕ್ಷ ಕೆ. ವೇಣುಗೋಪಾಲ್, ಕಾರ್ಯದಶರ್ಿ ಕ್ಷಿತಿ ಮಮ್ಲೂರು, ವಿವಿಧ ಕ್ಷೇತ್ರಗಳ ಅಧ್ಯಕ್ಷರಾದ ಸಿ. ರಾಮಚಂದ್ರ, ಹರೀಶ ಕೋಟೆಕ್ಕಣಿ, ಎಂ. ಮಧುಸೂದನನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದರು. ಕ್ಷೇತ್ರಗಳ ಆಚಾರ ವರ್ಗವದವರಾದ ಚಂದ್ರಶೇಖರ ಮೂತೆ ಚೆಟ್ಟಿಯಾರ್, ಬಟ್ಯ ಮೂತೆ ಚೆಟ್ಟಿಯಾರ್, ರಾಘವ ಮೂತೆ ಚೆಟ್ಟಿಯಾರ್, ಚಂದ್ರಶೇಖರ ಎಳೆ ಚೆಟ್ಟಿಯಾರ್ ಮೊದಲಾದವರು ಉಪಸ್ಥಿತರಿದ್ದು, ಆಶೀವರ್ಾದದ ನುಡಿಗಳನ್ನಾಡಿದರು.
   ನಾರಾಯಣಮಂಗಲ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ. ಗೋಪಾಲ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಕುಟುಂಬ ಸಂಗಮದ ಸಂಚಾಲಕ ರಾಮಚಂದ್ರ ತೊಕ್ಕೋಟು ಸ್ವಾಗತಿಸಿ, ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಇಬ್ಬರು ಸಾಧಕರಾದ ಗಣೇಶ ಕಾಸರಗೋಡು ಹಾಗೂ ಡಾ. ನಯನಾ ದೇವಾಂಗ್ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಗಳಿಸಿದ ಶ್ರೀ ಕ್ಷೇತ್ರದ ಸದಸ್ಯರೂ, ಸಮಾಜದ ಮಹಾ ಪೋಷಕರೂ, ಕೊಡುಗೈ ದಾನಿಯೂ ಆಗಿರುವ ಬೆಂಗಳೂರು ಸ್ಪಾನ್ ಪ್ರಿಂಟಸರ್್ನ ಕೆ. ನಾರಾಯಣ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕಾಸರಗೋಡು, ಕಾರಡ್ಕ, ಕುಂಬಳೆ, ಮಂಜೇಶ್ವರ, ಪಣಂಬೂರು  ಐದು ನಗರ ವ್ಯಾಪ್ತಿಗಳ ನೂರಾರು ಮಂದಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
    ಬೆಳಿಗ್ಗಿನಿಂದ ಸಂಜೆ ವರೆಗೆ ವಿವಿಧ ವಯೋಮಿತಿಗಳಲ್ಲಿ ಹಾಗೂ ಮುಕ್ತವಾಗಿ ಕ್ವಿಜ್, ಆದರ್ಶ ಮನೆ, ಆಶುಭಾಷಣ, ಭಕ್ತಿಗೀತೆ, ಅದೃಷ್ಟ ಕುಚರ್ಿ, ಅದೃಷ್ಟ ವೃತ್ತ, ಪಂಚ ಕುಸ್ತಿ, ನೀರು ಕುಡಿಯುವುದು, ಬಲೂನು ಒಡೆಯುವುದು, ಪುಟಾಣಿಯರಿಗಾಗಿ ನಾಣ್ಯ ಓಟ, ಸಂಗೀತ ಕುಚರ್ಿ, ಕಪ್ಪೆ ಜಿಗಿತ, ಅಡಿಕೆ ಹೆಕ್ಕುವುದು ಸಹಿತ ಸ್ಪಧರ್ೆಗಳು ಜರಗಿದುವು. ರವಿ ನಾಯ್ಕಾಪು, ಸ್ನೇಹಲತಾ ದಿವಾಕರ್ ಹಾಗೂ ಭಾಸ್ಕರ ಎನ್ ಸ್ಪಧರ್ೆಗಳನ್ನು ನಡೆಸಿದರು. ರಾಮು ಮಾಯಿಪ್ಪಾಡಿ, ದೇವದಾಸ್.ಕೆ ಹಾಗೂ ರಾಜೇಶ್ ನೀಲೇಶ್ವರ ವಿವಿಧ ಸ್ಪಧರ್ೆಗಳಿಗೆ ತೀಪರ್ುಗಾರರಾಗಿ ಸಹಕರಿಸಿದರು. ಸದಾಶಿವ ಮವ್ವಾರು, ಎಂ. ನಾರಾಯಣ, ಗೋಪಾಲ ಮಾಸ್ತರ್, ದಯಾನಂದ, ಚಂದ್ರ ಕುಂಟಂಗೇರಡ್ಕ, ಪ್ರಭಾಕರ ಕೂಡ್ಲು, ದಿನೇಶ, ಬಿ.ಪಿ. ನಾರಾಯಣ, ಅನಿಲ್ ನಾಯ್ಕಾಪು, ಪ್ರಮೋದ್, ಪ್ರಕಾಶ, ಉತ್ತಮ್ ರಾಜ್ ಮೊದಲಾದವರು ನೇತೃತ್ವ ನೀಡಿದರು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries