ಉಗ್ರ ಸಯೀದ್ ಜತೆ ವೇದಿಕೆ ಹಂಚಿಕೊಂಡ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪ್ಯಾಲೆಸ್ತೀನ್
ಪ್ಯಾಲೆಸ್ತೀನ್/ನವದೆಹಲಿ: ತನ್ನ ರಾಯಭಾರಿ ವಲೀದ್ ಅಬು ಅಲೀ ಮುಂಬೈ ದಾಳಿ ರೂವಾರಿ ಹಾಗೂ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಪ್ಯಾಲೆಸ್ತೀನ್ ವಿಷಾದ ವ್ಯಕ್ತಪಡಿಸಿದ್ದು ರಾಯಭಾರಿಯನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಂಡಿದೆ.
ಉಗ್ರ ಹಫೀಜ್ ಸಯೀದ್ ಏರ್ಪಡಿಸಿದ್ದ ಯರ್ಾಲಿಯಲ್ಲಿ ತನ್ನ ರಾಯಭಾರಿ ಉಪಸ್ಥಿತರಿದ್ದರೆಂಬ ವಿಷಯದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ತಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪ್ಯಾಲೆಸ್ತೀನ್ ಭಾರತ ಸಕರ್ಾರಕ್ಕೆ ಭರವಸೆ ನೀಡುವುದಾಗಿ ಈ ಬಗ್ಗೆ ವಿದೇಶ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯನ್ನು ಹೊರಡಿಸಿದೆ.
ಪಾಕಿಸ್ತಾನದಲ್ಲಿನ ಪ್ಯಾಲೆಸ್ತೀನ್ ರಾಯಭಾರಿ ವಲೀದ್ ಅಬು ಅಲೀ ಉಗ್ರನ ಜತೆ ವೇದಿಕೆ ಹಂಚಿಕೊಂಡಿದ್ದಕ್ಕೆ ತೀವ್ರವಾಗಿ ಖಂಡಿಸಿದ್ದ ಭಾರತ ಸಕರ್ಾರ ಅತ್ಯಂತ ಕಠಿಣ ಪದಗಳನ್ನು ಒಳಗೊಂಡ ಖಂಡನಾ ಪತ್ರವನ್ನು ಪ್ಯಾಲೆಸ್ತೀನ್ ಸಕರ್ಾರಕ್ಕೆ ರವಾನಿಸಿತ್ತು.
ಹಫೀಜ್ ಸಯೀದ್ ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯೇ ಪರಿಗಣಿಸಿದ್ದು ಇಂತಹ ವ್ಯಕ್ತಿಯೊಂದಿಗೆ ಪ್ಯಾಲೆಸ್ತೀನ್ ರಾಯಭಾರಿ ಸಖ್ಯ ಹೊಂದುವುದು ಎಷ್ಟು ಮಾತ್ರಕ್ಕೂ ನಮಗೆ ಒಪ್ಪಿತವಾದುದಲ್ಲ ಎಂದು ಪ್ಯಾಲೆಸ್ತೀನ್ ಸಕರ್ಾರಕ್ಕೆ ಭಾರತ ಕಠಿಣವಾಗಿ ಹೇಳಿತ್ತು.
ಪ್ಯಾಲೆಸ್ತೀನ್ ನ ಪಾಕಿಸ್ತಾನ ರಾಯಭಾರಿ ವಲೀದ್ ಅಬು ಅಲೀ ಅವರು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜೆಯುಡಿ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ನೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗೆಗಿನ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಇದೀಗ ಈ ವಿಚಾರ ಭಾರತ ಸಕರ್ಾರದ ಗಮನಕ್ಕೂ ಬಂದಿದ್ದು, ಕೇಂದ್ರ ವಿದೇಶಾಂಗ ಇಲಾಖೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.