HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಕಳಿಯಾಟದ ಸಡಗರದಲ್ಲಿ ಧರ್ಮ ನ್ಯಾಯಾಲಯ ಶ್ರೀಕ್ಷೇತ್ರ ಕಾನತ್ತೂರು   
     ಮುಳ್ಳೇರಿಯ:  ಪಾರಂಪರಿಕ ವ್ಯವಸ್ಥೆ,ನಂಬಿಕೆ, ಜೀವನಕ್ರಮಗಳು ಸಂಪೂರ್ಣ ಬದಲಾಗಿ ಆಧುನಿಕತೆಗೆ ಒಂದೆಡೆ ಜಗತ್ತು ಹೊರಳುತ್ತಿರುವ ಮಧ್ಯೆ ತುಳುನಾಡಿನ ವಿಶಿಷ್ಟ ನಂಬಿಕೆಗಳಲ್ಲಿ ಇನ್ನೂ ಹಲವು ಜೀವಂತವಾಗಿ ಮುಂದುವರಿಯುತ್ತಿರುವುದು ಮಣ್ಣಿನ ಪ್ರೇಮ, ಅಭಿಮಾನದ ಸಂಕೇತ. ಇಲ್ಲಿಯ ಜನರ ಜೀವನ ಪ್ರೀತಿ, ನಂಬಿಕೆ-ನಡವಳಿಕೆಗಳು ಬದುಕಿನ ಪ್ರಮುಖ ಭಾಗವಾಗಿ ಮುಂದುವರಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಧರ್ಮದ ನೆಲೆಗಟ್ಟಿನ ಸಮಾಜ ನಿಮರ್ಾಣದ ಲಕ್ಷ್ಯದ ಕಾರಣ ಗಡಿನಾಡು ಕಾಸರಗೋಡಿನ ಕಾನತ್ತೂರು ನಾಲ್ವರ್ ಕ್ಷೇತ್ರ ನ್ಯಾಯ ದೇಗುಲವಾಗಿ ಹೆಸರುಪಡೆದಿದೆ.
   ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾಷರ್ಿಕ ಕಳಿಯಾಟ ಮಹೋತ್ಸವ ಡಿ. 28ರಿಂದ ಜ. 1ರ ವರೆಗೆ ಜರುಗಲಿರುವುದು. ಕೇರಳ-ಕನರ್ಾಟಕದ ಪ್ರಸಿದ್ಧ ಹಾಗೂ ಅತ್ಯಂತ ಕಾರಣಿಕದಿಂದ ಕೂಡಿದ ದೈವಿಕ ಕ್ಷೇತ್ರವಾಗಿ ಖ್ಯಾತಿ ಗಳಿಸಿರುವ ಕ್ಷೇತ್ರ ಪಯರ್ಾಯ ಪರಮೋನ್ನತ ನ್ಯಾಯಸ್ಥಾನವಾಗಿ ಹೆಸರು ಪಡೆದುಕೊಂಡಿದೆ. 
   ನಾಲ್ವರ್ ದೈವಗಳು ಹಾಗೂ ತುಳುನಾಡಿನ ರಾಜದೈವಗಳ ಸಂಗಮವಾಗಿ ಮಹೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.
ಕನಕ ಮಹಷರ್ಿಯ ತಪೋಭೂಮಿಯಿಂದಾಗಿ ಈ ಪ್ರದೇಶಕ್ಕೆ ಕನಕಪುರ ಎಂಬ ಹೆಸರು ಮುಂದೆ ಕನಕತ್ತೂರು ಹಾಗೂ ಕಾನತ್ತೂರು ಆಗಿ ಬದಲಾಗಿದೆಯೆಂದು ಪ್ರತೀತಿ. ಶ್ರೀರಕ್ತೇಶ್ವರೀ, ಶ್ರೀವಿಷ್ಣುಮೂತರ್ಿ, ಶ್ರೀ ಚಾಮುಂಡಿ ಹಾಗೂ ಶ್ರೀ ಪಂಜುಲರ್ಿ ಎಂಬ ನಾಲ್ಕು ಮಹಾನ್ ದೈವಗಳು ಇಲ್ಲಿ ಆವಾಸಗೊಂಡಿರುವುದರಿಂದಲೇ ಈ ತಾಣಕ್ಕೆ ನಾಲ್ವರ್ ದೈವಸ್ಥಾನ ಎಂಬ ಹೆಸರು ಹುಟ್ಟಿಕೊಂಡಿದೆ. ಜಾತಿ ಧರ್ಮ ಭೇದವಿಲ್ಲದೆ ಭಕ್ತಾದಿಗಳು ಇಲ್ಲಿಗಾಗಮಿಸುತ್ತಾರೆ. ಕಳಿಯಾಟ ಸಂದರ್ಭ ಪ್ರೇತಗಳ ವಿಮೋಚನೆಗಾಗಿ ನೂರಾರು ಮಂದಿ ಬಂದು ಸೇರುತ್ತಾರೆ. ವರ್ಷದಲ್ಲಿ 2ರಿಂದ 3ಸಾವಿರ ವ್ಯಾಜ್ಯಗಳಿಗೆ ಇಲ್ಲಿ ಪರಿಹಾರ ಕಲ್ಪಿಸಲಾಗುತ್ತಿರುವುದರಿಂದಲೇ ಇದು ನ್ಯಾಯ ದೇಗುಲವಾಗಿ ಪರಿಗಣಿಸಲ್ಪಟ್ಟಿದೆ.
    28ರಿಂದ ಕಳಿಯಾಟ:
   ಪ್ರತಿ ವರ್ಷ ಧನು ಮಾಸ 12ರಿಂದ 18ರ(ಡಿ. 28ರಿಂದ ಜ. 1) ವರೆಗೆ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾಷರ್ಿಕ ಕಳಿಯಾಟ ಮಹೋತ್ಸವ ನಡೆದು ಬರುತ್ತಿದೆ. ಡಿ. 27ರಂದು ಸಂಜೆ ಶ್ರೀನಾಲ್ವರ್ ದೈವಸ್ಥಾನದ ಸನ್ನಿಧಿಗಳಾದ ಕೊಟ್ಟಾರಂ, ಪಡಿಪ್ಪುರ, ಕಳರಿವೀಡ್, ಕಾವುಗಳಲ್ಲಿ ತಂತ್ರಿವರ್ಯತ ನೇತೃತ್ವದಲ್ಲಿ ಶುದ್ಧಿ ಕಲಶ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಳಿಯಾಟಕ್ಕೆ ಚಾಲನೆ ನೀಡಲಾಯಿತು. 28ರಂದು ದೈವಕೋಲಧಾರಿಗಳಿಗೆ ಕರ್ತವ್ಯ ಹಂಚಿಕೆಯೊಂದಿಗೆ 29ರಂದು ಶ್ರೀಭಂಡಾರದ ಆಗಮನವಾಗಿ ಉತ್ಸವ ಆರಂಭಗೊಂಡಿತು. 
    ಹಲವು ಶತಮಾನಗಳ ಇತಿಹಾಸ ಹೊಂದಿರುವ ಸತ್ಯಸ್ಥಳದಲ್ಲಿ ಕೆಳಭಾಗದಲ್ಲಿ ಶ್ರೀನಾಲ್ವರ್ ದೈವಸ್ಥಾನ ನೆಲೆಗೊಂಡಿದ್ದರೆ, ದೈವಸ್ಥಾನದ ಪೂರ್ವಕ್ಕೆ ಎತ್ತರದ ಪ್ರದೇಶದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಶ್ರೀಸದಾಶಿವ ನೆಲೆಗೊಂಡು ಭಕ್ತಾದಿಗಳನ್ನು ಸಲಹುತ್ತಿದ್ದಾರೆ. ಭಕ್ತಿಭಾವದಿಂದ ಬೇಡಿದವರ, ಮನನೊಂದವರ ಆರ್ತನಾದಕ್ಕೆ ಅಭಯದಾತನಾಗಿ ಹಾಗೂ ಅಧರ್ಮದ ಹಾದಿಯಲ್ಲಿ ನಡೆಯುವವರು, ಸುಳ್ಳು, ವಂಚನೆಯೊಂದಿಗೆ ಈಶ್ವರನಿಂದನೆ ಮಾಡುವವರಿಗೆ ಶಿಕ್ಷೆ ಲಭಿಸಿದ ಅದೆಷ್ಟೋ ನಿದರ್ಶನಗಳಿವೆ. ಜಾತಿ ಧರ್ಮ ಭೇದವಿಲ್ಲದೆ ಭಕ್ತಾದಿಗಳು ಇಲ್ಲಿಗಾಗಮಿಸುತ್ತಾರೆ. ಕಳಿಯಾಟ ಸಂದರ್ಭ ಪ್ರೇತಗಳ ವಿಮೋಚನೆಗಾಗಿ ನೂರಾರು ಮಂದಿ ಬಂದು ಸೇರುತ್ತಾರೆ. ವರ್ಷದಲ್ಲಿ 2ರಿಂದ 3ಸಾವಿರ ವ್ಯಾಜ್ಯಗಳಿಗೆ ಇಲ್ಲಿ ಪರಿಹಾರ ಕಲ್ಪಿಸಲಾಗುತ್ತಿದೆ!
    ಕಾನತ್ತೂರು ಕ್ಷೇತ್ರ ಬರಿಯ ದೈವಸ್ಥಾನವಲ್ಲ. ನ್ಯಾಯ ದೇಗುಲವಾಗಿಯೂ ಪ್ರಸಿದ್ಧಿಗೆ ಕಾರಣವಾಗಿದೆ. ಅದೆಷ್ಟೋ ವ್ಯಾಜ್ಯ, ತಕರಾರುಗಳು ಇಲ್ಲಿ ಸೌಹಾರ್ದವಾಗಿ ತೀಪರ್ುಕಂಡುಕೊಳ್ಳಲಾಗಿದೆ.  ಒಡೆದು ಹೋದ ಹಲವು ಕುಟುಂಬಗಳು ಒಂದುಗೂಡಿದೆ. ಹೈಕೋಟರ್ು, ಸುಪ್ರೀಂ ಕೋಟುರ್  ಮೆಟ್ಟಿಲೇರಿದ ವ್ಯಾಜ್ಯಗಳಿಗೆ ಕಾನತ್ತೂರಿನ ಪುಣ್ಯದ ನೆಲದಲ್ಲಿ ಸೌಹಾರ್ದ ಪರಿಹಾರ ಲಭಿಸಿದೆ. ದ.ಕ ಜಿಲ್ಲೆಯ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಧರ್ಮಸ್ಥಳದಷ್ಟೇ ಭಕ್ತಿ ಗೌರವಾದರಗಳಿಂದ ಕಾನತ್ತೂರಿಗೆ ಭಕ್ತಾದಿಗಳು ಹರಿಕೆ ಹೊತ್ತು ಆಗಮಿಸುತ್ತಾರೆ. ಶ್ರೀಧರ್ಮಸ್ಥಳದಿಂದ ವರಾಹ(ಹಂದಿ)ಮೂಲಕ ಶ್ರೀ ಪಂಜುಲರ್ಿ ದೈವ ಸಂಚಾರ ಆರಂಭಿಸಿ ಯಾತ್ರೆಯ ನಡುವೆ ಶ್ರೀ ರಕ್ತೇಶ್ವರೀ,  ಶ್ರೀಚಾಮುಂಡಿ, ಶ್ರೀ ವಿಷ್ಣುಮೂತರ್ಿ ದೈವಗಳೊಂದಿಗೆ ಶತ್ರುಸಂಹಾರ ನಡೆಸುತ್ತಾ ಪೊವ್ವಲ್, ಬಾವಿಕೆರೆ, ಬೆದಿರ ಮುಂತಾದೆಡೆ ಅಧಿಪತ್ಯ ಸ್ಥಾಪಿಸಿ ಕುಂಡಂಕುಳಿ, ಎರಿಞಿಪುಯ ಹಾದಿಯಾಗಿ ಕಾನತ್ತೂರು ಆಗಮಿಸಿರುವುದಾಗಿ ಪ್ರತೀತಿ.
     ನ್ಯಾಯ ತೀಮರ್ಾನ ಹೀಗೆ:
   ವ್ಯಾಜ್ಯಗಳು ದೈವಸ್ಥಾನಕ್ಕೆ ಬಂದರೆ ಇಲ್ಲಿನ ಆಡಳಿತ ಮೊಕ್ತೇಸರರು ದೈವದ ಹೆಸರಲ್ಲಿ ಪ್ರತಿವಾದಿಯನ್ನು ಕ್ಷೇತ್ರಕ್ಕೆ ಕರೆಸುತ್ತಾರೆ. ನಿಗದಿತ ದಿನಾಂಕದಂದು ಎರಡೂ ಕಡೆಯವರು ಕ್ಷೇತ್ರದಲ್ಲಿ ಹಾಜರಾಗಿ ವಿಚಾರಣೆ ನಡೆಸಲಾಗುತ್ತದೆ. ವಾದ, ವಿವಾದ ಆಲಿಸಿ ಕೆಲವೊಂದು ನಿಬಂಧನೆಗಳೊಂದಿಗೆ ಆಡಳಿತ ಮೊಕ್ತೇಸರರು ತೀಪರ್ು ಕಲ್ಪಿಸುತ್ತಾರೆ. ದೈವ ಸನ್ನಿಧಿಯಿಂದ ಹೊರಬೀಳುವ ತೀರ್ಪನ್ನು ಎರಡೂ ಕಡೆಯವರು ಅಂಗೀಕರಿಸಬೇಕೆಂಬುದು ಅಲಿಖಿತ ಶಾಸನ. ಇಲ್ಲಿನ ಪುದುಕೋಡಿ  ನಾಯರ್ ತರವಾಡಿನವರಿಗೆ ದೈವಸ್ತಾನದ ಆಡಳಿತ ನಡೆಸುವ ಹಕ್ಕು ಪರಂಪರಾಗತವಾಗಿ ಪ್ರಾಪ್ತಿಯಾಗಿದೆ. ಪುದುಕೋಡಿ ತರವಾಡಿನ ಮೂರು ಶಾಖೆಗಳಿದ್ದು, ಒಂದೊಂದು ಶಾಖೆ ಪ್ರಮುಖರು ಮೂರು ವರ್ಷ ಕಾಲ ಪಯರ್ಾಯ ವ್ಯವಸ್ಥೆಯಡಿ ಆಡಳಿತ ಹೊಣೆ ವಹಿಸಿಕೊಳ್ಳುತ್ತಿದ್ದಾರೆ.ಪ್ರಸ್ತುತ ಮ್ಯಾನೆಜಿಂಗ್ ಟ್ರಸ್ಟಿ ಆಗಿ ಕೆ.ಪಿ. ಭಾಸ್ಕರನ್ ನಾಯರ್ ಆಡಳಿತ ಚುಕ್ಕಾಣಿ ವಹಿಸಿಕೊಂಡಿದ್ದಾರೆ.
   ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಡಿ. 31ರಂದು ಬೆಳಗ್ಗೆ 9ಕ್ಕೆ ಶ್ರೀ ರಕ್ತೇಶ್ವರೀ ದೈವ ದರ್ಶನ, ಭಾಗ್ಯತ್ತೂರು ಗದ್ದೆಯಲ್ಲಿ ಭಕ್ತರಿಗೆ ಅನುಗ್ರಹ, ಕೊಟ್ಟಾರಕ್ಕೆ ಮೆರವಣಿಗೆ, ತುಲಾಭಾರ ಸೇವೆ ನಡೆಯುವುದು. ಮಧ್ಯಾಹ್ನ ಶ್ರೀ ವಿಷ್ಣುಮೂತರ್ಿ ದೈವಗಳ ದರ್ಶನ, ಪ್ರೇತ ವಿಮೋಚನೆ, ಪಾಷಾಣಮೂತರ್ಿ ದರ್ಶನ ನಡೆಯುವುದು. ಜ. 1ರಂದು ಬೆಳಗ್ಗೆ 4ಕ್ಕೆ ಶ್ರೀ ನಾಲ್ವರ್ ದೈವಗಳ ಬೆಳ್ಚಪ್ಪಾಡರ ದರ್ಶನ, ಇರಿಯಣ್ಣೀಗೆ ಎಳನೀರು ಸ್ನಾನಕ್ಕಾಗಿ ಮೆರವಣಿಗೆ, 9ಕ್ಕೆ ಶ್ರೀ ರಕ್ತೇಶ್ವರೀ ದೈವಾರಂಭ, ತುಲಾಭಾರ ಸೇವೆ, ಶ್ರೀ ವಿಷ್ಣುಮೂತರ್ಿ ದೈವ ದರ್ಶನ, ಪ್ರೇತ ವಿಮೋಚನೆ ನಡೆಯುವುದು. ಜ.2ರಂದು ದೀಪ ಇಳಿಸುವುದು, ನಾಲ್ವರ್ದೈವಗಳ ದರ್ಶನ, ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕಳರಿ ಮನೆಗೆ ಮೆರವಣಿಗೆ, ಭಕ್ತಾದಿಗಳಿಗೆ ಪ್ರಸಾದ ವಿತರಣೆಯೊಂದಿಗೆ ಕಳಿಯಾಟ ಸಂಪನ್ನಗೊಳ್ಳುವುದು.
  ಏನಂತಾರೆ ಟ್ರಸ್ಟಿ:
      ಕಾನತ್ತೂರು ದೇವ, ದೈವಗಳ ಸಂಗಮದ ಪುಣ್ಯ ಕೇಂದ್ರ. ಕಾನತ್ತೂರು ಸನ್ನಿಧಿಯಲ್ಲಿ ಹಲವು ತಲೆಮಾರುಗಳಿಂದ ನಡೆದುಬರುತ್ತಿರುವ ಆಚಾರಗಳನ್ನು ಇಂದಿಗೂ ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಆಡಳಿತ ಸಮಿತಿ ನಿಮಿತ್ತ ಮಾತ್ರ. ಇಲ್ಲಿ ಎಲ್ಲವೂ ದೈವಗಳ ಆಣತಿಯಂತೆಯೇ ನಡೆದುಕೊಳ್ಳಲಾಗುತ್ತಿದೆ. ದೈವಗಳ ಆಜ್ಞಾನುವತರ್ಿಗಳಾಗಿ ನಾವು ಕೆಲಸ ನಡೆಸುತ್ತಿದ್ದೇವೆ. ನ್ಯಾಯದಾನ, ಪ್ರೇತ ವಿಮೋಚನೆ, ಸತ್ಯಸಂಧತೆಗೆ ಕಾನತ್ತೂರು ಹೆಸರುವಾಸಿಯಾಗಿದ್ದು, ಇಲ್ಲಿನ ಕಾರಣಿಕ ಹೆಚ್ಚಲು ಕಾರಣವಾಗಿದೆ. ಆಧುನಿಕ ವ್ಯವಸ್ಥೆಗಳು ಬದಲಾಗುತ್ತಿದ್ದರೂ, ಇಲ್ಲಿಯ ಪ್ರಮುಖ ಅಂಶವಾದ ನ್ಯಾಯ ತೀಮರ್ಾನ-ವ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ಆಧುನಿಕತೆಗಳ ಲೇಪವಿಲ್ಲದೆ ಸಾಂಪ್ರದಾಯಿಕವಾಗಿ ನಡೆದುಬರುತ್ತಿದೆ. ಹೊಸತನದ ಹೆಸರಲ್ಲಿ ಇಲ್ಲಿಗೆ ನಂಬಿಕೆಕೊಳ್ಳುವ ವ್ಯಾಜ್ಯಗಳ ಸಂಖ್ಯೆಯಲ್ಲಿ ಕಡಿತವಿರದೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಜೊತೆಗೆ ಸುಖಾಂತ್ಯಗಳ ಮೂಲಕ ಪರಸ್ಪರ ಮನಸ್ಸುಗಳನ್ನು ಜೋಡಿಸುವ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. 
    ಕೆ.ಪಿ.ಗೋಪಾಲನ್ ನಾಯರ್.
 ಆಡಳಿತ ಟ್ರಸ್ಟಿ, ಕಾನತ್ತೂರು ಕ್ಷೇತ್ರ
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries