HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಧಾಮರ್ಿಕ ಆಸಕ್ತಿ ಹೆಚ್ಚಿದಲ್ಲಿ ಸಾನಿಧ್ಯ ವೃದ್ಧಿ- ಕೊಂಡೆವೂರು ಶ್ರೀ
                 ಸೀರೆ ದೇವಳದಲ್ಲಿ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ಆಮಂತ್ರಣ ಪತ್ರಿಕೆ ಬಿಡುಗಡೆ
               ಕುಂಬಳೆ: ಕಲಿಯುಗದಲ್ಲಿ ಸಮಾಜದಲ್ಲಿ ಅಶಾಂತಿ, ಅವ್ಯವಸ್ಥೆಗಳು ತಾಂಡವವಾಡುವ ಸಂದರ್ಭದಲ್ಲಿ  ಧಾಮರ್ಿಕತೆಯ ಕೆಲಸಗಳು ಹೆಚ್ಚು ಹೆಚ್ಚು ನಡೆಯಬೇಕಾಗಿದೆ.  ಹೃದಯ ಎಂಬ ಪಾತ್ರೆಯಲ್ಲಿ ಕಶ್ಮಲಗಳನ್ನು ಹೋಗಲಾಡಿಸಿ ಸತ್ಕರ್ಮವೆಂಬ ಶುದ್ಧ ಜಲವನ್ನು ತುಂಬಿಸುವ ಅನಿವಾರ್ಯತೆಯಿದೆ.  ಸಮಾಜದಲ್ಲಿ ಧಾಮರ್ಿಕ ಆಸಕ್ತಿ ಹೆಚ್ಚಿದಲ್ಲಿ ಶ್ರದ್ಧಾ ಕೇಂದ್ರಗಳಲ್ಲಿ ಸಾನಿಧ್ಯ ವೃದ್ಧಿ ತಾನಾಗಿಯೇ ಒಲಿದು ಬರುತ್ತದೆ. ಸೀರೆ ಶ್ರೀ ಕ್ಷೇತ್ರದಲ್ಲಿ ನಡೆದ ಜೀಣರ್ೋದ್ಧಾರದ ಬಳಿಕ ಕ್ಷೇತ್ರ ಅಭಿವೃದ್ಧಿಯತ್ತ ಮುಖ ಮಾಡಿರುವುದು ಸಂತಸ ತಂದಿದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
    ಶಿರಿಯ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ  ಫೆ.3ರಿಂದ 5ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಹಾಶಿವರಾತ್ರಿ  ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
    ಹೃದಯ ಶುದ್ಧವಾಗಿರಲು ಮನಸ್ಸಿಗೆ ಆಗಾಗ ಧಾಮರ್ಿಕ ಕರ್ಮಗಳೆಂಬ ಆಹಾರವನ್ನು ನೀಡುತ್ತಿರಬೇಕು. ಅದಕ್ಕಾಗಿಯೇ ಹಿಂದಿನ ಋಷಿ ಮುನಿಗಳು ಧಾಮರ್ಿಕ ಕೇಂದ್ರಗಳನ್ನು ಸ್ಥಾಪಿಸಿದ್ದರು. ದೇಹಕ್ಕೆ ರಕ್ತ ಶುದ್ಧಿ ಕ್ರಿಯೆ ಆದಂತೆ ಮನಸ್ಸಿಗೂ ಶುದ್ಧ ಕ್ರಿಯೆಗಳು ನಡೆಯುವುದು ಧಾಮರ್ಿಕ ಕರ್ಮಗಳಿಂದ ಎಂದು ಅವರು ತಿಳಿಸಿದರು.  ಪ್ರತಿ ಬಿಂದು ಸೇರಿ ತಂಬಿಗೆ ತುಂಬಿದಂತೆ ಕ್ಷೇತ್ರ ಅಭೀವೃದ್ಧಿ ಕಾರ್ಯಗಳಲ್ಲಿ ಸುತ್ತಮುತ್ತಲಿನ ಎಲ್ಲಾ ಕಾರ್ಯಕರ್ತರು ತನುಮನಧನಗಳಿಂದ ಸೇವೆ ಮಾಡಬೇಕು.  ಸಮಾಜದಲ್ಲಿ ಒಳ್ಳೆಯ ಮನಸುಗಳಿದ್ದರೆ ಸಾಕು, ಈ ಊರಿಗೆ ಕ್ಷಾಮವೇ ಕಾಲಿಡದು. ಸಮಪರ್ಿತ ಭಾವದ ಕಾರ್ಯಕರ್ತರ ಶ್ರಮದಿಂದ ಕ್ಷೇತ್ರಗಳು ಬೆಳಗಲಿ ಎಂದು ಅವರು ಹಾರೈಸಿದರು.
   ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ.ಎಂ.ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಶಿಧರ ಶೆಟ್ಟಿ ಗ್ರಾಮಚಾವಡಿ, ಶಂಕರನಾರಾಯಣ ರಾವ್ , ವಾನಂದೆ ಆನಂದ ಶೆಟ್ಟಿ ಉಪಸ್ಥಿತರಿದ್ದರು.  ಆಡಳಿತ ಮೊಕ್ತೇಸರ ವಿ.ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ , ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries