HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ನಲ್ಕದಲ್ಲಿ ಎನ್ಎಸ್ಎಸ್ ನಿಮರ್ಿಸಿದ ಬಸ್ ನಿಲ್ದಾಣ ಉದ್ಘಾಟನೆ               
     ಪೆರ್ಲ: ಎನ್ಎಸ್ಎಸ್ ಸೇವಾ ಯೋಜನೆಯ ಯುವ ಮನಸ್ಸುಗಳಿಂದ ಬಸ್ ನಿಲ್ದಾಣ , ಶ್ರಮದಾನದಂತಹ ಕಾರ್ಯಗಳು ಯಶಸ್ವಿಯಾಗಿ ನಡೆದುದು ಇತರರಿಗೆ ಮಾದರಿ ಕಾರ್ಯ. ಸಂಕೇತಿಕವಾಗಿ ಸಕಾರಗೊಂಡ ಎಲ್ಲ ಕಾರ್ಯಗಳು ಕೂಡಾ ನಮ್ಮೂರಿಗೆ ಮಹತ್ತರ ಕೊಡುಗೆಯನ್ನು ನೀಡುತ್ತದೆ ಎಂದು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ನುಡಿದರು.
  ಅವರು ಎನ್ಎಸ್ಎಸ್ ಸೇವಾ ಯೋಜನೆಯ ವಿದ್ಯಾಥರ್ಿಗಳು ಶ್ರಮದಾನ ಮೂಲಕ ನಲ್ಕದಲ್ಲಿ ನಿಮರ್ಿಸಿದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.
   ಮುಖ್ಯ  ಅತಿಥಿಯಾಗಿ ಭಾಗವಹಿಸಿದ ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದಶರ್ಿ ಡಾ.ಜಯಗೋವಿಂದ ಅವರು ಮಾತನಾಡಿ "ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೆ ಮಾಡಿದಂತಹ ಸಮಾಜ ಸೇವೆ ಉಳಿದವರಿಗೆ ಪ್ರೇರಣೆಯನ್ನು ನೀಡುತ್ತದೆ.2007ರಿಂದ ನಾಲಂದ ಕಾಲೇಜಿನಲ್ಲಿ ನಡೆದು ಬರುತ್ತಿರುವ ಎನ್ಎಸ್ಎಸ್ ಸೇವಾ ಯೋಜನೆಯ ಹಿಂದಿರುವ ಗುರುವೃಂದ ಮತ್ತು ಮಾರ್ಗದರ್ಶಕರನ್ನು ಶ್ಲಾಘಿಸಬೇಕಾದುದು ಅನಿವಾರ್ಯ. ವಿದ್ಯಾಥರ್ಿಯೊಳಗಿನ ಶಕ್ತಿ , ಸ್ವಾಭಿಮಾನ ಮತ್ತು ನಾಯಕತ್ವದ ಗುಣ ರೂಪಿಸಿಕೊಳ್ಳಲು ಎನ್ಎಸ್ಎಸ್ ಘಟಕ ಒಂದು ಚೈತನ್ಯವೆಂದರೂ ಅತಿಶಯೋಕ್ತಿಯಾಗಲಾರದೆಂದು ನುಡಿದರು.
    ಮಂಜೇಶ್ವರ ಗಿಳಿವಿಂಡು  ಇದರ ಅಡಳಿತ ಅಧಿಕಾರಿ ಡಾ.ಕಮಲಾಕ್ಷ ಉಪಸ್ಥಿತರಿದ್ದರು.  ನಾಲಮದ ವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಶಿಬಿರ ನಿದರ್ೇಶಕ ಅಶೋಕ ಎಂ ಶಿಬಿರದ ಮೌಲ್ಯಾಮಾಪನ ನಡೆಸಿದರು.ಕೇರಳ ರಾಜ್ಯ ಕಿರುಕೈಗಾರಿಕಾ ಸಂಘದ ಉಪಾಧ್ಯಕ್ಷ ರಾಜಾರಾಮ ಪೆರ್ಲ,ಎಣ್ಮಕಜೆ ಗ್ರಾಮಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಯಾರ್ , ಎಣ್ಮಕಜೆ ಗ್ರಾಮ ಪಂಚಾಯತು  ಸದಸ್ಯ ಸತೀಶ್ ಕುಲಾಲ್ ನಲ್ಕ, ಎಸ್ವಿಎಯುಎಲ್ಪಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಪತಿ ಭಟ್,ಎಸ್ವಿಎಯುಎಲ್ಪಿ ಶಾಲಾ ಅಧ್ಯಾಪಿಕೆ ಪಾರ್ವತಿ ಟೀಚರ್, ಪದ್ಮಶೇಖರ ನೇರೊಳು, ಅಬ್ಬಾಸ್ ನಲ್ಕ ,ಎನ್ಎಸ್ಎಸ್ ಶಿಬಿರ  ಜೊತೆ ಕಾರ್ಯದಶರ್ಿ ವಿಕಾಸ್ ಭಟ್,ಎನ್ಎಸ್ಎಸ್ ಶಿಬಿರ  ಕಾರ್ಯದಶರ್ಿ ಪ್ರದೀಪ್, ಹಿತೇಶ್,ಕು.ಅಪರ್ಿತ,ಕು.ಪವಿತ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕುಮಾರ ನಾರಾಯಣ ಕೆ ಸ್ವಾಗತಿಸಿ, ಎನ್ಎಸ್ಎಸ್  ಯೋಜನಾಧಿಕಾರಿ ಶಂಕರ ಖಂಡಿಗೆ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries