HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಲು ಸಾಧ್ಯವಾಗಬೇಕು : ಕೆ.ವಿ.ಮಧುಸೂದನ್
    ಕಾಸರಗೋಡು: ಯಾದವ ಸಮುದಾಯದ ಪರಂಪರೆಯನ್ನು ಉಳಿಸಿಕೊಂಡು ಅದನ್ನು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವ ಜೊತೆಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರವನ್ನು ಬೆಳೆಸುವಂತಾಗಬೇಕು ಎಂದು ಸಿಆರ್ಪಿಎಫ್ ನಿವೃತ್ತ ಐ.ಜಿ. ಕೆ.ವಿ.ಮಧುುಸೂದನ್ ಹೇಳಿದರು.
   ಅವರು ಅಖಿಲ ಕೇರಳ ಯಾದವ ಸಭಾ ಹಾಗೂ ಸಾರಥಿ(ಯುಎಇ)ಯ ನೇತೃತ್ವದಲ್ಲಿ ಚಿಮೇನಿ ಶ್ರೀ ವಿಷ್ಣುಮೂತರ್ಿ ಕ್ಷೇತ್ರದ ಶ್ರೀ ಪುರಂ ಸಭಾಂಗಣದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಮುದಾಯದ ಮಕ್ಕಳಿಗೆ ನಗದು ಪುರಸ್ಕಾರ ವಿತರಿಸಿ ಮಾತನಾಡಿದರು.
   ಪ್ರಸ್ತುತ  ಮಕ್ಕಳಿಗೆ ಶಿಕ್ಷಣ ಅವಕಾಶಗಳು ಹೇರಳವಾಗಿದೆ. ಆದರೆ ಅಧ್ಯಾತ್ಮಿಕತಯಿಂದ ದೂರವಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಹಿಂದಿನ ವಿಶಾಲವಾದ ಕುಟುಂಬ ಸಂಪ್ರದಾಯ ಶಿಥಿಲಗೊಂಡಿದೆ. ಅತಿ ಸಣ್ಣ ಕುಟುಂಬವನ್ನು ಹೊಂದಿರುವುದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರದ ಕುರಿತು ತಿಳಿಸಲು ಸಾಧ್ಯವಾಗುವುದಿಲ್ಲ. ಅದ್ದರಿಂದ ಅಂತಹ ಸಂದರ್ಭದಲ್ಲಿ ಸಮುದಾಯದ ಇಂತಹ ಕುಟುಂಬ ಸಂಗಮಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆಸಬೇಕು ಎಂದರು.
   ಕಾರ್ಯಕ್ರಮದಲ್ಲಿ  ಅಖಿಲ ಕೇರಳ ಯಾದವ ಸಭಾ ರಾಜ್ಯಾಧ್ಯಕ್ಷ  ಇ.ಕೆ.ರವೀಂದ್ರನ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ತ್ರಿಶೂರ್ ಜಿಲ್ಲಾ ಸಹಾಯಕ ಮೆಜಿಸ್ಟ್ರೇಟ್ ವಿ.ಶ್ರೀಜಾ, ಸ್ಕಾಲರ್ಶಿಪ್ ವಿತರಣೆಯನ್ನು  ತಳಿಪರಂಬ ಡಿವೈಎಸ್ಪಿ ಕೆ.ವಿ.ವೇಣುಗೋಪಾಲನ್ ನಿರ್ವಹಿಸಿ ಮಾತನಾಡಿದರು.
   ಇದೇ ಸಂದರ್ಭದಲ್ಲಿ ಕರ್ತಂಬು ಮೇಸ್ತ್ರಿ ಸಂಸ್ಮರಣಾ ಭಾಷಣವನ್ನು  ಯಾದವ ಸಭಾ ರಾಜ್ಯ ಸಮಿತಿ  ಉಪಾಧ್ಯಕ್ಷ ವಿ.ನಾರಾಯಣನ್ ನಡೆಸಿಕೊಟ್ಟರು. ಸಾರಥಿ ಯುಎಇ ಕಾರ್ಯದಶರ್ಿ ಕೆ.ವಿ.ಜನಾರ್ದನ್, ಶ್ರೀ ವಿಷ್ಣುಮೂತರ್ಿ ಕ್ಷೇತ್ರದ ಅಧ್ಯಕ್ಷ ಕೆ.ಎಂ.ದಾಮೋದರನ್, ಯಾದವ ಸಭಾ ಕಾಸರಗೋಡು ತಾಲೂಕು ಮಹಿಳಾ ಸಮಿತಿ ಅಧ್ಯಕ್ಷೆ ಡಾ.ಶಾಂಭವಿ, ನ್ಯಾಯವಾದಿ ಎನ್.ಸೋಮನಾಥನ್ ಮುಂತಾದವರು ಮಾತನಾಡಿದರು.
   ಆರಂಭದಲ್ಲಿ ಯಾದವ ಸಭಾ ರಾಜ್ಯ ಪ್ರಧಾನ ಕಾರ್ಯದಶರ್ಿ ನ್ಯಾಯವಾದಿ ಎಂ.ರಮೇಶ್ ಯಾದವ್ ಸ್ವಾಗತಿಸಿ, ರಾಜ್ಯ ಸಮಿತಿ ಕೋಶಾಧಿಕಾರಿ ವಳಪ್ಪಿಲ್ ಗೋಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಸುಮಾರು 80 ಮಂದಿ ವಿದ್ಯಾಥರ್ಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries