HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

                     ಯಜ್ಞ-ಯಾಗಗಳಿಂದ ಧನಾತ್ಮನ ಚೈತನ್ಯ ಬಲಿಷ್ಠಗೊಳ್ಳುತ್ತದೆ-ರವೀಶ ತಂತ್ರಿ
   ಮುಳ್ಳೇರಿಯ: ಯಜ್ಞ-ಯಾಗಗಳಿಂದ ಧನಾತ್ಮನ ಚೈತನ್ಯ ಬಲಿಷ್ಠಗೊಳ್ಳುತ್ತದೆ. ಋಣಾತ್ಮಕ ಚೈತನ್ಯ ನಾಶವಾಗುತ್ತದೆ. ಆಂತರಿಕ ಪಾಪವೂ ಭಸ್ಮೀಭೂತವಾಗುತ್ತದೆ. ಭಾರತದ ಭದ್ರವಾದ ಅಡಿಪಾಯವೇ ಹಿಂದೂ ಧರ್ಮ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
    ಅವರು  ಮುಳ್ಳೇರಿಯ ವಿದ್ಯಾಶ್ರೀ ಯಾಗ ಸಮಿತಿಯ ನೇತೃತ್ವದಲ್ಲಿ, ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿವ  ಸಹಸ್ರ ನಾಳಿಕೇರ, ಮೇಧಾ ಸರಸ್ವತಿ, ಧನ್ವಂತರಿ ಯಾಗದ ಅಂಗವಾಗಿ ಮುಳ್ಳೇರಿಯ ಗಣೇಶಕಲಾ ಮಂದಿರದಲ್ಲಿ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪಜ್ವಲನೆ ಮಾಡಿ  ಸಹಸ್ರ ನಾಳಿಕೇರ ಗಣಯಾಗದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
   ವೇದಮೂತರ್ಿ ಕಶೆಕ್ಕೋಡಿ ಸೂರ್ಯನಾರಾಯಣ ಭಟ್ ಮೇಧಾ ಸರಸ್ವತಿ ಯಾಗದ ಬಗ್ಗೆ ಮಾತನಾಡಿ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿ ಎಂದು ಪ್ರಾಥರ್ಿಸುವುದೇ ಹಿಂದೂ ಧರ್ಮ. ಶಾಸ್ತ್ರ, ವೈದಿಕ ಸಂಪ್ರದಾಯಗಳನ್ನು ಪ್ರಶ್ನಿಸುವುದು ತರವಲ್ಲ. ಇಂತಹಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹಿಂದೂ ಧರ್ಮದ ಸೇವೆ ಮಾಡಬೇಕು ಎಂದು ಹೇಳಿದರು. ಶ್ರೀಕೃಷ್ಣ ಉಪಾಧ್ಯಾಯ ಸುಳ್ಯ ಧನ್ವಂತರೀ ಯಾಗದ ಬಗ್ಗೆ ಉಪನ್ಯಾಸ ನೀಡಿ ಧನ್ವಂತರೀ ಯಾಗದಿಂದ ಆರೋಗ್ಯ ಪ್ರಾಪ್ತವಾಗುತ್ತದೆ. ಕರ್ಮದಿಂದ ಚಿತ್ತ ಶುದ್ಧಿಯಾಗುತ್ತದೆ, ಆ ಜಾಗದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.
  ಬಳಿಕ  ಅಗ್ನಿಹೋತ್ರ ಪ್ರಾತ್ಯಕ್ಷಿತೆ, ವಿವರಣೆ, ಚಚರ್ೆ ನಡೆಯಿತು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಳಿಯಾರು ಕ್ಷೇತ್ರದ ಆಡಳಿತೆ ಮೊಕ್ತೇಸರ ಸೀತಾರಾಮ ಬಳ್ಳುಳ್ಳಾಯ, ನಾರಂಪಾಡಿ ಕ್ಷೇತ್ರದ ಆಡಳಿತೆ ಮೊಕ್ತೇಸರ ಟಿ.ಸುಬ್ರಹ್ಮಣ್ಯ ಭಟ್ ತಲೇಕ, ನೆಟ್ಟಣಿಗೆ ಕ್ಷೇತ್ರದ ಆಡಳಿತೆ ಮೊಕ್ತೇಸರ ದಾಮೋದರ ಮಣಿಯಾಣಿ ಉಪಸ್ಥಿತರಿದ್ದರು. ಯಾಗ ಮಂಟಪದ ವಾಸ್ತು ಶಿಲ್ಪಿ ಹರಿಶ್ಚಂದ್ರ ನೆಟ್ಟಣಿಗೆ ಅವರನ್ನು ಗೌರವಿಸಲಾಯಿತು. ಯಾಗ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಸ್ವಾಗತಿಸಿ, ಯಾಗಸಮಿತಿ ಉಪಾಧ್ಯಕ್ಷ ಎಂ.ಕೆ.ರಾಘವನ್ ವಂದಿಸಿದರು. ರಾಮಚಂದ್ರ ಭಟ್ ನಿರೂಪಿಸಿದರು.
   ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
 ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಂದ ಆಶೀರ್ವಚನ ನೀಡಿದರು. ಕಾಸರಗೋಡು ಶ್ರೀ ಮಲ್ಲಿಕಾಜರ್ುನ ಕ್ಷೇತ್ರ ಜೀಣರ್ೋದ್ಧಾರ ಸಮಿತಿ ಕಾಯರ್ಾಧ್ಯಕ್ಷ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
   ಡಿ.31ರಂದು(ಇಂದು) ಪ್ರಾತಃಕಾಲ 5ಕ್ಕೆ ಯಾಗಗಳ ಪ್ರಾರಂಭ, ಬೆಳಿಗ್ಗೆ 9.30ಕ್ಕೆ ಉಡುಪಿ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 10.45ಕ್ಕೆ ಯಾಗಕ್ಕೆ ಸುವಸ್ತು ಸಮರ್ಪಣೆ, ಸ್ವಾಮೀಜಿಯವರಿಂದ ಆಶೀರ್ವಚನ, ಗಾಯಕ ಶಶಿಧರ ಕೋಟೆ ಬೆಂಗಳೂರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು, ಮಧ್ಯಾಹ್ನ 12ಕ್ಕೆ ಮೇಧಾ ಸರಸ್ವತೀ ಯಾಗದ ಮಹಾ ಮಂಗಳಾರತಿ, ಪ್ರಸಾದ ವಿತರಣೆ, 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries