ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ಎನ್ಎಸ್ಎಸ್ ಶಿಬಿರ ಆರಂಭ
ಮುಳ್ಳೇರಿಯ: ಇಲ್ಲಿನ ಜಿವಿಎಚ್ಎಸ್ ಶಾಲೆಯ ಎನ್ಎಸ್ಎಸ್ ಶಿಬಿರದ ಉದ್ಘಾಟನೆ ಶನಿವಾರ ಆರಂಭಗೊಂಡಿದ್ದು ಡಿ.29 ರ ತನಕ ಕಜಂಪಾಡಿ ಜಿಡಬ್ಲ್ಯುಎಲ್ಪಿ ಶಾಲೆಯಲ್ಲಿ ನಡೆಯಲಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ.ಆರ್. ಭಟ್ ಶಿಬಿರವನ್ನು ಉದ್ಘಾಟಿಸಿದರು. ಕಜಂಪಾಡಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಅಧಿಕಾರಿ ಸಿಬಿ ಜೇಕಬ್ ಯೋಜನೆಯನ್ನು ಮಂಡಿಸಿದರು. ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಜಂಪಾಡಿ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಶೆಟ್ಟಿ, ಕಜಂಪಾಡಿ ಶಾಲೆಯ ಮಾತೃ ಸಂಘದ ಅಧ್ಯಕ್ಷೆ ಭುವನೇಶ್ವರಿ, ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ಮಾತೃ ಸಂಘದ ಅಧ್ಯಕ್ಷೆ ಶ್ರೀವಿದ್ಯಾ, ಕಜಂಪಾಡಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಉದಯಕೃಷ್ಣ ಭಟ್, ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾ`್ಯಕ್ಷ ಸುಂದರ, ರಕ್ಷಕ ಶಿಕ್ಷಕ ಸಂಘದ ಸದಸ್ಯ ಚಂದ್ರಶೇಖರ.ಕೆ, ಕಜಂಪಾಡಿ ಶಾಲೆಯ ಹಿರಿಯ ಶಿಕ್ಷಕಿ ವಿಜಯಶ್ರೀ, ಧರ್ಮಸ್ಥಳ ಸ್ವ-ಸಹಾಯ ಸಂಘದ ಎಚ್.ಜಾನಕಿ, ಮಹಾಮಾಯಿ ಸ್ವ-ಸಹಾಯ ಸಂಘದ ಜಯಾ.ಕೆ, ಎಸ್.ಎಂ.ಸಿ ಸದಸ್ಯರಾದ ದಯಾನಂದ, ಸಾದು, ಚಂದ್ರಶೇಖರ ಉಪಸ್ಥಿತರಿದ್ದರು.
ಮುಳ್ಳೇರಿಯ ಜಿವಿಎಚ್ಎಸ್ ಶಾಲೆಯ ಪ್ರಾಂಶುಪಾಲ ಎ.ವಿಷ್ಣು ಭಟ್ ಸ್ವಾಗತಿಸಿ, ಕುಮಾರಿ ಶ್ರೀಮಿನಿ ವಂದಿಸಿದರು.
ಶಿಬಿರದ ಅಂಗವಾಗಿ ತರಕಾರಿ ತೋಟ ತಯಾರಿ, ಇಂಧನ ಉಳಿಕೆ ಕಾರ್ಯಕ್ರಮ, ಮಾದಕ ವಸ್ತು ವಿರುದ್ಧ ತಿಳುವಳಿಕೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ನಿತ್ಯ ಯೋಗ ತರಬೇತಿ, ಅಭಿವೃದ್ಧಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.