ಬಾಕ್ರಬೈಲ್ನಲ್ಲಿ ರಾಮಾನುಜನ್ ಡೇ ಆಚರಣೆ
ಮಂಜೇಶ್ವರ: ಬಡತನ ಸಹಿತ ವಿವಿಧ ಸಮಸ್ಯೆಗಳಿಂದ ಕಂಗೆಟ್ಟಿದ್ದರೂ ಜ್ಞಾನಾರ್ಜನೆಯಲ್ಲಿ ರಾಜಿಯಾಗದೆ ಕಠಿಣ ಪರಿಶ್ರಮದಿಂದ ಸಾಧನೆಗೈದಿರುವ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ವಿದ್ಯಾಥರ್ಿಗಳಿಗೆ ಪ್ರೇರಣದಾಯಿ ವ್ಯಕ್ತಿತ್ವದವರು. ಅವರ ಜೀವನ, ಸಾಧನೆಗಳ ಬಗ್ಗೆ ಪುಸ್ತಕಗಳ ಓದಿನ ಮೂಲಕ ಹೆಚ್ಚು ಅರಿತುಕೊಳ್ಳುವುದು ಪ್ರತಿಯೊಬ್ಬರ ಬದುಕಿಗೆ ಹೊಸ ಆಯಾಮ ನೀಡುವುದು ಎಂದು ಬಾಕ್ರಬೈಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಬಿ.ಶ್ರೀನಿವಾಸ ರಾವ್ ಕರೆನೀಡಿದರು.
ಬಾಕ್ರಬೈಲು ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ರವರ ಜನ್ಮದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ಶಿಕ್ಷಕಿ ಚಂದ್ರಿಕಾ ಟೀಚರ್ ರವರು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶ್ರೀನಿವಾಸ ರಾಮಾನುಜನ್ ರವರ ಗಣಿತದ ಆಸಕ್ತಿ,ಅವರ ಜೀವನ,ಸಾಧನೆಗಳ ಕುರಿತು ಸವಿವರವಾಗಿ ಮಾಹಿತಿ ಈ ಸಂದರ್ಭ ನೀಡಿ, ಗಣಿತ ತೀವ್ರ ಗೊಂದಲಕಾರಿಯೆಂಬ ಮನೋಸ್ಥಿತಿಯಿಂದ ಹೊರಬರಬೇಕು. ಪ್ರತಿಯೊಂದು ಶಾಸ್ತ್ರಗಳಿಗೂ ಮೂಲ ಸೆಲೆಯಾದ ಗಣಿತ ಸರಳವಾದ ಕಲಿಕೆಯಾಗಿದ್ದು, ರಾಜಾನುಜನ್ ರ ಪ್ರೇರಣೆ ಪ್ರತಿಯೊಬ್ಬರನ್ನೂ ಉದ್ದೀಪಿಸಲಿ ಎಂದು ತಿಳಿಸಿದರು. ಬಳಿಕ ಮಕ್ಕಳಿಗೆ ರಾಮಾನುಜನ್ ರವರ ಕುರಿತಾಗಿರುವ ಕ್ವಿಜ್ ಸ್ಪಧರ್ೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪಿ.ಬಿ.ಶ್ರೀನಿವಾಸ ರಾವ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಬಿ.ಖಾದರ್, ಉಪಾಧ್ಯಕ್ಷ ಶಂಕರನಾರಾಯಣ ಭಟ್, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಸ್ಪಧರ್ಾ ವಿಜೇತರನ್ನು ವಿಶೇಷ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು.