ಇಬ್ಬರು ಅಸ್ಸಾಮಿ ಸಾಹಿತಿಗಳು ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ
ತೀರ್ಥಹಳ್ಳಿ: ಅಸ್ಸಾಂನ ಪ್ರಸಿದ್ದ ಸಾಹಿತಿಗಳಾದ ಹೊಮೆನ್ ಬೋಗರ್ೊಹೈನ್ ಮತ್ತು ನೀಲಮಣಿ ಪೂಕಾನ್ ಅವರುಗಳು ಪ್ರಸಕ್ತ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆ ಸಲ್ಲಿಸಿದ ರಾಷ್ಟ್ರಮಟ್ಟದ ಸಾಹಿತಿಗಳನ್ನು ಪುರಸ್ಕರಿಸುವ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಈ ಬಾರಿ ಇಬ್ಬರು ಅಸ್ಸಾಮಿಸಾಹಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪ್ರತಿಷ್ಠಾನದ ಸಹ ಕಾರ್ಯದಶರ್ಿ ಕಡಿದಾಳ್ ಪ್ರಕಾಶ್ ತಿಳಿಸಿದರು.
ಪ್ರಶಸ್ತಿಯು 2.50 ಲಕ್ಷ ರೂ.ನಗದು, ಸ್ಮರಣಿಕೆಯನ್ನು ಒಳಗೊಂಡಿದ್ದು ಹಿರಿಯ ಸಾಹಿತಿಗಳು ಗೌಹಾಟಿಯಿಂದ ಆಗಮಿಸಲು ಅವರ ಆರೋಗ್ಯ ಹಾಗೂ ವಯಸ್ಸಿನ ಕಾರಣಕ್ಕೆ ಸಾದ್ಯವಾಗುತ್ತಿಲ್ಲ. ಹೀಗಾಗಿ ಡಿ.29ರಂದು ಕುಪ್ಪಳ್ಳಿಯಲ್ಲಿ ನಡೆಯುವ ಕುವೆಂಪು ಅವರ 113ನೇ ಜಯಂತಿಯ ಬದಲು ಗೌಹಾಟಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತಿದೆ.
ನೀಲಮಣಿ ಪೂಕಾನ್
ವೃತ್ತಿಯಲ್ಲಿ ಪ್ರಾಧ್ಯಾಪಕ, ಶಿಕ್ಷಣತಜ್ಞ ಆಗಿರುವ ನೀಲಮಣಿ ಪೂಕಾನ್ ಅಸ್ಸಾಮಿ ಸಾಹಿತ್ಯದಲ್ಲಿ ಮಹತ್ವದ, ಸ್ಥಾನ ಹೊಂದಿದ್ದಾರೆ. 1950ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಜಪಾನೀ ಮತ್ತು ಯುರೋಪಿಯನ್ ಕವಿತೆಗಳ ಅನುವಾದ ಮಾಡಿದ್ದಾರೆ. ಇವರ 'ಕೋಬಿತಾ; ಕವನಸಂಕಲನಕ್ಕೆ 1981ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತ್ತು.
ಹೊಮೆನ್ ಬೋಗರ್ೊಹೈನ್
ಹೊಮೆನ್ ಬೋಗರ್ೊಹೈನ್ ಅವರು ಶಿಕ್ಷಕರಾಗಿ, ಪತ್ರಕರ್ತರಾಗಿ ಯಶಸ್ವಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿಸಹ ಅಪಾರ ಯಶಸ್ಸು ಸಂಪಾದಿಸಿದ್ದಾರೆ. ಸಮಾಜದ ಎಲ್ಲ ವರ್ಗದವರನ್ನು ಒಳಗೊಂಡಿರುವ ಇವರ ರಚನೆಗಳು ಮಾನವೀಯ ಮೌಲ್ಯ, ನೈತಿಕತೆ, ವೈಚಾರಿಕತೆಯನ್ನು ತನ್ನಲ್ಲಿ ಅಡಕವಾಗಿಸಿಕೊಂಡಿದೆ. ಸ್ವಂತ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಮೂಡಿದ ಅವರ ಸಾಹಿತ್ಯ ಕೃತಿಗಳು ಅಸ್ಸಾಂನ ಜನಮಾನಸಗಳಲ್ಲಿ ಸಾಕಷ್ಟು ಹೆಸರಾಗಿವೆ. ಇವರ 'ಪಿತಪುತ್ರ' ಕಾದಂಬರಿಗೆ 978ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.