HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಜನಮನ ರಂಜಿಸಿದ ಚಿತ್ತರಂಜನನ ಏಕ ವ್ಯಕ್ತಿ ಯಕ್ಷಗಾನ
   ಬದಿಯಡ್ಕ: ಅಗಲ್ಪಾಡಿ ದೇವಸ್ಥಾನದಲ್ಲಿ ಕರಾಡ ಕಲಾಪ್ರತಿಷ್ಠಾನದ ವಾಷರ್ಿಕೋತ್ಸವದ ಸಂದರ್ಭದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಬಾಲಪ್ರತಿಭೆ ಚಿತ್ತರಂಜನ್ ಕಡಂದೇಲು ಇವನಿಂದ ವೀರ ಬಭ್ರುವಾಹನ ಎಂಬ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಿತು.
ಪೆರಡಾಲ ನವಜೀವನ ಪ್ರೌಢ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಚಿತ್ತರಂಜನ್ ತನ್ನ ಐದನೇ ವಯಸ್ಸಿನಲ್ಲಿಯೇ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಖ್ಯಾತ ಯಕ್ಷಗಾನ ನಾಟ್ಯಗುರು ಸಬ್ಬಣಕೋಡಿ ರಾಮಭಟ್ಟರಲ್ಲಿ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿ ಬಹಳ ಬೇಗನೆ ಯಕ್ಷಗಾನದ ನಾಟ್ಯವನ್ನು ಕರಗತ ಮಾಡಿಕೊಂಡು ಮಕ್ಕಳ ಮೇಳದಲ್ಲಿ ಸೇರಿ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿದನು. ಈ ಬಾಲಕನ ಅಭಿನಯ ಪ್ರೌಢಿಮೆ, ನಾಟ್ಯದ ಸೊಬಗನ್ನು ಗುರುತಿಸಿದ ಹಿರಿಯ ಸಾಹಿತಿ ಮಾ.ಭ.ಪೆರ್ಲ ಅವರು ಮೆಚ್ಚುಗೆ ಅಭಿನಂದಿಸಿ ಆಶೀರ್ವದಿಸಿದ್ದಾರೆ. ವೀರ ಕುಶಲವದ ಕುಶನಾಗಿ, ಕೃಷ್ಣಲೀಲೆಯ ಕೃಷ್ಣನಾಗಿ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿಯಾಗಿ ಮಿಂಚಿದ್ದಲ್ಲದೆ ಬಭ್ರುವಾಹನ ಕಾಳಗದ ಬಭ್ರುವಾಹನ ಮುಂತಾದ ಹಲವಾರು ಪಾತ್ರಗಳನ್ನು ಸಲೀಸಾಗಿ ನಿರ್ವಹಿಸಿದ್ಧಾನೆ. ಸುಮಾರು ಎಂಭತ್ತಕ್ಕಿಂತಲೂ ಅಧಿಕ ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿರುವ ಚಿತ್ತರಂಜನ್ ತೆಂಕಬೈಲು ತಿರುಮಲೇಶ್ ಶಾಸ್ತ್ರೀಗಳಲ್ಲಿ ಭಾಗವತಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾನೆ. ಎಡನೀರು ಹಾಗೂ ಕೊಲ್ಲಂಗಾನ ಮೇಳಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ.
ಅಗಲ್ಪಾಡಿ ದೇವಸ್ಥಾನದಲ್ಲಿ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿರುವ ಈ ಬಾಲಕ ಬದಿಯಡ್ಕ ನಿವಾಸಿಯಾಗಿರುವ ಕಡಂದೇಲು ಹರೀಶ್ ಕುಮಾರ್ ಹಾಗೂ ನವಜೀವನ ಶಾಲಾ ಅಧ್ಯಾಪಕಿ ಜ್ಯೋತ್ಸ್ನಾ ದಂಪತಿಗಳ ಪುತ್ರ.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries