HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಪೊಲೀಸ್ ಕಿರುಕುಳಕ್ಕೀಡಾದವರ ಮನೆಗಳಿಗೆ ಶಶಿಕಲಾ ಟೀಚರ್ ಭೇಟಿ, ಸಾಂತ್ವನ 
  ಮಂಜೇಶ್ವರ: ಮಂಜೇಶ್ವರ ಮತ್ತು ಕುಂಜತ್ತೂರು ಪರಿಸರದಲ್ಲಿ ಅಮಾಯಕರ ಮೇಲೆ ಒಂದೆಡೆಯಲ್ಲಿ ಮತೀಯ ತೀವ್ರವಾದಿಗಳ ಆಕ್ರಮಣ ಇನ್ನೊಂದೆಡೆಯಲ್ಲಿ ಪೊಲೀಸರ ದೌರ್ಜನ್ಯ ಹೆಚ್ಚಳಗೊಂಡಿದೆ. ಇಲ್ಲಿ ನಡೆಯುತ್ತಿರುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಇದರಿಂದಾಗಿ ಸ್ವಯಂ ರಕ್ಷಣೆಗಾಗಿ ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿನ ಜನತೆ ಮುಂದಾದರೆ ಅವರನ್ನು ಆಕ್ಷೇಪಿಸಲು ಸಾಧ್ಯವಿಲ್ಲವೆಂದು ಹಿಂದು ಐಕ್ಯ ವೇದಿಕೆಯ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಪಟ್ಟಾಂಬಿ ತಿಳಿಸಿದ್ದಾರೆ.
    ಕುಂಜತ್ತೂರು ಘಟನೆಯ ಹಿನ್ನೆಲೆಯಲ್ಲಿ ಪೊಲೀಸರಿಂದ ವ್ಯಾಪಕ ಕಿರುಕುಳಕ್ಕೀಡಾದ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಯನ್ನು ಸಾಂತ್ವನ ಪಡಿಸಿದ ಬಳಿಕ ಅವರು ಮಾತನಾಡಿದರು. 
       ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಉತ್ಸವಕ್ಕೆ ಹಾಕಲಾದ ಪ್ರವೇಶ ದ್ವಾರವನ್ನು ಮತಾಂಧರು ವಿನಾ ಕಾರಣ ನಾಶಗೊಳಿಸಿದರು. ಹಿಂದುಗಳ ಅಭಿಮಾನವಾಗಿರುವ ಓಂಕಾರ ಧ್ವಜವನ್ನೇ ಕಿಚ್ಚಿಟ್ಟು ಸುಟ್ಟು ಹಾಕಿದರು. ಇದೊಂದಕ್ಕೂ ಅಪರಾಧಿಗಳನ್ನು ಹಿಡಿಯಲಾಗಲೀ, ತನಿಖೆ ನಡೆಸಲಾಗಲೀ, ಆರೋಪಿಗಳ ಮನೆಗೆ ದಾಳಿ ನಡೆಸಲಾಗಲೀ ಮುಂದಾಗದ ಪೊಲೀಸರು ಇದೀಗ ಹಸಿರು ಧ್ವಜದ ನಾಶಪಡಿಸಿದ ಹಿನ್ನೆಲೆಯಲ್ಲಿ ಹಿಂದು ಯುವಕರ ಮನೆಗಳಿಗೆ ದಾಳಿ ಮಾಡಿ ಮನೆಮಂದಿಗೆ ವ್ಯಾಪಕ ಚಿತ್ರಹಿಂಸೆ ನೀಡುತ್ತಿದ್ದಾರೆ. ಮತಾಂಧರು ನೀಡಿದ ಪಟ್ಟಿಯಾಧಾರದಲ್ಲಿ ಅಮಾಯಕರನ್ನು ಬಂಧಿಸಿ ಎಳೆದೊಯ್ಯುವಾಗ ತಡೆಯಲು ಬಂದ ಮಾತೆಯರ ಮೇಲೂ ಅತಿಕ್ರಮಣ ನಡೆಸಲಾಗುತ್ತಿದೆ. ಇಲ್ಲಿ ಹಿಂದು ಸಮಾಜವು ನೀಡಿದ ದೂರುಗಳಿಗೆ ಕವಡೆ ಕಿಮ್ಮತ್ತಿನ ಬೆಲೆಯಿಲ್ಲದಂತಾಗಿದೆ. ಹಾಗಿದ್ದರೆ ಕೇರಳದ ಯಥಾರ್ಥ ಗೃಹ ಸಚಿವರು ಯಾರು ಸಾಕ್ಷಾತ್ ಮುಖ್ಯಮಂತ್ರಿಯಾಗಿರುವ ಪಿಣರಾಯಿ ವಿಜಯನ್ ಅವರೋ ಅಲ್ಲಾ ಮತೀಯ ತೀವ್ರವಾದಿಗಳೋ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
   ಕಾನೂನು ಸಂರಕ್ಷಿಸಬೇಕಾದ ಆರಕ್ಷಕರಿಂದ ಬಹುಸಂಖ್ಯಾತ ಹಿಂದು ಸಮಾಜಕ್ಕೆ ನ್ಯಾಯ ನಿಷೇಧಿಸಲ್ಪಡುತ್ತಿರುವ ಸಂದರ್ಭದಲ್ಲಿ ಸಮಾಜದ ಸಂರಕ್ಷಣೆಗೆ ಸ್ವಯಂ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ. ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿ ಬರುವಾಗ ಹಿಂದು ಸಮಾಜವು ಜಾಗೃತವಾಗಿ ಒಟ್ಟಾಗಿ ಕಾರ್ಯವೆಸಗುವಂತಾಗಬೇಕು. ಮಂಜೇಶ್ವರದ ಆಸುಪಾಸಿನಲ್ಲಿ ನಡೆಯುತ್ತಿರುವ ಪ್ರವೃತ್ತ್ತಿಗಳು ಕೇವಲ ಸಮಾಜ ಬಾಹಿರ ಕೃತ್ಯಗಳು ಮಾತ್ರವಲ್ಲ. ದೇಶದ್ರೋಹಿ ಕೃತ್ಯವೂ ಹೌದು. ಪೊಲೀಸರು ಮತ್ತು ಕೆಲವೊಂದು ರಾಜಕೀಯ ಪಕ್ಷಗಳು ಮತೀಯ ತೀವ್ರವಾದಿಗಳಿಗೆ ಒತ್ತಾಸೆ ನೀಡುತ್ತಿರುವುದೇ ಇಂತಹ ಕೃತ್ಯಗಳು ಹೆಚ್ಚಲು ಪ್ರ`ಾನ ಕಾರಣ. ಇಂತಹ ಸಮಾಜ ಬಾಹಿರ ಕೃತ್ಯಗಳನ್ನು ನಡೆಸುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಸಂಘಟನೆಗಳು, ನೇತಾರರ ವಿರುದ್ಧ ಸಮಗ್ರ ತನಿಖೆ ನಡೆಸುವಂತಾಗಲಿ. ಕಾಸರಗೋಡಲ್ಲಿ ನಡೆಯುತ್ತಿರುವ ಲವ್ಜಿಹಾದ್ ಮತ್ತಿತರ ಕೋಮು ವಿದ್ವೇಷದ ಕೃತ್ಯಗಳ ಹಿಂದೆ ಮತೀಯ ತೀವ್ರವಾದಿಗಳ ಕೈವಾಡವಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿರುವಾಗ ಆ ಬಗ್ಗೆ ತನಿಖೆ ನಡೆಸದ ಪೊಲೀಸ್ ಇಲಾಖೆ ಹಿಂದು ಸಮಾಜವನ್ನು ಶೋಷಿಸುತ್ತಿರುವುದು ಮಾನವ ಹಕ್ಕು ಉಲ್ಲಂಘನೆಯ ಪರಮಾವಯಾಗಿದೆ. ಹಿಂದು ಸಮಾಜದ ಸಂರಕ್ಷಣೆಗೆ ಸಂಘಟನೆಗಳು, ಯುವಕರು ಎಲ್ಲಾ ಅಸಮಾನತೆಗಳನ್ನು ಬದಿಗಿಟ್ಟು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
   ಕುಂಜತ್ತೂರು ಘಟನೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಂಜೇಶ್ವರ, ಕುಂಜತ್ತೂರು ಪರಿಸರದ ಹಿಂದುಗಳ ಮನೆಗಳಿಗೆ ರಾತ್ರೋ ರಾತ್ರಿ ವ್ಯಾಪಕ ದಾಳಿ ಮಾಡಿ ಮನೆಮಂದಿಗೆ ಹೆದರಿಸಿ, ಅವಾಚ್ಯ ನುಡಿದು ಪೊಲೀಸರು ತೀವ್ರ ಕಿರುಕುಳ ನೀಡುತ್ತಿರುವುದಾಗಿ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬುಧವಾರ ಮುಂಜಾನೆ ದಾಳಿ ಮಾಡಿದ ಪೊಲೀಸರು ಕುಂಜತ್ತೂರು ಕ್ಷೇತ್ರ ಪರಿಸರದ ಶರತ್ರಾಜ್ ಶೆಟ್ಟಿ, ಚಕ್ರತೀರ್ಥದ ಕಮಲಾಕ್ಷ, ಕುಂಜತ್ತೂರಿನ ರವೀಶ ಮೊದಲಾದ ಯುವಕರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದರ ಹಿನ್ನೆಲೆಯಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೀಡಾದ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಪರಿಸರದ ನಾರಾಯಣ ಶೆಟ್ಟಿ, ಸುರೇಶ್ ಕುಲಾಲ್, ಚಕ್ರತೀರ್ಥದ ನಾರಾಯಣ ಮೂಲ್ಯ ಮೊದಲಾದವರ ಮನೆಗಳಿಗೆ ಭೇಟಿ ನೀಡಿದ ಶಶಿಕಲಾ ಟೀಚರ್ ಎಲ್ಲರಿಗೂ ಸಾಂತ್ವನ ನೀಡಿ ಧೈರ್ಯ ತುಂಬಿದರು.
     ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಧಾಮರ್ಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬಿಜೆಪಿ ನೇತಾರ ಹರೀಶ್ಚಂದ್ರ ಮಂಜೇಶ್ವರ, ಹಿಂದು ಐಕ್ಯವೇದಿಕೆಯ ಮಂಜೇಶ್ವರ ತಾಲೂಕು ಸಂಘಟನಾ ಕಾರ್ಯದಶರ್ಿ ಸಂದೀಪ್ ಗಟ್ಟಿ ಎಂ., ಮಹಿಳಾ ಐಕ್ಯವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ವಸಂತಿಕೃಷ್ಣನ್  ಕುಂಬಳೆ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಮೊಕ್ತೇಸರ ರವೀಂದ್ರ ರಾವ್ ಚಕ್ರತೀರ್ಥ, ಬಿಜೆಪಿ ಮುಖಂಡರುಗಳಾದ ನವೀನ್ ಮಜಾಲ್, ರಾಜೇಶ್ ತೂಮಿನಾಡು, ಚಂದ್ರಹಾಸ ಸುವರ್ಣ ಕುಂಜತ್ತೂರು, ಶ್ರೀ ಮಹಾಲಿಂಗೇಶ್ವರ ಸ್ಪೋಟ್ಸರ್್ ಕ್ಲಬ್ನ ಅಧ್ಯಕ್ಷ ಕಿಶೋರ್ ಶೆಟ್ಟಿ ಕುಂಜತ್ತೂರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries