ಡೈನೋಸರ್ ಪಾಕರ್ಿನಲ್ಲಿ ಸಾಂತ್ವನ ಸ್ಪರ್ಶ
ಮಂಜೇಶ್ವರ: ಸೆಕೆಂಡರಿ ಪಾಲಿಯೇಟಿವ್ ಕೇರ್ ಮಂಜೇಶ್ವರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೇಶ್ವರ ಇದರ ಆಶ್ರಯದಲ್ಲಿ ವಿಕಲಸ ಚೇತನರಿಗಾಗಿರುವ ಸಾಂತ್ವನ ಸ್ಪರ್ಶ ಹಾಗೂ ಕ್ರಿಸ್ಮಸ್ ಆಚರಣೆಯು ಮಂಜೇಶ್ವರ ಡೈನೋಸರ್ ಪಾಕರ್ಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಜರುಗಿತು.
ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್ರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಬಿಳಿ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಸಾಂತ್ವನ ಸ್ಪರ್ಶದ ಮೂಲಕ ದೈಹಿಕ ಅನಾರೋಗ್ಯದಿಂದ ಬಳಲುವ ಮಂದಿಗೆ ಸ್ನೇಹ ಹಾಗೂ ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಶ್ಲಾಘನೀಯ. ವಿವಿಧ ಕ್ಷೇತ್ರದ ಜನರು ಒಟ್ಟಾಗಿ ಸಂಘಟಿಸಿದ ಈ ಕಾರ್ಯಕ್ರಮವು ಮಾದರಿ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು. ಶಾರೀರಕ ವೈಫಲ್ಯತೆಗಳನ್ನು ಮಾನಸಿಕ ಅಸ್ಥಿರತೆಯನ್ನು ಗಮನಿಸಿ ಅವರಿಗೆ ಅಗತ್ಯದ ಸೌಲಭ್ಯಗಳಾದ ಗಾಲಿಕುಚರ್ಿ ಮುಂತಾದ ವಸ್ತುಗಳನ್ನು ಹಾಗೂ ಚಿಕಿತ್ಸೆಯನ್ನೂ ನೀಡುತ್ತಿರುವ ಕಾರ್ಯಚಟುವಟಿಕೆಗಳೊಂದಿಗೆ ತಾನು ಬೆಂಬಲವಾಗಿ ನಿಲ್ಲುವುದಾಗಿ ಭರವಸೆಯನ್ನಿತ್ತರು. ಗಾಲಿಕುಚರ್ಿ ಲಭಿಸದೆ ಇರುವ ಅಂಗಿವಿಕಲರಿಗೆ ಆದಷ್ಟು ಬೇಗ ಅದನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದವರು ಹೇಳಿದರು. ಗ್ರಾಮ ಪಂಚಾಯತಿಗಳು ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾದಲ್ಲಿ ಅಗತ್ಯದ ಧನಸಹಾಯ ನೀಡುವುದಾಗಿ ಅವರು ಹೇಳಿದರು. ಸಾಮಾನ್ಯ ಜನರೂ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಒಮ್ಮತದಿಂದ ಕೈಜೋಡಿಸದಾಗ ಈ ಪ್ರಯತ್ನ ಇನ್ನಷ್ಟು ಯಶಸ್ಸು ಕಾಣುವುದರಲ್ಲಿ ಸಂದೇಹವಿಲ್ಲ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಓಖಿ ದುರಂತಕ್ಕೆ ಬಲಿಯಾದವರ ಆತ್ಮ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಆ ಬಳಿಕ ಕ್ರಿಸ್ಮಸ್ ಕೇಕನ್ನು ಅಬ್ದುಲ್ ಅಜೀಜ್ ಹಾಜಿ, ಫಾ.ವೆಲೇರಿಯನ್ ಲೂಯಿಸ್ ಹಾಗೂ ರಾಜ ಬೆಳ್ಚಪ್ಪಾಡ ಜೊತೆಯಾಗಿ ತುಂಡರಿಸಿ ಶಾರೀರಿಕ ಸಮಸ್ಯೆಯಿಂದ ನಡೆದಾಡಲಾಗದೆ ಇರುವವರ ಬಳಿ ಸಾಗಿ ಕೇಕನ್ನು ಬಾಯಿಗೆ ನೀಡಿ ಕ್ರಿಸ್ಮಸ್ ಟೊಪಿಯನ್ನು ತಲೆಗಿಟ್ಟು ಮತೀಯ ಸೌಹಾರ್ಧತೆಯನ್ನೂ ಸಾರಿದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಮಾತನಾಡಿ ಮನೆಯಲ್ಲಿ ಹಾಗೂ ಸಮಾಜದಲ್ಲಿ ದೈಹಿಕವಾದ ತೊಂದರೆಗಳನ್ನು ಅನುಭವಿಸುವ ಜನರನ್ನು ಪ್ರೀತಿ ಹಾಗೂ ಗೌರವದಿಂದ ನೋಡಿಕೊಂಡು ಅವರಿಗೆ ಮಾನಸಿಕವಾಗಿ ನೆಮ್ಮದಿ ಹಾಗೂ ಧೈರ್ಯವನ್ನು ನೀಡಬೇಕು. ವಿವಿಧ ಚಟುವಟಿಕೆಗಳಲ್ಲಿ ಅವರಿಗೂ ಪಾಲ್ಗೊಳ್ಳಲು ಅನುವುಮಾಡಿಕೊಟ್ಟಾಗ ಉತ್ಸಾಹದಿಂದ ಅವರೂ ಬದುಕಲು ಸಾಧ್ಯ ಹಾಗೆಯೇ ಅವರಿಗೆ ದೊರೆಯುವ ಸೌಲಭ್ಯಗಳನ್ನು ಪ್ರಯೋಜನವನ್ನು ಪಡೆಯಲು ಹಿಂಜರಿಯಬಾರದು ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಅವರ ಪ್ರತಿಭೆಯನ್ನು ಪ್ರದಶರ್ಿಸಲು ಅವಕಾಶ ನೀಡುತ್ತವೆ. ಮಾತ್ರವಲ್ಲದೆ ಮನೆಯಿಂದ ಹೊರಬಂದು ಮನಸನ್ನು ಹಗುರಾಗಿಸಿ ಜೀವನವನ್ನು ಪ್ರೀತಿಸಲು ಕಲಿಸುತ್ತವೆ ಎಂದು ಅಭಿಪ್ರಾಯ ಪಟ್ಟರು.
ಗಡಿನಾಡಿನ ಯಕ್ಷಿಣಿಗಾತರ್ಿ ಕು.ತೇಜಸ್ವಿನಿ ಕಡಂಗೋಡಿ ಇವರಿಂದ ಜಾದೂ ನೃತ್ಯ ಪ್ರದರ್ಶನ, ಮೀಡಿಯಾ ಕ್ಲಾಸಿಕಲ್ನ ವಸಂತ ಬಾರಡ್ಕ ಅವರ ಕನ್ನಡ ಗೀತೆ, ಅಬ್ದುಲ್ ಕರೀಂ ಮಂಗಲ್ಪಾಡಿ, ಕಿರಣ್ ಬೀಜದಕಟ್ಟೆ ಅವರ ಗಾಯನ ಹಾಗೂ ನಾಸಿಕ ನಾದ ವಿಸ್ಮಯಕ್ಕೆ ಹೆಸರಾಗಿರುವ ಅಂಬಿಕಾ ಅವರಿಂದ ಮಿಮಿಕ್ರಿ ಪ್ರೇಕ್ಷಕರ ಕರತಾಡನಕ್ಕೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಿಯೇಟಿವ್ ಚಿಕಿತ್ಸೆ ಪಡೆಯುತ್ತಿರುವವರು ಗಾಯನದ ಮೂಲಕ ಜನಮನ ರಂಜಿಸಿದರು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಎನ್.ಎಸ್.ಎಸ್.ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನೆರೆದವರಿಗೆಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಿನಲ್ಲಿ ಒಂದು ವ್ಯತ್ಯಸ್ತ ಹಾಗೂ ಅಪರೂಪದ ಸುಂದರ ಕಾರ್ಯಕ್ರಮವಾಗಿ ಮೂಡಿಬಂತು.
ಮಮತಾ ದಿವಾಕರ್, ಸಯ್ಯದ್ ಸೈಪುಲ್ಲಾ ತಂಙಳ್ ಯು.ಕೆ.ಯೂಸುಫ್, ಜೋಸೆಫ್ ಕ್ರಾಸ್ತಾ, ಅಬ್ದುಲ್ಲಾ ಕೆ, ಲವೀನಾ ಮ್ಯಾಥ್ಯೂ, ಅಬ್ದುಲ್ ಹಮೀದ್, ಕೆ.ಆರ್.ಜಯಾನಂದ, ಶಂಶಾದ್ ಶುಕೂರ್, ಹಸೀನ.ಕೆ, ಲಕ್ಷ್ಮಿ.ಕೆ, ಡಾ.ಸೌಮ್ಯ ನಾಯರ್, ಬ್ಲಾಕ್ ಪಂಚಾಯತಿ ಸದಸ್ಯರಾದ ಆಶಾಲತಾ.ಬಿ.ಯಂ, ದಯಾನಂದ
ಪ್ರಸಾದ್ ರೈ, ಸದಾಶಿವ.ಕೆ, ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಲಕ್ಷ್ಮಿ, ಹಾಗೂ ನೂತನ್ ಕುಮಾರ್.ಕೆ ಮಿಸ್ಬಾನ, ಕೆ.ಯಂ.ಅಬ್ದುಲ್ ಖಾದರ್, ಝಡ್.ಎ.ಕಯ್ಯಾರು, ಶಾಹುಲ್ ಹಮೀದ್, ಮನಾಫ್ ನುಳ್ಳಿಪ್ಪಾಡಿ, ಮೊಹಮ್ಮದ್ ಮುಸ್ತಫಾ, ಶಿಜಿ ಶೇಖರ್, ರಂಜನಾ ನಾಯರ್, ಶಾಹುಲ್ ಹಮೀದ್ ಬಂದ್ಯೋಡು, ಬಿ.ಎಮ್.ಮುಸ್ತಫಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.