ಮಾತೃಭಾಷೆಯಷ್ಟು ಹೃದಯಕ್ಕೆ ಹತ್ತಿರವಾದುದು ಬೇರಿಲ್ಲ-ಜಯರಾಮ ಮಂಜತ್ತಯ ಎಡನೀರು
ಉಪ್ಪಳ: ಸಂವಹನ, ಸಂಸ್ಕೃತಿ ಸಂವರ್ಧನೆಯಲ್ಲಿ ಪ್ರಧಾನ ಪಾತ್ರವಹಿಸುವ ಭಾಷೆಗಳ ಬೆಳವಣಿಗೆ ನಿತ್ಯ ನಿರಂತರವಾಗಿರುತ್ತದೆ. ಆದರೆ ಇಂದು ಭಾಷಾ ಸಾಮರಸ್ಯದ ಬಗ್ಗೆ ಎಲ್ಲೆಡೆ ವ್ಯಾಪಕ ಚಿಂತನೆಗಳು ನಡೆಯುತ್ತಿದ್ದರೂ ಮೊದಲು, ಮಾತೃಭಾಷೆಯನ್ನು ಪ್ರೀತಿಸುವ, ಅದರ ಬೆಳವಣಿಗೆಗೆ ಪುಷ್ಠಿ ನೀಡುವ ಕೆಲಸ ನಡೆಯಬೇಕು ಎಂದು ಕೇರಳ ಪಾತರ್ಿಸುಬ್ಬ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೊಡಿನ ಅಪೂರ್ವ ಕಲಾವಿದರು ಸಮಸ್ಥೆಯು ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಕಾರದೊಂದಿಗೆ ಹಮ್ಮಿಕೊಂಡಿರುವ "ಕನ್ನಡ ಚಿಂತನೆ" ಸರಣಿ ಕಾರ್ಯಕ್ರಮದ ಭಾಗವಾಗಿ ಭಾನುವಾರ ಉಪ್ಪಳ ಸಮೀಪದ ಐಲ ಶ್ರೀಶಾರದಾ ಹಿರಿಯ ಪ್ರಾಥಮಿಕ ಬೋವಿ ಶಾಲೆಯಲ್ಲಿ ನಡದ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಪ್ರೇಮವೆಂಬುದು ಅಂತರಂಗದೊಳಗೆ ಗುಪ್ತಗಾಮಿಯಾಗಿರುವ ಸಂವೇದನೆಯಾಗಿದ್ದು, ಮಾತೃಭಾಷೆಯ ಭಾವ ಸ್ಪುರಣತೆ ಆನಂದ ನೀಡುತ್ತದೆ. ಆದರೆ ಕನ್ನಡ ಭಾಷೆ ಸಂಸ್ಕೃತಿಯನ್ನು ಗಡಿನಾಡು ಕಾಸರಗೋಡಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಚಿಂತನೆಗಳಂತಹ ಚಟುವಟಿಕೆಗಳು ಪೂರಕ ವತಾವರಣ ನಿಮರ್ಿಸುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯ ಮೂಲ ಪರಂಪರೆ, ಸಂಸ್ಕೃತಿ ಸಾಗಿಬಂದ ಮಾರ್ಗಗಳ ಬಗೆಗಿನ ಅಭಿಮಾನ, ಮಾನವೀಯತೆಯ ಸ್ಪರ್ಶಕ್ಕೆ ಮಾತೃ ಭಾಷೆಯೊದಗಿಸುವ ಸ್ವರೂಪವನ್ನು ಬೇರಾವುದೂ ನೀಡಲಾರವು ಎಂದು ತಿಳಿಸಿದ ಅವರು, ಮಾತೃಭಾಷೆಯೊಂದಿಗಿನ ಸಂಬಂಧದ ಕುಂಠಿತತೆ ಸಮಗ್ರ ಬದುಕಿನ ದೀವಾಳಿತನದ ಸಂಕೇತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಭಾಷೆ, ಸಮೃದ್ದ ಸಂಸ್ಕ್ರತಿಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಇನ್ನಷ್ಟು ಕ್ರಿಯಾತ್ಮಕ ಚಟುವಟಿಕೆಗಳ ನಡೆದು ಬರಲಿ ಎಂದು ಅವರು ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಅವರು ಗಡಿನಾಡಿನ ಭಾಷಾ ಸೌಹಾರ್ಧತೆಯ ಬಗ್ಗೆ ವಿಶೇಷೋಪನ್ಯಾಸ ನೀಡಿ ಮಾತನಾಡಿ, ಬಹುಭಾಷೆಗಳ ಕಾಸರಗೋಡಿನಲ್ಲಿ ವೈವಿಧ್ಯಮಯ ಭಾಷೆಗಳ ಜೊತೆಗೆ ವಿಶಿಷ್ಟ ಪರಂಪರೆಯೂ ಬೆಳೆದುಬಂದಿದೆ. ಜಗತ್ತಿನ ಶ್ರೇಷ್ಠ ಭಾಷೆಗಳಲ್ಲೊಂದಾದ, ಸಮೃದ್ದ ಸಂಸ್ಕೃತ ಭಾಷೆ ಇಂದು ಬಳಕೆಯಲ್ಲಿ ಹಿಂದುಳಿದಿರುವುದನ್ನು ಮಾನದಂಡವಾಗಿಸಿ ಸ್ಥಳೀಯ ಇತರ ಭಾಷೆಗಳನ್ನು ಆ ದೃಷ್ಟಿಕೋನದಲ್ಲಿ ಅಳೆಯುವ ಅನಿವಾರ್ಯತೆ ಇದೆ ಎಂದು ತಿಳಿಸಿದರು. ವಿಶಾಲ ಭರತ ಖಂಡದಲ್ಲಿ ವೈವಿಧ್ಯಮಯ ಭಾಷಾ ಸಮೂಹ ಬೆಳೆದುಬಂದಿದ್ದು, ಶ್ರೀಮಂತ ಹಿನ್ನೆಲೆಯ ಅಂತಹ ಭಾಷೆಗಳನ್ನು ಬಲನೀಡಿ ಪ್ರೋತ್ಸಾಹಿಸಬೇಕಿದ್ದು, ಪ್ರಭಲ ಜಾಗೃತಿಯ ಅಗತ್ಯ ಇದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೇರಳ ತುಳು ಅಕಾಡೆಮಿಯ ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್ ಮಾತನಾಡಿ, ಹಳೆಯ ಕಾಸರಗೋಡು ಮತ್ತು ಹೊಸದುರ್ಗ ತಾಲೂಕುಗಳ ಕನ್ನಡ ನೆಲ ವಿವಿಧ ಕಾರಣಗಳಿಂದ ಕೇರಳಕ್ಕೆ ಸೇರ್ಪಡೆಗೊಂಡಿರುವುದು ದೌಭರ್ಾಗ್ಯಕರವೆಂದು ತಿಳಿಸಿದರು. ಆಂಗ್ಲ ಭಾಷಾ ವ್ಯಾಮೋಹ ಕನ್ನಡ ಭಾಷೆ, ಸಂಸ್ಕೃತಿಗೆ ನೀಡಿರುವ ಹೊಡೆತ ಕನ್ನಡದ ಇಂದಿನ ದುರ್ಗತಿಗೆ ಪ್ರಧಾನ ಕಾರಣವಾಗಿದ್ದು, ದೈನಂದಿನ ಬಳಕೆಯಿಂದ ಹಿಂದುಳಿಯಲ್ಪಡುವ ಕಾರಣ ಕನ್ನಡದ ಧ್ವನಿ ಕ್ಷೀಣಿಸುವ ಸಾಧ್ಯತೆಗಳಿದ್ದು, ಈ ಬಗೆಗಿನ ಅರಿವು ವಿಸ್ತರಿಸುವಲ್ಲಿ ಕನ್ನಡ ಚಿಂತನೆ ಪರಿಣಾಮಕಾರಿ ಎಂದು ತಿಳಿಸಿದರು.
ಅಪೂರ್ವ ಕಲಾವಿದರು ಸಂಸ್ಥೆಯ ಸಂಚಾಲಕ ಎಸ್.ಜಗನ್ನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಚಿಂತನೆಯ ಬಗ್ಗೆ ಮಾಹಿತಿ ನೀಡಿದರು.ಸಂಸ್ಥೆಯ ನಿದರ್ೇಶಕ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಉಪಸ್ಥಿತರಿದ್ದು ಮಾತನಾಡಿದರು. ವೇಣುಗೋಪಾಲ ಶೇಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ಸುವರ್ಣ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ವೈವಿದ್ಯಮಯ ನೃತ್ಯ, ಗಾಯನ, ಮಿಮಿಕ್ರಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.