ಪಲ್ಲವಂ=ತ್ರಿದಿನ ಸಂಸ್ಕೃತ ಶಿಬಿರ ಸಮಾರೋಪ
ಪೆರ್ಲ: ಶಿಕ್ಷಣದಲ್ಲಿ ಭಾಷಾ ಕಲಿಕೆ ಅತ್ಯಂತ ಮಹತ್ವದ್ದಾಗಿದ್ದು, ಇತರ ಪಠ್ಯಗಳ ಅಧ್ಯಯನಕ್ಕೆ ಪ್ರೇರಕವಾಗಿರುವುದು. ಈ ನಿಟ್ಟಿನಲ್ಲಿ ಭಾಷಾ ಅಧ್ಯಯನಕ್ಕೆ ಪೂರಕವಾಗಿ ಸಂಘಟಿಸುವ ವಿಶೇಷ ತರಬೇತಿ ಶಿಬಿರಗಳು ಭಾಷಾ ಕಲಿಕೆಯಲ್ಲಿ ಹೊಸ ಅರಿವಿಗೆ ಕಾರಣವಾಗಿ ಕಲಿಕಾ ಮಟ್ಟಕ್ಕೆ ಬಲ ನೀಡುತ್ತದೆ ಎಂದು ಶೇಣಿ ಶ್ರೀಶಾರದಾಂಬಾ ಹಿರಿಯ ಪ್ರಾಥಮಿಕ ಶಾಲಾ ಪ್ರಬಂಧಕಿ ಶಾರದಾ ವೈ ಅಭಿಪ್ರಾಯ ವ್ಯಕ್ತಪಡಿಸಿದರು.
ಶೇಣಿ ಶ್ರೀಶಾರದಾಂಬಾ ಶಾಲೆಯಲ್ಲಿ ನಡೆದ ಮೂರು ದಿನಗಳ ಕುಂಬಳೆ ಉಪಜಿಲ್ಲಾ ಮಟ್ಟದ ವಿಶೇಷ ಶಿಬಿರ ಪಲ್ಲವಂ ನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಶೇಣಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಎಸ್ ಅವರು, ಅತ್ಯಂತ ಪ್ರಬುದ್ದವಾದ ಸಂಸ್ಕೃತ ಭಾಷೆಯ ಕಲಿಕೆಗೆ ಪ್ರೇರಣೆ ನೀಡುವ ಶಿಬಿರವು ಶಿಬಿರಾಥರ್ಿಗಳಿಗೆ ಇನ್ನಷ್ಟು ಉತ್ಸಾಹ ನೀಡಲಿ. ಸಾಕಷ್ಟು ಅವಕಾಶಗಳಿರುವ ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಯುವ ಸಮೂಹ ಆಸಕ್ತಿಯಿಂದ ಮುಂದೆಬರಬೇಕು ಎಂದು ತಿಳಿಸಿದರು.
ಶಾಲಾ ಹಿರಿಯ ಶಿಕ್ಷಕಿ ತಾರಾ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕರ್ ಪೆರ್ದನೆ ಉಪಸ್ಥಿತರಿದ್ದು ಹಾರೈಸಿದರು.ಸುಕುಮಾರ ಬೆಟ್ಟಂಪಾಡಿ, ಅನಿತಕುಮಾರಿ, ವಿದ್ಯಾಗಿರಿ ನಂದಕುಮಾರ್ ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಶೇಣಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ.ಎಸ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲಾ ಸಂಸ್ಕೃತ ಅಕಾಡೆಮಿಕ ಕೌನ್ಸಿಲ್ ಪ್ರಧಾನ ಕಾರ್ಯದಶರ್ಿ ಮಧುಶ್ಯಾಮ್ ವಂದಿಸಿದರು.ಕೃಷ್ಣಪ್ರಸಾದ್ ಪ್ರಾರ್ಥನಾಗೀತೆ ಹಾಡಿದರು. ಶಿಬಿರದಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು.