HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ಸುದರ್ಶನ ನಿಮರ್ಿತ ಮೂರು ಮೋರಿ ಸಂಕಗಳ ತಡೆಗೋಡೆಗೆ ಬಿಳಿ ಬಣ್ಣ ಲೇಪನ
   ಪೆರ್ಲ: ಅಭಿವೃದ್ದಿ ಚಟುವಟಿಕೆಗಳನ್ನು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ನಿರ್ವಹಿಸಿದಲ್ಲಿ ಸಾಮಾಜಿಕ ಪರಿವರ್ತನೆಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸ್ವರ್ಗ ಪ್ರದೇಶದ ಯುವ ಸಮೂಹ ನಾಡಿಗೆ ಮಾದರಿಯಾಗಿ ಮಾಡಿ ತೋರಿಸುವಲ್ಲಿ ಮುಂದೆ ಮುಂದೆ ಹೆಜ್ಜೆಯಿರಿಸುತ್ತಿರುವುದು ಹೆಮ್ಮೆಯೆನಿಸಿದೆ.  ಊರ, ಪರ ಊರ, ಹಾಗೂ ವಿದೇಶಗಳಲ್ಲಿ ದುಡಿಯುತ್ತಿರುವ ದಾನಿಗಳಿಂದ ವಾಟ್ಸಪ್ಪ್ ಹಾಗೂ ಇತರ ಮೂಲಗಳಿಂದ ಸಂಗ್ರಹಿಸಿ ಸ್ವರ್ಗ ಹಾಗೂ ಆಸುಪಾಸಿನ  ಲೋಕೋಪಯೋಗಿ ರಸ್ತೆಯ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದ ಸುದರ್ಶನ ಗ್ರಾಮೀಣ ಅಭಿವೃದ್ಧಿ ಸಮಿತಿಯು ಸುಮಾರು 35,000 ರೂ ಖಚರ್ಿನಲ್ಲಿ ನೆಲಸಮ ಗೊಂಡಿದ್ದ ಬನತ್ತಡಿ, ಸ್ವರ್ಗ ಮೇಲಿನ ತಿರುವು ಹಾಗೂ ಶಾಲಾ ಬಳಿಯಲ್ಲಿನ ಮೂರು ಮೋರಿ ಸಂಕಗಳಿಗೆ ಬಿಳಿ ಬಣ್ಣ ಬಳಿಯಲಾಯಿತು.
      ಪೆರ್ಲ- ಸೂರಂಬೈಲು ( ಸ್ವರ್ಗ) ರಸ್ತೆಯ 3.8 ಕಿ.ಮೀ ರಸ್ತೆ
    ಈ ಮೊದಲು ಮೆಕೆಡಾಂ ಡಾಮರೀಕರಣ ಗೊಂಡಿದ್ದು ಉಳಿದ 1.8 ಕಿ.ಮೀ ರಸ್ತೆ  ಮರು ಡಾಮರೀಕರಣ ಭಾಗಶಃ ಪೂರ್ಣಗೊಂಡಿದ್ದು ಈ ರಸ್ತೆಯ ಮರುಡಾಮರೀಕರಣ ನಡೆದ ಭಾಗದಲ್ಲಿ ಈ ಮೂರೂ ಮೋರಿಸಂಕಗಳು ಒಳಪಟ್ಟಿವೆ. ಸಂಗ್ರಹಿತ ಮೊತ್ತವಲ್ಲದೆ ಪತ್ತಡ್ಕ ರಾಧಾಕೃಷ್ಣ ಭಟ್ ಅವರು ರೂ 8,000 ಹಾಗೂ ತಡೆಗೋಡೆ ನಿಮರ್ಾಣಕ್ಕಾಗು ಮಹೇಶ್ ಬೈರಡ್ಕ ಅವರು ಒಂದು ಲೋಡು ಕೆಂಗಲ್ಲನ್ನು ನೀಡಿದ್ದರು.
  ಚೆರ್ಕಳ- ಕಲ್ಲಡ್ಕ ರಸ್ತೆಯು ಬಹುತೇಕ ಹಾನಿಗೊಂಡಿದ್ದು ಅಡ್ಕಸ್ಥಳ ವಿಟ್ಲ ಮಾರ್ಗವಾಗಿ  ಕಾಸರಗೋಡು, ಪೆರ್ಲ ಭಾಗಗಳಿಂದ ಪುತ್ತೂರು ಕಡೆ ಸಾಗುವ ವಾಹನಗಳು ಇದೀಗ ಸ್ವರ್ಗ ಹಾದಿಯಾಗಿ ಸಾಗುತ್ತಿದ್ದು ವಾಹನ ದಟ್ಟಣೆಯಿಂದ ಕೂಡಿದ ಮಾರ್ಗವಾಗಿ ಮಾರ್ಪಟ್ಟಿದ್ದು  ಅತಿವೇಗದಲ್ಲಿ ಆಗಮಿಸುವ ವಾಹನಗಳು ಬೇಗನೆ ಗುರುತಿಸಿ ಅಪಾಯಗಳಿಂದ ಪಾರಾಗುವ  ಸಲುವಾಗಿ ಇದೀಗ ಈ ಮೂರೂ ಮೋರಿ ಸಂಕಗಳಿಗೆ ಬಿಳಿಬಣ್ಣ ಬಳಿಯಲಾಯಿತು.
ಸುದರ್ಶನ ತಂಡದ ನಾಗರಾಜ್, ಪುರುಷೋತ್ತಮ, ಗೋಪಾಲ ಕೃಷ್ಣ ಗೋಳಿಕಟ್ಟೆ, ಪದ್ಮನಾಭ ಹಾಗೂ ಅಜಿತ್ ಸ್ವರ್ಗ ನೇತೃತ್ವ ನೀಡಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries