HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಹಳೆಗನ್ನಡ ಛಂದೋ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಬೇಕಾಗಿದೆ= ತೆಕ್ಕೆಕರೆ ಶಂಕರನಾರಾಯಣ ಭಟ್
    ಕಾಸರಗೋಡು: ಹಳೆಗನ್ನಡ ಛಂದಸ್ಸುಗಳಾದ ಕಂದ,ವೃತ್ತಗಳಲ್ಲಿ ಇತ್ತೀಚೆಗೆ ಯಾರೂ ಸಾಹಿತ್ಯ ರಚನೆ ಮಾಡುತ್ತಿಲ್ಲ.ಹಳೆ ಸಾಹಿತ್ಯ ಸಂಪತ್ತನ್ನು ಮೂಲೆಗುಂಪಾಗಲು ಬಿಡದೆ; ಅದರಲ್ಲಿ ವ್ಯವಸಾಯಮಾಡಿ,ರಕ್ಷಿಸಿ ಪೋಷಿಸಿಕೊಂಡುಬರುವ ಅಗತ್ಯವಿದೆ ಎಂದು  ಗಮಕ ಕಲಾಪರಿಷತ್ತಿನ ಅಧ್ಯಕ್ಷ ತೆಕ್ಕೆಕರೆ ಶಂಕರನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಮಂಗಳವಾರ  ಸಿರಿಗನ್ನಡ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಹಳೆಗನ್ನಡ ಉಚಿತ ಸಾಹಿತ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕನ್ನಡ ಭಾಷೆ, ಸಾಹಿತ್ಯದ ಹೆಗ್ಗುರುತುಗಳಾದ ಅದರ ಶ್ರೀಮಂತ ವ್ಯಾಕರಣ, ಛಂದಸ್ಸುಗಳು ಇದೀಗ ಮರೆಯಾಗುವ ಭೀತಿ ಎದುರಿಸುತ್ತಿದೆ. ಭಾಷೆ, ಸಾಹಿತ್ಯಗಳ ಬೆಳವಣಿಗೆ ಮತ್ತು ಸುಂದರ ಆಹ್ಲಾದನೆಗೆ ಪ್ರೇರಕವಾಗುವ ಛಂದಸುಗಳನ್ನು ಕೈಬಿಟ್ಟಲ್ಲಿ ಭಾರೀ ಅಪಾಯಗಳು ಮುಂದೊಂದು ದಿನ ಎದುರಾಗುವುದು ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಆಯೋಜಿಸಲಾದ ಕಮ್ಮಟ ಯಶಸ್ವಿಯಾಗಲಿ ಎಂದು ಹಾರೈಸಿದರು.
   ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸಾಹಿತಿ,ಕವಿ, ವಿ.ಬಿ.ಕುಳಮರ್ವ ಇವರು ಕಂದಪದ್ಯ, ಭಾಮಿನಿಷಟ್ಪದಿ ಮೊದಲಾದ ಛಂದೋ ವಿಭಾಗಗಳಲ್ಲಿ ಸುಲಲಿತವಾಗಿ ಕವನ ರಚನೆಯ ವಿಧಾನವನ್ನು ಸೋದಾಹರಣೆಯೊಂದಿಗೆ ಆಶುಕವನವನ್ನು ರಚನೆಮಾಡಿ ತರಬೇತಿಯನ್ನಿತ್ತರು.
ಕಾಸರಗೋಡು ಸರಕಾರಿ ಕಾಲೇಜಿನ ದ್ವಿತೀಯ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಪದವಿ ವಿದ್ಯಾಥರ್ಿಗಳಲ್ಲದೆ ಕೆಲವು ಜನ ಹಿರಿಯರೂ ಶಿಬಿರಾಥರ್ಿಗಳಾಗಿ ಭಾಗವಹಿಸಿದ್ದರು.ಶಿಬಿರದ ಪ್ರಾಯೋಜಕಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳನ್ನು ಸರಣಿ ಕಾರ್ಯಕ್ರಮವಾಗಿಹಮ್ಮಿಕೊಳ್ಳುವ ಯೋಜನೆಯನ್ನು ತಿಳಿಸಿದರು.ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ,ಏತಡ್ಕ ನರಸಿಂಹ ಭಟ್,ಕಲ್ಲಕಟ್ಟ ಶಾಲಾ ಮುಖ್ಯಶಿಕ್ಷಕ ಶ್ಯಾಮಪ್ರಸಾದ ಕುಳಮರ್ವ,ನಿವೃತ್ತ ಸಂಸ್ಕೃತ ಶಿಕ್ಷಕ ಡಾ.ಸದಾಶಿವ ಭಟ್ ಮೊದಲಾದವರು ಶುಭಾಶಂಸನೆಗೈದರು.ಶಿಬಿರಾಥರ್ಿಗಳು ಕಂದಪದ್ಯ ಹಾಗೂ ಷಟ್ಪದಿಗಳಲ್ಲಿ ತಮ್ಮ ಸ್ವರಚನೆ
   ಗಮಕ ಕಲಾಧರೆ ಶ್ರದ್ಧಾಭಟ್ ಪ್ರಾರ್ಥನೆಗೈದರು. ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಮಹಿಳಾಧ್ಯಕ್ಷೆ ವಿಜಯಾಸುಬ್ರಹ್ಮಣ್ಯ ಕುಂಬಳೆ ಸ್ವಾಗತಿಸಿ, ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ .ಬಿ ವಂದಿಸಿದರು.
   ಈ ವರ್ಷದ ಎಂಭತ್ತೆಂಟನೆ ಕಾರ್ಯವಾಗಿ ಸಿರಿಗನ್ನಡ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿತ್ತು.













ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries