ಆಧುನಿಕ ಯುವ ಸಮಾಜಕ್ಕೆ ಭರತೀಯ ದರ್ಶನಗಳ ಪರಿಚಯ ಅಗತ್ಯವಿದೆ-ಬಾಳೆಕುದ್ರು ಶ್ರೀ
ಮುಳ್ಳೇರಿಯ: ಸಮಗ್ರ ಜೀವನ ದೃಷ್ಟಿ, ಜೀವಕೋಟಿಗಳ ಸೌಖ್ಯದ ಬದುಕಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವಗಳನ್ನು ನೀಡಿ ಆಚರಿಸಿಕೊಂಡು ಬರುತ್ತಿರುವುದು ಭರತ ಖಂಡದ ಮಹತ್ವಪೂರ್ಣ ಕೊಡುಗೆಯಾಗಿದೆ. ಆಚಾರ ಅನುಷ್ಠಾನಗಳ ಮೂಲಕ ಪ್ರಕೃತಿಯೊಂದಿಗೆ ಅನುಸಂಧಾನಗೊಂಡಿರುವ ಭಾರತೀಯ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಶಿಕ್ಷಣ ಪರಂಪರೆಯನ್ನು ಅನುಷ್ಠಾನಗೊಳಿಸುವ ಅಗತ್ಯ ಇದೆ ಎಂದು ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿ ಆಶೀವರ್ಾದ ಪೂರ್ವಕ ಅನುಗ್ರಹ ನೀಡಿದರು.
ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ಮೂರು ದಿನಗಳಿಂದ ಆಯೋಜಿಸಿಲಾಗಿದ್ದ ಸಹಸ್ರ ನಾಳೀಕೇರ ಯಾಗ, ಮೇಧಾ ಸರಸ್ವತಿ ಹಾಗೂ ಧನ್ವಂತರಿ ಯಾಗದ ಸಮಾರೋಪದ ಭಾಗವಾಗಿ ಭಾನುವಾರ ನಡೆದ ವಿಶೇಷ ಧಾಮರ್ಿಕ ಸಭೆಯಲ್ಲಿ ಅವರು ಮಾತನಾಡಿದರು.
ಭರತ ಖಂಡದಲ್ಲಿ ಹಿಂದೊಮ್ಮೆ ಜನರ ನಂಬಿಕೆ, ನಡವಳಿಕೆಗಳಲ್ಲಿ ವ್ಯತಿರಿಕ್ತತೆ ಮೂಡಿದಾಗ ಪರಮಪೂಜ್ಯ ಆಚಾರ್ಯರಾದ ಶಂಕರ ಭಗವದ್ಪಾದರ ಮೂಲಕ ವಿವಿಧ ವಿಚಾರಧಾರೆಗಳನ್ನು ಒಗ್ಗೂಡಿಸಿ ಒಂದೆಡೆ ಕ್ರೋಢೀಕರಿಸಿ ಜನಜೀವನಕ್ಕೆ ಹೊಸ ದಿಕ್ಕು ತೋರಿಸಿದ್ದರು ಎಂದು ಶ್ರೀಗಳು ತಿಳಿಸಿದರು. ಪ್ರಕೃತಿ ಮತ್ತು ಅದರೊಳಗಿನ ಜೀವಜಾಲಗಳ ಪರಸ್ಪರ ಸಂಬಂಧಗಳನ್ನು ಅಥರ್ೈಸಿಕೊಂಡಿರುವ ಭಾರತೀಯ ದರ್ಶನ ಶಾಸ್ತ್ರಗಳು ಜಗತ್ತಿನ ಬೇರೆಡೆ ಇರಲಿಲ್ಲ. ಸಕಲ ಜೀವರಾಶಿಗಳ ಬದುಕಿನ ಮೂಲ ಸೆಲೆಯಾದ ಭಗವಾನ್ ಭಾಸ್ಕರನನ್ನು ಅಚರ್ಿಸುವ ಪವಿತ್ರ ಗಾಯತ್ರೀ ಮಂತ್ರದ ಮಹತ್ವವನ್ನು ಆಧುನಿಕ ಸಮಾಜಕ್ಕೆ ಸಮರ್ಥವಾಗಿ ನಿದರ್ೇಶಿಸುವ ಅಗತ್ಯ ಇದೆ ಎಂದು ತಿಳಿಸಿದ ಶ್ರೀಗಳು, ಭಗವಂತನ ಸ್ವರೂಪ ದರ್ಶನ ಒದಗಿಸುವ ಶಕ್ತಿ ಗುರುವಿಂದ ಲಭ್ಯವಾಗುತ್ತದೆ, ವಿದ್ಯೆಯನ್ನು ಧಾರೆಯೆರೆಯುವ ಮೂಲಕ ಗುರು ಅನುಗ್ರಹಿಸುತ್ತಾನೆ ಎಂದರು. ಶಿಕ್ಷಣ ಕೇಂದ್ರಗಳ ಮೂಲಕ ವಿದ್ಯಾಥರ್ಿಗಳಿಗೆ ಇಂತಹ ಧರ್ಮಪ್ರಜ್ಞೆ ಮೂಡಿಸುವ ಯತ್ನಗಳು ತುತರ್ು ಆಗಬೇಕಿದ್ದು, ಇದರಿಂದ ಆಧ್ಯಾತ್ಮಿಕತೆಯ ಪರಿಚಯದೊಡನೆ ಜೀವನ ಲಕ್ಷ್ಯದ ಬಗ್ಗೆ ಸ್ಪಷ್ಟ ಅರಿವು ಉಂಟಾಗುತ್ತದೆ ಎಂದು ಪೂಜ್ಯ ಶ್ರೀಗಳು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಗಾಯಕ ಶಶಿಧರ್ ಕೋಟೆ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಭಾರತೀಯತೆಯನ್ನು ತಿರುಚುವ ಯತ್ನಗಳನ್ನು ಮಾಡುವ ಮೂಲಕ ಭಾವೀ ಜನಾಂಗಕ್ಕೆ ತಪ್ಪು ದಾರಿಯನ್ನು ಪರಿಚಯಿಸುತ್ತಿರುವುದು ಆತಂಕಾರಿ. ಭಾರತೀಯ ಪರಂಪರೆ, ದರ್ಶನ, ಶಿಕ್ಷಣ ಕ್ರಮಗಳು ಸಮಗ್ರ ವಿಕಾಸವನ್ನು ಗುರಿಯಾಗಿರಿಸಿದ್ದು ಮನೋವಿಕಾಸದ ಪ್ರಧಾನ ಸೇತುವೆಯಾಗಿದೆ ಎಂದು ತಿಳಿಸಿದರು. ಭಾರತೀಯ ಸಂಗೀತ ಸಹಿತ ವಿವಿಧ ಕಲಾಪ್ರಕಾರಗಳು ಧರ್ಮ, ನಂಬಿಕೆ, ಆಧ್ಯಾತ್ಮಗಳೊಂದಿಗೆ ಸಂಬಂಧಗಳನ್ನು ಹೊಂದಿದ್ದು, ಎಲ್ಲರ ಒಳಿತನ್ನು ಬಯಸುತ್ತದೆ. ಅಂತಹ ಶಿಕ್ಷಣ, ಜೀವನ ಕ್ರಮ ಎಲ್ಲೆಡೆ ವ್ಯಾಪಿಸಬೇಕು ಎಂದು ಅವರು ತಿಳಿಸಿದರು.
ಯಾಗ ಸಮಿತಿ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ನಮಿತಾ ವಂದಿಸಿದರು. ಪ್ರಕಾಶ್ ಮಾಸ್ತರ್ ಮಾಯಿಲಂಕೋಟೆ ಕಾರ್ಯಕ್ರಮ ನಿರೂಪಿಸಿದರು.
ಭಾನುವಾರ ಬೆಳಿಗ್ಗೆ 5ಕ್ಕೆ ಯಾಗಗಳು ಪ್ರಾರಂಭಗೊಂಡು 10.30ಕ್ಕೆ ಬಾಳೆಕುದ್ರು ಶ್ರೀಗಳ ಸಮಕ್ಷಮ ಯಾಗಪೂಣರ್ಾಹುತಿ ನೆರವೇರಿತು. ಬಳಿಕ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರಿಂದ ಮೇಧಾ ಸರಸ್ವತಿ ಯಾಗಕ್ಕೆ ಸುವಸ್ತು ಸಮರ್ಪಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ಮೂರು ದಿನಗಳ ಯಾಗ ಸಮಾಪ್ತಿಗೊಂಡಿತು.