ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್!
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಬೂಟುಗಳಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಇರಬಹುದೆಂದು ಶಂಕೆಯಿಂದ ಅದನ್ನು ವಿಧಿವಿಜ್ಞಾನ ಪರಿಕ್ಷೆಗಾಗಿ ಕಳಿಸಿಕೊಡಲಾಗಿತ್ತು ಎನ್ನುವ ವಿಚಾರವನ್ನು ಮಾದ್ಯಮ ವರದಿಯೊಂದು ಬಹಿರಂಗಪಡಿಸಿದೆ.
ಬೂಟಿನಲ್ಲಿ "ಲೋಹದ ವಸ್ತು" ಕ್ಯಾಮರಾ ಅಥವಾ ರೆಕಾಡರ್ಿಂಗ್ ಚಿಪ್ ಏನಾದರೂ ಇತ್ತೆ ಎನ್ನುವುದನ್ನು ಪರೀಕ್ಷಿಸಲು ಅಧಿಕಾರಿಗಳು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಕಛೇರಿ (ಎಫ್ಒ) ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ ಎಂದು 'ಪಾಕಿಸ್ತಾನ ಟುಡೆ' ವರದಿ ಮಾಡಿದೆ.
ಇಸ್ಲಾಮಾಬಾದ್ ನ ವಿದೇಶಾಂಗ ಕಛೇರಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಖೈದಿಯನ್ನು ಭೇಟಿ ಮಾಡುವ ಮೊದಲು ಭದ್ರತಾ ಅಧಿಕಾರಿಗಳು ಜಾದವ್ ಅವರ ಪತ್ನಿ ಧರಿಸಿದ್ದ ಬೂಟುಗಳಲ್ಲಿ "ಲೋಹದ ವಸ್ತುವನ್ನು" ಪತ್ತೆಹಚ್ಚಲಾಗಿದೆ ಎಂದು ವಿದೇಶಾಂಗ ಕಛೇರಿ ದೃಢಪಡಿಸಿದೆ ಎಂದು ಡಾನ್ ಒಂದು ಪ್ರತ್ಯೇಕ ವರದಿಯಲ್ಲಿ ಹೇಳಿದೆ. ಜಾಧವ್ ಅವರ ಪತ್ನಿಯ ಬೂಟುಗಳನ್ನು ತಪಾಸಣೆಗಾಗಿ ತೆಗೆದುಕೊಂಡ ವೇಳೆ ಅವರಿಗೆ ಪಯರ್ಾಯ ಪಾದರಕ್ಷೆಗಳನ್ನು ನೀಡಲಾಗಿತ್ತು. ಇನ್ನು ಆಕೆ ಧರಿಸಿದ್ದ ಆಭರಣಗಳು ಸೇರಿದಂತೆ ಎಲ್ಲಾ ಇತರ ವಸ್ತುಗಳನ್ನೂ ಹಿಂತಿರುಗಿಸಲಾಗಿದೆ