HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೇರಳದ ಜೈಲುಗಳಲ್ಲಿ  ಆಧಾರ್ ಕಾಡರ್್ ಕಡ್ಡಾಯ
   ಕಾಸರಗೋಡು: ಕೇರಳದ ಎಲ್ಲಾ  ಜೈಲುಗಳಲ್ಲೂ  ಇನ್ನು  ಮುಂದೆ ಆಧಾರ್ ಕಾಡರ್್ ಕಡ್ಡಾಯಗೊಳಿಸಿ ಬಂಧೀಖಾನೆ ಇಲಾಖೆಯು ಮಹತ್ತರ ಆದೇಶ ಹೊರಡಿಸಿದೆ. ಇದೀಗ ಶಿಕ್ಷೆಗೊಳಪಟ್ಟವರಿಗೆ ಮಾತ್ರ ಆಧಾರ್ ಕಡ್ಡಾಯವಾಗಿತ್ತು.
    ಆದರೆ ಮುಂದಿನ ದಿನಗಳಲ್ಲಿ  ಜೈಲುಗಳಲ್ಲಿ  ಕೈದಿಗಳಾಗಿ ಇರುವವರಿಗೂ ಆಧಾರ್ ಕಡ್ಡಾಯಗೊಳಿಸಲು ಕ್ರಮ ಆರಂಭಿಸಲಾಗಿದೆ. ಈ ತನಕ ಶಿಕ್ಷೆಗೊಳಗಾದ ಕೈದಿಗಳನ್ನು  ಜೈಲಿಗೆ ಹಾಕುವ ಸಂದರ್ಭದಲ್ಲಿ  ಯಾವುದಾದರೂ ಒಂದು ದಾಖಲೆಯನ್ನು  ಸಲ್ಲಿಸಿದರೆ ಸಾಕಾಗಿತ್ತು. ಆದರೆ ವಿಚಾರಣೆ ಕೈದಿಗಳಿಗೆ ಇಂತಹ ನಿರ್ಬಂಧ ಇರಲಿಲ್ಲ. ಇದೀಗ ವಿಚಾರಣಾ ಕೈದಿಗಳಿಗೂ ಆಧಾರ್ ನಿರ್ಬಂಧಗೊಂಡಿರುವುದು ಹೊಸ
ವ್ಯವಸ್ಥೆಯಾಗಿದೆ.
    ಪ್ರಸ್ತುತ ಜೈಲುಗಳಲ್ಲಿರುವ ಎಷ್ಟು  ಮಂದಿ ಕೈದಿಗಳಿಗೆ ಆಧಾರ್ ಇದೆ ಎಂಬ ಬಗ್ಗೆ  ಸ್ಪಷ್ಟ  ಮಾಹಿತಿ ಇಲ್ಲ. ಆದ್ದರಿಂದ ಆಧಾರ್ ಇಲ್ಲದ ಕೈದಿಗಳಿಗೆ ಜೈಲುಗಳಲ್ಲಿ  ಕೂಡಲೇ ಆಧಾರ್ ಕಾಡರ್್ ಒದಗಿಸುವ ನಿಟ್ಟಿನಲ್ಲಿ  ವ್ಯವಸ್ಥೆ  ಮಾಡಿಕೊಡಲು ಸೂಚಿಸಲಾಗಿದೆ.
   ಕೈದಿಗಳ ಎಲ್ಲಾ  ಮಾಹಿತಿಗಳನ್ನು  ಆಧಾರ್ನೊಂದಿಗೆ ಜೋಡಿಸುವ ಮೂಲಕ ಪ್ರತ್ಯೇಕ ಮಾಹಿತಿ ಸಂಗ್ರಹಿಸಲು ಕೂಡ ನಿರ್ಧರಿಸಲಾಗಿದೆ. ಹೀಗೆ ಡಾಟಾ ಸಂಗ್ರಹದಲ್ಲಿ  ಕೈದಿಗಳಿಗೆ ಎಷ್ಟು  ಬಾರಿ ಪರೋಲ್ ಲಭಿಸಿದೆ ಮತ್ತು  ಯಾವ ಕಾರಣಕ್ಕಾಗಿ ಪರೋಲ್ ನೀಡಲಾಗಿದೆ ಎಂಬ ಬಗ್ಗೆಯೂ ವಿವರಣೆ ನಮೂದಿಸಲಾಗುವುದು.
   ಈ ಮೊದಲು ಜೈಲು ಶಿಕ್ಷೆ  ಅನುಭವಿಸಿದರೆ ಅದು ಎಷ್ಟು  ವರ್ಷ, ಆ ಸಂದರ್ಭದಲ್ಲಿ  ಎಷ್ಟು  ಬಾರಿ ಪರೋಲ್ ದೊರಕಿದೆ ಮುಂತಾದ ಎಲ್ಲಾ  ವಿವರಗಳನ್ನು  ಆಧಾರ್ ಆಧರಿತ ಡಾಟಾದೊಂದಿಗೆ ನೀಡಲು ತೀಮರ್ಾನಿಸಲಾಗಿದೆ.
   ಇದೀಗ ಆಧಾರ್ ಆಧರಿತ ಡಾಟಾ ತಯಾರಿಸುವ ಸಂದರ್ಭದಲ್ಲಿ  ರಾಜ್ಯದ ಎಲ್ಲಾ  ಜೈಲುಗಳಲ್ಲಿನ ಕೈದಿಗಳ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ ಮುಂದೆ ಪರೋಲ್ ದೊರಕಬೇಕಾದರೆ ಆಧಾರ್ ಕಡ್ಡಾಯಗೊಳಿಸಲು ಕೂಡ ತೀಮರ್ಾನಿಸಲಾಗಿದೆ.
  (ಬಾಕ್ಸ್)
       ರಾಜ್ಯದಲ್ಲಿ  7500 ಮಂದಿ ಕೈದಿಗಳು 
   ಕೇರಳದಲ್ಲಿ  ಮೂರು ಸೆಂಟ್ರಲ್ ಜೈಲು, 13 ಜಿಲ್ಲಾ  ಜೈಲು, 16 ಉಪ ಜೈಲುಗಳು, 16 ಸ್ಪೆಷಲ್ ಜೈಲುಗಳು, ಮೂರು ಮಹಿಳಾ ಜೈಲುಗಳಲ್ಲಾಗಿ ಸುಮಾರು 7500 ಮಂದಿ ಕೈದಿಗಳಿದ್ದಾರೆ. ಆಧಾರ್ ಕಡ್ಡಾಯಗೊಂಡರೆ ಇವರೆಲ್ಲರ ಸಮಗ್ರ ಚಿತ್ರಣ ದೊರಕಲಿದೆ. ಈ ಮಧ್ಯೆ ಜೈಲಿನ ಕೈದಿಗಳನ್ನು  ಭೇಟಿಯಾಗುವ ಸಂದರ್ಶಕರಿಗೂ ಆಧಾರ್ ನಿರ್ಬಂಧಗೊಳಿಸುವ ಆಲೋಚನೆಯನ್ನು  ಜೈಲು ಇಲಾಖೆ ಹೊಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries