ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿಯಾದ ಕುಲಭೂಷಣ್
ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದಡಿಯಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೀಡಾಗಿರುವ ಭಾರತದ ಕುಲಭೂಷಣ್ ಜಾದವ್ ಅವರು ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ತಾಯಿ ಮತ್ತು ಪತ್ನಿಯನ್ನು ಸೋಮವಾರ ಭೇಟಿ ಮಾಡಿದರು. ಈ ವೇಳೆ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಮಾತನಾಡಿದ್ದಾರೆ.
ಪಾಕಿಸ್ತಾನದಲ್ಲಿ ಕುಲಭೂಷಣ್ ಜಾದವ್ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರಿಂದ ಭಾರತದಲ್ಲಿದ್ದ ತಾಯಿ ಮತ್ತು ಪತ್ನಿ ಆತಂಕಕ್ಕೆ ಗುರಿಯಾಗಿದ್ದರು. ಮಗನನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಕುಲಭೂಷಣ್ ತಾಯಿ ಭಾರತ ಸಕರ್ಾರಕ್ಕೆ ಮನವಿ ಮಾಡಿದ್ದರು. ಅಂತೆ ಹಲವು ಪ್ರಯತ್ನಗಳ ನಂತರ ಕುಲಭೂಷಣ್ ಜಾದವ್ ಭೇಟಿಗೆ ಪಾಕಿಸ್ತಾನ ಒಪ್ಪಿಗೆ ನೀಡಿತ್ತು.
ಸೋಮವಾರ ಬೆಳಗ್ಗೆ ಕುಲಭೂಷಣ್ ಜಾದವ್ ತಾಯಿ ಮತ್ತು ಅವರ ಪತ್ನಿ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಲುಪಿದ್ದರು. ಅಲ್ಲಿ ಅವರಿಗೆ ಭಾರತೀಯ ರಾಯಭಾರ ಕಚೇರಿಯ ಡೆಪ್ಯೂಟಿ ಕಮಿಷನರ್ ಜೆಪಿ ಸಿಂಗ್ ಅವರು ಬರ ಮಾಡಿಕೊಂಡರು. ನಂತರ ಕುಲಭೂಷಣ್ ಜಾದವ್ ತಾಯಿ ಮತ್ತು ಪತ್ನಿ ಪಾಕಿಸ್ತಾನ ವಿದೇಶಾಂಗ ಕಚೇರಿಯಲ್ಲಿ ಕುಲಭೂಷಣ್ ಜಾದವ್ ರನ್ನು ಭೇಟಿ ಮಾಡಿ ಮಾತನಾಡಿದರು. ಈ ವೇಳೆ ಅವರೊಂದಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮಹಮದ್ ಆಸಿಫ್ ಅವರು ಜೊತೆಗಿದ್ದರು ಎಂದು ತಿಳಿದುಬಂದಿದೆ.
ಪಾಕ್ ವಿದೇಶಾಂಗ ಕಚೇರಿ ಸುತ್ತಮುತ್ತ ಭಾರಿ ಭದ್ರತೆ
ಕುಲಭೂಷಣ್ ಜಾದವ್ ರನ್ನು ಅವರ ಪತ್ನಿ ಮತ್ತು ತಾಯಿ ಭೇಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯದಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿದೆ. ಕಚೇರಿ ಸುತ್ತಮುತ್ತ ಭಾರಿ ಭದ್ರತೆ ಏರ್ಪಡಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ