HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                            ಡಿ.29ರಿಂದ ಮುಳ್ಳೇರಿಯದಲ್ಲಿ ಸಹಸ್ರ ನಾಳೀಕೇರ, ಮೇಧಾ ಸರಸ್ವತಿ, ಧನ್ವಂತರೀ ಮಹಾ ಯಾಗಗಳು ಆರಂಭ
   ಮುಳ್ಳೇರಿಯ: ಇಲ್ಲಿನ ವಿದ್ಯಾಶ್ರೀ ಯಾಗ ಸಮಿತಿಯ ನೇತೃತ್ವದಲ್ಲಿ, ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ, ವಿದ್ಯಾಥರ್ಿಗಳ ಜ್ಞಾನಾಭಿವೃದ್ಧಿಗಾಗಿ ಮೇಧಾ ಸರಸ್ವತೀ ಯಾಗ ಮತ್ತು ಸರ್ವರ ಆರೋಗ್ಯ ವೃದ್ಧಿಗಾಗಿ ಧನ್ವಂತರೀ ಯಾಗ ಡಿ.29ರಿಂದ 31 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
    ಡಿ.29ರಂದು ಬೆಳಿಗ್ಗೆ 9.30 ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಆಡಳಿತೆ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಇವರಿಂದ ಉಗ್ರಾಣ ಮುಹೂರ್ತ,  ಅಪರಾಹ್ನ 3.30ಕ್ಕೆ ಬೇಂಗತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪರಿಸರದಿಂದ ಮುಳ್ಳೇರಿಯ ಗಣೇಶ ಕಲಾ ಮಂದಿರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
    ಡಿ.30ರಂದು ಬೆಳಿಗ್ಗೆ 9ಕ್ಕೆ ದೀಪಜ್ವಲನೆ, 9.30ರಿಂದ ಯಾಗಗಳ ಬಗ್ಗೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವೇದಮೂತರ್ಿ ಕಶೆಕ್ಕೋಡಿ ಸೂರ್ಯನಾರಾಯಣ ಭಟ್, ಶ್ರೀಕೃಷ್ಣ ಉಪಾಧ್ಯಾಯ ಸುಳ್ಯ ಇವರಿಂದ ಉಪನ್ಯಾಸ, 11.15ರಿಂದ ಅಗ್ನಿಹೋತ್ರ ಪ್ರಾತ್ಯಕ್ಷಿತೆ, ವಿವರಣೆ, ಚಚರ್ೆ, ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ, 2ರಿಂದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 4.30ಕ್ಕೆ ಪೂರ್ಣಕುಂಭ ಸ್ವಾಗತ, 5.30ಕ್ಕೆ ಧಾಮರ್ಿಕ ಸಭಾಕಾರ್ಯಕ್ರಮ, ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಂದ ಆಶೀರ್ವಚನ, ಕಾಸರಗೋಡು ಶ್ರೀ ಮಲ್ಲಿಕಾಜರ್ುನ ಕ್ಷೇತ್ರ ಜೀಣರ್ೋದ್ಧಾರ ಸಮಿತಿ ಕಾಯರ್ಾಧ್ಯಕ್ಷ ರಾಮಪ್ರಸಾದ್ ಅಧ್ಯಕ್ಷತೆ ವಹಿಸುವರು, ಗೌರವ ಉಪಸ್ಥಿತಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವೇದಮೂತರ್ಿ ಕಶೆಕ್ಕೋಡಿ ಸೂರ್ಯನಾರಾಯಣ ಭಟ್, ಶ್ರೀಕೃಷ್ಣ ಉಪಾಧ್ಯಾಯ ಸುಳ್ಯ, ಅಗಲ್ಪಾಡಿ ಶ್ರೀಕ್ಷೇತ್ರದ ಆಡಳಿತೆ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ, ಕುಂಡಂಗುಳಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಕೆ.ವೇಣುಗೋಪಾಲನ್ ನಾಯರ್, ಸಂಜೆ 6.30ಕ್ಕೆ ದೇವತಾಪ್ರಾರ್ಥನೆ, ಅರಣಿಮಥನ, ರಾತ್ರಿ 7.30ಕ್ಕೆ ಯಾಗ ಮಂಟಪ ಸಂಸ್ಕಾರ, ಮಂಟಪ ಶುದ್ಧಿ, 8ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
    ಡಿ.31ರಂದು ಪ್ರಾತಃಕಾಲ 5ಕ್ಕೆ ಯಾಗಗಳ ಪ್ರಾರಂಭ, ಬೆಳಿಗ್ಗೆ 9.30ಕ್ಕೆ ಉಡುಪಿ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, 10.45ಕ್ಕೆ ಯಾಗಕ್ಕೆ ಸುವಸ್ತು ಸಮರ್ಪಣೆ, ಸ್ವಾಮೀಜಿಯವರಿಂದ ಆಶೀರ್ವಚನ, ಗಾಯಕ ಶಶಿಧರ ಕೋಟೆ ಬೆಂಗಳೂರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು, ಮಧ್ಯಾಹ್ನ 12ಕ್ಕೆ ಮೇಧಾ ಸರಸ್ವತೀ ಯಾಗದ ಮಹಾ ಮಂಗಳಾರತಿ, ಪ್ರಸಾದ ವಿತರಣೆ, 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries