HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

                ಘನವಾಹನಗಳಿಗೆ ಸಂಚಾರ ನಿಷೇಧ
   ಮಂಜೇಶ್ವರ: ಹೊಸಂಗಡಿಯಿಂದ ಕೊಡ್ಲಮೊಗರು ಮಾರ್ಗವಾಗಿ ವಿಟ್ಲ , ಆನೆಕಲ್ಲು , ಕನ್ಯಾನ, ಬಾಕ್ರಬೈಲು ಭಾಗಕ್ಕೆ ತೆರಳುವ ಘನ ವಾಹನಗಳಿಗೆ ಕೊಡ್ಲಮೊಗರಿನಲ್ಲಿರುವ 100 ಮೀಟರ್ ಅಂತರಾಜ್ಯ ಲೋಕೋಪಯೋಗಿ ರಸ್ತೆಗೆ ಕಾಂಕ್ರೀಟೀಕರಣ ಆರಂಭಗೊಂಡ ಹಿನ್ನೆಲೆಯಲ್ಲಿ  ಈ ದಾರಿಯಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಆದರೆ ಬೈಕ್, ರಿಕ್ಷಾ , ಕಾರು ಮುಂತಾದ ವಾಹನಗಳಿಗೆ ಈ ರಸ್ತೆಯ ಬದಿಯಲ್ಲಿ  ಸಂಚರಿಸಲು ವ್ಯವಸ್ಥೆ  ಮಾಡಲಾಗಿದೆ.
ಬಸ್ ಮತ್ತು  ಇನ್ನಿತರ ಘನ ವಾಹನಗಳಿಗೆ ಬಾಕ್ರಬೈಲಿನಿಂದ ಹೊಸಂಗಡಿ ಕಡೆ ಬರುವುದಾದರೆ ಬಾಕ್ರಬೈಲು - ಮುಡಿಪು - ಪೊಯ್ಯತ್ತಬೈಲು - ದೈಗೋಳಿ ಮೂಲಕ ಹೊಸಂಗಡಿಗೆ ತೆರಳಬಹುದು. ವಿಟ್ಲದಿಂದ ಹೊಸಂಗಡಿ ಭಾಗಕ್ಕೆ ಆಗಮಿಸುವ ವಾಹನಗಳು ವಿಟ್ಲ , ಸಾಲೆತ್ತೂರು, ಬಾಕ್ರಬೈಲು, ಮುಡಿಪು, ಪೊಯ್ಯತ್ತಬೈಲು, ದೈಗೋಳಿ ಮೂಲಕ ಹೊಸಂಗಡಿಗೆ ಸಂಚರಿಸಬಹುದು. ಕನ್ಯಾನದಿಂದ ಹೊಸಂಗಡಿ ಭಾಗಕ್ಕೆ ಬರುವುದಾದರೆ ಕನ್ಯಾನ, ಆನೆಕಲ್ಲು , ಗುವೆದಪಡ್ಪು , ಬಾಕ್ರಬೈಲು, ಮುಡಿಪು, ಪೊಯ್ಯತ್ತಬೈಲು, ದೈಗೋಳಿ ಮೂಲಕ ಹೊಸಂಗಡಿಗೆ ಮತ್ತು  ಕನ್ಯಾನ, ಆನೆಕಲ್ಲು , ಕತ್ತರಿಕೋಡಿ, ಕುಂಟುಪದವು, ದೈಗೋಳಿ ಮೂಲಕ ಹೊಸಂಗಡಿ ಭಾಗಕ್ಕೆ ಸಂಚರಿಸಬಹುದು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries