15 ಎಕ್ರೆಗಿಂತ ಹೆಚ್ಚು ಜಮೀನು ಮುಟ್ಟುಗೋಲು
ಕಾಸರಗೋಡು: ಸರಕಾರವು ನಿಗದಿಪಡಿಸಿದುದಕ್ಕಿಂತ ಹೆಚ್ಚು ಜಮೀನು ಕೈವಶವಿರಿಸಿಕೊಂಡಲ್ಲಿ ಅಂತಹ ಹೆಚ್ಚುವರಿ ಭೂಮಿಯನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಕೇರಳದಲ್ಲಿ ಕಾನೂನುಪರವಾಗಿ ಓರ್ವ ವ್ಯಕ್ತಿ ಗರಿಷ್ಠ 15 ಎಕ್ರೆ ಜಾಗ ಕೈವಶವಿರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚು ಜಮೀನು ಇದ್ದಲ್ಲಿ ಅದನ್ನು ಹೆಚ್ಚುವರಿ ಜಮೀನು ಅಂತ ಘೋಷಿಸಿ ಸರಕಾರವು ವಶಪಡಿಸಿಕೊಂಡು ಭೂರಹಿತರಿಗೆ ವಿತರಿಸಲಿದೆ ಎಂದರು.
ಸರಕಾರಿ ಜಮೀನು ಕೈವಶವಿರಿಸಿಕೊಂಡವರೂ ಸೇರಿದಂತೆ ಅರ್ಹರಾದ ಎಲ್ಲರಿಗೂ ಮುಂದಿನ ಎರಡು ವರ್ಷಗಳಲ್ಲಿ ಆ ಜಾಗಕ್ಕೆ ಭೂ ಹಕ್ಕುಪತ್ರ (ಪಟ್ಟಾ ) ವಿತರಿಸಲಾಗುವುದು ಎಂದು ಸಚಿವರು ಹೇಳಿದರು. ಭೂರಹಿತರಿಗೆ ಮನೆ ನಿಮರ್ಿಸಲು ಅಗತ್ಯದ ಭೂಮಿ ನೀಡುವ ಯೋಜನೆಗೆ ಕೇರಳ ರಾಜ್ಯೋತ್ಸವ ದಿನ ಚಾಲನೆ ನೀಡಲಾಗುವುದು. ರಾಜ್ಯದ ಎರಡು ಲಕ್ಷಕ್ಕಿಂತಲೂ ಹೆಚ್ಚಿನವರಿಗೆ ಭೂ ಹಕ್ಕುಪತ್ರ ನೀಡಲು ಇನ್ನೂ ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡರು.
ಕಣ್ಣೂರು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಭೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಕೈವಶವಿರಿಸಿಕೊಳ್ಳಲು ಕಾನೂನುಪರವಾದ ದಾಖಲೆಪತ್ರಗಳು ಕೈಯಲ್ಲಿ ಇಲ್ಲದಿರುವ ಅದೆಷ್ಟೋ ಮಂದಿಗೆ ಸರಕಾರದಿಂದ ಲಭಿಸಬೇಕಾಗಿರುವ ಹಲವಾರು ಸವಲತ್ತುಗಳು ಲಭಿಸದಂತಾಗಿವೆ. ಲ್ಯಾಂಡ್ ಟ್ರಿಬ್ಯೂನಲ್ಗಳು ಭೂ ಮಾಲಕತ್ವ ಕುರಿತಾದ ಕೇಸುಗಳಿಗೆ ಶೀಘ್ರ ಪರಿಹಾರ ಕೈಗೊಂಡು ಅರ್ಹರಾದ ಎಲ್ಲರಿಗೂ ಭೂ ಹಕ್ಕುಪತ್ರ ನೀಡಲಾಗುವುದು ಎಂದು ಸಚಿವರು ಹೇಳಿದರು.