ಸವಾಕ್ ಜಿಲ್ಲಾ ಕುಟುಂಬ ಸಂಗಮ, ಮಹಿಳಾ ಘಟಕ ರೂಪೀಕರಣ, ಆಮಂತ್ರಣ ಪತ್ರಿಕೆ ಬಿಡುಗಡೆ
ಕುಂಬಳೆ: ಜನವರಿ 20 ರಂದು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಮತ್ತು ತೆರೆದ ರಂಗಮಂದಿರ ಸಂಧ್ಯಾರಾಗಂ ನಲ್ಲಿ ನಡೆಯಲಿರುವ ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸ್ಸಿಯೇಶನ್ ಕೇರಳ(ಸವಾಕ್) ಜಿಲ್ಲಾ ಕುಟುಂಬ ಸಂಗಮದ ವಿಶೇಷ ಸಭೆ ಮತ್ತು ಮಹಿಳಾ ಸಮಿತಿ ರೂಪೀಕರಣ ಸಭೆ ಮಂಗಳವಾರ ಸಂಜೆ ಕಾಸರಗೋಡು ಸಿಟಿಹಾಲ್ ಸಭಾಂಗಣದಲ್ಲಿ ನಡೆಯಿತು.
ಸವಾಕ್ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸವಾಕ್ ರಾಜ್ಯ ಅಧ್ಯಕ್ಷ ಜಿ.ವೈಶಾಖನ್ ಹಾಗೂ ಉಪಾಧ್ಯಕ್ಷ ರಾಜೇಶ್ ಪಲಂಗೋಡ್ ಮತ್ತು ರಾಜ್ಯ ಮಹಿಳಾ ಸಮಿತಿ ಅಧ್ಯಕ್ಷೆ ಬಿಂದು ಸಜಿತ್ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸವಾಕ್ ಜಿಲ್ಲಾ ಕುಟುಂಬ ಸಂಗಮ ಮತ್ತು ಸಮಾವೇಶ ಜ.20 ರಮದು ಕಾಸರಗೋಡು ನಗರಸಭಾಂಗಣದಲ್ಲಿ ನಡೆಯಲಿದ್ದು, ಈಬಗೆಗಿನ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಗಣ್ಯರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸವಾಕ್ ರಾಜ್ಯಾಧ್ಯಕ್ಷ ಜಿ.ವೈಶಾಖನ್ ಮಾತನಾಡಿ, ಸಾಮಾಜಿಕ ಬದಲಾವಣೆಗಳಿಗೆ ಕ್ರಿಯಾತ್ಮಕವಾಗಿ ಕಲಾ ನೈಪುಣ್ಯಗಳ ಮೂಲಕ ಕಾರ್ಯನಿರ್ವಹಿಸುವ ಕಲಾವಿದರು ತಮ್ಮ ಒಳಿತಿಗಾಗಿ ಒಗ್ಗೂಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸವಾಕ್ ಇಂದು ರಾಜ್ಯಾದ್ಯಂತ ಯಶಸ್ವಿ ಸಂಘಟನೆಯಾಗಿ ರೂಪುಗೊಂಡಿದೆ. ಪ್ರತಿಯೊಬ್ಬರೂ ಸಂಘಟಿತರಾಗಿ ಹಕ್ಕು, ಕರ್ತವ್ಯಗಳಿಗಾಗಿ ಪಣತೊಟ್ಟಲ್ಲಿ ಉದ್ದೇಶಿತ ಲಕ್ಷ್ಯಪ್ರಾಪ್ತಿಗೆ ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಕುಟಂಬ ಸಂಗಮ-ಸಮಾವೇಶದ ಯಶಸ್ವಿ ನಿರ್ವಹಣೆಗೆ ಜಿಲ್ಲೆಯ 6 ಬ್ಲಾಕ್ ಘಟಕಗಳನ್ನೊಳಗೊಂಡ ಸಮಿತಿಗಳ ಸಹಕಾರದೊಂದಿಗೆ ವರ್ಣರಂಜಿತ ಮೆರವಣಿಗೆಯೊಂದಿಗೆ ಸಮಾರಂಭ ನಡೆಸಲು ತೀಮರ್ಾನಿಸಲಾಯಿತು. ಸಭಾ ಕಾರ್ಯಕ್ರಮಗಳ ಬಳಿಕ ಜಿಲ್ಲೆಯ ಸವಾಕ್ ಕಲಾ ಘಟಕಗಳ ಯಕ್ಷಗಾನ, ಗಾನಮೇಳ, ರಸಮಂಜರಿ, ಇಂದ್ರಜಾಲ,ಜಾನಪದ ನೃತ್ಯಗಳು, ಮಿಮಿಕ್ರಿ ಸಹಿತ ವಿವಿಧ ಕಲಾಪ್ರಕಾರಗಳ ಪ್ರದರ್ಶನ, ಸ್ಪಧರ್ೆಗಳು ಮೊದಲಾದವುಗಳನ್ನು ಈ ಸಂದರ್ಭ ನಡೆಸಲಾಗುವುದು. ಸಮಾರಂಭದ ಯಶಸ್ವಿಗೆ 101 ಸದಸ್ಯರ ಸಮಿತಿ ರಚಿಸಲಾಯಿತು.
ಸವಾಕ್ ಮಹಿಳಾ ಸಮಿತಿಯನ್ನು ಈ ಸಂದರ್ಭ ರಚಿಸಲಾಯಿತು. ಕಾಸರಗೋಡು ಜಿಲ್ಲಾ ಸವಾಕ್ ಮಹಿಳಾ ನೂತನ ಸಮಿತಿಗೆ ಅಧ್ಯಕ್ಷರಾಗಿ ಜಯಶ್ರೀ ಕೆ.ಎನ್, ಕಾರ್ಯದಶರ್ಿಯಾಗಿ ಜಯಂತಿ ಸುವರ್ಣ, ಖಜಾಂಜಿಯಾಗಿ ಸಿಂಧು ಭಾಸ್ಕರನ್ ರವರನ್ನು ಸವರ್ಾನುಮತದಿಂದ ಆರಿಸಲಾಯಿತು.
ಸವಾಕ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ತುಳಸೀಧರನ್ ಸ್ವಾಗತಿಸಿ, ಉಮೇಶ್ ಮಾಸ್ಟರ್ ಫ್ಯೂಶನ್ ವಂದಿಸಿದರು. ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.