HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                          ಪ್ರಶಾಂತಿ ಸಂಭ್ರಮ-2018
      ಉಪ್ಪಳ: ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಕೊಡುಗೆ ಅಪಾರ.ಇಂದು ಸತ್ಯಸಾಯಿ ವಿದ್ಯಾಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದು, ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದು ಶ್ರೀ ಸತ್ಯಸಾಯಿ ಸೇವಾಸಂಸ್ಥೆಗಳು ದ.ಕ ಇದರ ಜಿಲ್ಲಾಧ್ಯಕ್ಷ  ಪದ್ಮನಾಭ ಪೈ ಹೇಳಿದರು.
    ಪೈವಳಿಕೆ ಸಮೀಪದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಪ್ರಶಾಂತಿ ಸಂಭ್ರಮ-2018-18ನೇ ವರ್ಷದ ವಾಷರ್ಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
    ಇಂದಿನ ಯುವಜನಾಂಗ ಮೊಬೈಲ್ಗಳ ಕಪಿಮುಷ್ಠಿಗೆ  ಸಿಲುಕಿ ತಮ್ಮ ಜವಾಬ್ದಾರಿಗಳನ್ನು ನುಣುಚಿಕೊಳ್ಳುತ್ತಿರುವುದು ನಿಜಕ್ಕೂ ಶೋಚನೀಯ. ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಅವರಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕಾದದ್ದು ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರಶಾಂತಿ ವಿದ್ಯಾಕೇಂದ್ರದ ಕೊಡುಗೆ ಅಪಾರ ಎಂದು ಹೇಳಿದರು.
   ವಾಷರ್ಿಕೋತ್ಸವ ಸಮಾರಂಭದಲ್ಲಿ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀತರ್ಿಯನ್ನು ತಂದ ವಿದ್ಯಾಥರ್ಿಗಳನ್ನು ಅವರ ಪೋಷಕರೊಂದಿಗೆ ಸನ್ಮಾನಿಸಿದ ಕಾರ್ಯಕ್ರಮ ಪ್ರಶಂಸನೀಯ ಎಂದು ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳು ಕನರ್ಾಟಕ ಇದರ ರಾಜ್ಯ ಮಹಿಳಾ ಸಂಯೋಜಕಿ ಪ್ರಿಯಾ.ಪಿ.ಪೈ ಹೇಳಿದರು.
   ಕಳೆದ 18 ವರ್ಷಗಳಲ್ಲಿ ಪ್ರಶಾಂತಿ ವಿದ್ಯಾಕೇಂದ್ರ ಶಿಕ್ಷಣ ಕ್ಷೇತ್ರ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದೆ.ಈ ಸಾಧನೆಗೆ ಮೂಲ ಕಾರಣ ಈ ಸಂಸ್ಥೆಯಲ್ಲಿ ದುಡಿಯುವ ಸಿಬ್ಬಂದಿವರ್ಗ. ಅವಿರತವಾಗಿ ದುಡಿಯುವ ಶಿಕ್ಷಕ ವೃಂದವನ್ನು ಹೊಂದಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಖ್ಯಾತ ನ್ಯಾಯವಾದಿಗಳು ಹಾಗೂ ಪ್ರಶಾಂತಿ ಸೇವಾ ಟಸ್ಟ್ನ ಅಧ್ಯಕ್ಷ ಐ.ವಿ.ಭಟ್ ತಮ್ಮ ಅಧ್ಯಕ್ಷತೆ ವಹಿಸಿ ನುಡಿದರು.
    ಟ್ರಸ್ಟ್ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಕೆ.ಗೋಪಾಲಕೃಷ್ಣ ಭಟ್, ಟ್ರಸ್ಟ್ ಸದಸ್ಯ  ಕೃಷ್ಣಭಟ್, ಸಮಿತಿಯ ಸದಸ್ಯರಾದ  ಸದಾಶಿವ ಭಟ್ ಹಾಗೂ ಪೋಷಕರ ಪ್ರತಿನಿಧಿಯಾಗಿ ಧಾರವಾಡದ ಕೆ.ವಿ.ಜಿ ಬ್ಯಾಂಕ್ನ ಪ್ರಬಂಧಕ ಗುರುದತ್ ಕಾಮತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಶಾಲಾ ಪ್ರಾಂಶುಪಾಲ ಅನೂಪ್ ಶಾಲಾ ವರದಿಯನ್ನು ಹಾಗೂ ಸಮಿತಿಯ ಸಂಚಾಲಕ ಕಟ್ಟದಮನೆ  ಗೋಪಾಲಕೃಷ್ಣ ಭಟ್ ಸಮಿತಿ ವರದಿಯನ್ನು ವಾಚಿಸಿದರು.ಸಂಸ್ಥೆಯ ಪ್ರಬಂಧಕ ಹೆಚ್.ಮಹಾಲಿಂಗ ಭಟ್ ಸ್ವಾಗತಿಸಿ,ಟ್ರಸ್ಟ್ ಕೋಶಾದಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು. ಬಳಿಕ ವಿದ್ಯಾಥರ್ಿಗಳಿಂದ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries