HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬಂಬ್ರಾಣ ಅಣೆಕಟ್ಟು ಉಪಯೋಗ ಶೂನ್ಯ!
              ಡ್ಯಾಂ ಪುನರ್ ನಿಮರ್ಾಣಕ್ಕೆ 30 ಕೋಟಿ.ರೂ ಗುತ್ತಿಗೆ

     ಕುಂಬಳೆ: ಕೃಷಿ ಪ್ರಧಾನ ಪ್ರದೇಶವಾದ ಕುಂಬಳೆ ಅಸುಪಾಸಿನ ಹಳ್ಳಿಗಳಿಗೆ, ಭತ್ತದ ಗದ್ದೆಗಳಿಗೆ ಕಡು ಬೇಸಿಗೆಯಲ್ಲೂ ನೀರನ್ನು ಪೂರೈಸಲು ಸಹಕಾರಿಯಾಗಿದ್ದ ಬಂಬ್ರಾಣ ಅಣೆಕಟ್ಟು ಹಲವು ವರ್ಷಗಳಿಂದ ಸಮುದ್ರದ ಉಪ್ಪು ನೀರು ಮಿಶ್ರಿತವಾಗಿ ಉಪಯೋಗ ಶೂನ್ಯವಾಗುತ್ತಿದೆ. ಇಚ್ಲಾಂಗೋಡು, ಬಂಬ್ರಾಣ, ಕಟ್ಟತ್ತಡ್ಕ ಮೊದಲಾದ ಪ್ರದೇಶಗಳ ಕೃಷಿ ಭೂಮಿಗೆ ಹಲವು ದಶಕಗಳಿಂದ ನೀರು ಪೂರೈಸುತ್ತಿದ್ದ ಬಂಬ್ರಾಣ ಅಣೆಕಟ್ಟು ದಕ್ಷತೆಯನ್ನು ಕಳೆದುಕೊಳ್ಳುತ್ತಿದ್ದು, ಅಣೆಕಟ್ಟಿನ ಕಿಂಡಿಗಳಲ್ಲಿ ನಿಮರ್ಾಣಗೊಂಡ ಸಣ್ಣ ರಂಧ್ರಗಳ ಮೂಲಕ ಉಪ್ಪು ನೀರು ಮಿಶ್ರಿತಗೊಂಡ ಪರಿಣಾಮ ಕೃಷಿ ಬಳಕೆಗೆ ಅಯೋಗ್ಯವಾಗಿದೆ. 1954 ರಲ್ಲಿ ಆರಂಭಗೊಂಡ ಲೋಕೋಪಯೋಗಿ ಅಧೀನದ ಅಂದಿನ ಅಣೆಕಟ್ಟು ನಿಮರ್ಾಣವು 1964 ರಲ್ಲಿ ಪ್ರಧಾನ ಎಂಜಿನಿಯರ್ ಟಿ.ಪಿ ಕುಟ್ಟಿಯಮ್ಮ ಅವರಿಂದ ಉದ್ಘಾಟನೆಗೊಂಡಿತ್ತು.ಸತತ ಐದು ದಶಕಗಳ ಕಾಲ ಈ ಭಾಗದ ಭತ್ತ, ಅಡಿಕೆ ಸಹಿತ ವಿವಿಧ ಬೆಳೆಗಳನ್ನು ಬೆಳೆಸುವ ಕೃಷಿಕರಿಗೆ ವರದಾನವಾಗಿದ್ದಅಣೆಕಟ್ಟೆ ನೀರಿಗೆ ಕಳೆದ ಕೆಲ ವರ್ಷಗಳಿಂದ ಸಮುದ್ರದಉಪ್ಪು ಮಿಶ್ರಿತವಾಗುವ ಕಾರಣಯೋಗ್ಯಕೃಷಿಯನ್ನು ನಡೆಸಲಾಗದೆ ಕೃಷಿಕರು ಕಂಗಾಲಾಗಿದ್ದಾರೆ.
      ಅಧ್ಯಯನ ವರದಿಗೆಐದು ಲಕ್ಷರೂ.:
  ಸಣ್ಣ ನೀರಾವರಿ ವಿಭಾಗದ ಅಡಿಯಲ್ಲಿ ಬರುವ ಅಣೆಕಟ್ಟು ಪುನರ್ ನಿಮರ್ಾಣದ ವರದಿ ಕ್ರೋಢಿಕರಣ ಹಾಗೂ ಗುತ್ತಿಗೆಗೆ ಇ-ಟೆಂಡರ್ ಈ ಹಿಂದೆ ಕರೆಯಲಾಗಿದ್ದು, ಕೇವಲ ಒಂದು ಕಂಪೆನಿ ಮುಂದೆ ಬಂದಿದೆ. ಶಿರಿಯಾ ನದಿಗೆ ಅಡ್ಡವಾಗಿಕಟ್ಟಿರುವ ಅಣೆಕಟ್ಟು ಮಳೆಗಾಲದ ನೀರನ್ನೆ ಅವಲಂಬಿಸಿದ್ದು, ದಟ್ಟ ಬೇಸಿಗೆ ಕಾಲದಲ್ಲೂ ಕೃಷಿಗೆ ಅಗತ್ಯವಾದ ನೀರನ್ನು ಪೂರೈಸಲು ಶಕ್ತವಾಗಿತ್ತು, ಪ್ರಸ್ತುತ ಅಣೆಕಟ್ಟಿನ ಸಂದುಗಳಲ್ಲಿ ಬಿರುಕು ಬಿದ್ದಿರುವ ಕಾರಣ ನೀರು ಪೋಲಾಗುತ್ತಿದ್ದು, ಸಮುದ್ರದ ಉಪ್ಪು ನೀರು ಮಿಶ್ರಿತವಾಗುತ್ತಿದೆ.
  ಈ ಹಿಂದೆಗುತ್ತಿಗೆ ಕರೆಯುವ ವೇಳೆ ಯಾರು ಪ್ರತಿಕ್ರಯಿಸದ ಕಾರಣ ಅಣೆಕಟ್ಟು ಪುನರ್ ನಿಮರ್ಾಣದ ಕಾರ್ಯ ವಿಳಂಬಗೊಂಡಿತ್ತು.ಅಣೆಕಟ್ಟು ಪುನರ್ ನಿಮರ್ಾಣದ ಅಂಗವಾಗಿ ಅಧ್ಯಯನ ವರದಿಯನ್ನು ಕ್ರೋಢೀಕರಿಸುವ ಕಾರ್ಯಕ್ಕೆ ಜ. 29 ರಂದು ಚಾಲನೆ ನೀಡಲಾಗಿದೆ. ಸಣ್ಣ ನೀರಾವರಿ ವಿಭಾಗದ ಅಧೀನ ಬರುವ ಯೋಜನೆಯ ಪೂರ್ವಭಾವಿ ಅಧ್ಯಯನ ವರದಿಗೆ 5 ಲಕ್ಷರೂ. ಮೀಸಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಕ್ರೋಢಿಕರಣ ಕಾರ್ಯದ ಬಳಿಕ  ನೀರಾವರಿ ವಿಭಾಗದ ವಿನ್ಯಾಸ ಹಾಗೂ ಸಂಶೋಧನಾ ಮಂಡಳಿಗೆ ಕಳುಹಿಸಲಾಗುವುದು. ಪುನರ್ ನಿಮರ್ಾಣಕ್ಕೆ ಅಂದಾಜು ವೆಚ್ಚ 30 ಕೋಟಿ ರೂ. ತಗುಲಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಅಣೆಕಟ್ಟು ದಕ್ಷತೆಯನ್ನು ಕಳೆದುಕೊಂಡಿದ್ದು ನೀರಿನ ಅಭಾವದ ಕಾರಣ ಕೃಷಿಕರು ಪರಿತಪಿಸುವಂತಾಗಿದೆ. ಉಪ್ಪು ನೀರು ಮಿಶ್ರಿತ ನೀರು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿದೆ ಎನ್ನುವುದು ರೈತರ ಅಳಲು.1964 ರಲ್ಲಿ ಉದ್ಘಾಟನೆಗೊಂಡಿದ್ದ ಅಣೆಕಟ್ಟಿನ ಮೂಲಕ ವರ್ಷದೊಂದಕ್ಕೆ ಸುಮಾರು 113 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಸಹಿತ ವಿವಿಧ ಧಾನ್ಯ ಕೃಷಿ ಮಾಡಲಾಗುತ್ತಿತ್ತು. ಅಣೆಕಟ್ಟಿನ ಪುನರ್ ನಿಮರ್ಾಣಕ್ಕೆ ಕೆಲ ವರ್ಷಗಳೇ ಬೇಕಿದ್ದು, ಪ್ರಸ್ತುತ ಅಣೆಕಟ್ಟಿನ ಲೋಪಗಳನ್ನು ಸರಿಪಡಿಸಲು ಪ್ರತ್ಯೇಕ ಅನುದಾನದ ಅವಶ್ಯಕವಿದೆ ಎಂದು  ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಪ್ರಸ್ತುತ ಆಥರ್ಿಕ ವರ್ಷದಲ್ಲಿ ಸಮಸ್ಯೆ ಬಗೆಹರಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.
       ಜಲನಿಧಿಗೂ ಅಣೆಕಟ್ಟಿನ ನೀರು:
  ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಕುಡಿ ನೀರು ಪೂರೈಕೆಯ ಜಲನಿಧಿ ಯೋಜನೆಗೂ ಅಣೆಕಟ್ಟಿನ ಒಂದು ಪಾಶ್ರ್ವದಲ್ಲಿರುವ ಬಾವಿಯ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಪ್ರಸ್ತುತ ನೀರಿನ ಅಭಾವ ಹಾಗೂ ಉಪ್ಪು ನೀರು ಮಿಶ್ರಣಗೊಂಡ ಪರಿಣಾಮಕುಡಿ ನೀರುಯೋಜನೆಗೂ ತೊಂದರೆಯಾಗಲಿದೆ.ಅಣೆಕಟ್ಟಿನ ನೀರು ಸಾಗುವ ಕಾಲುವೆಗಳೂ ಹಲವು ವರ್ಷದಿಂದರಿಪೇರಿ ಮಾಡದಕಾರಣ ಅಸಮರ್ಪಕವಾಗಿದ್ದು, ನೀರಿನ ಹರಿವಿಗೆ ಸಮಸ್ಯೆಯಾಗಿದೆ.
   ಏನಂತಾರೆ ಗೊತ್ತೇ:
      ಬಂಬ್ರಾಣದಲ್ಲಿ ಶಾಶ್ವತ ಅಣೆಕಟ್ಟಿನ ನಿಮರ್ಾಣಕ್ಕಾಗಿ ನೀರಾವರಿ ಇಲಾಖೆಗೆ ಹಲವು ವರ್ಷಗಳ ಹಿಂದೆಯೇ ಬೇಡಿಕೆ ಹಾಗೂ ಮನವಿ ನೀಡಲಾಗಿತ್ತು.ತಡವಾಗಿಯಾದರೂ ಅಣೆಕಟ್ಟು ಪುನರ್ ನಿಮರ್ಾಣಕ್ಕೆ ಮುಂದಾಗಿರುವ ಇಲಾಖೆ ಕ್ರಮದ ಬಗ್ಗೆ ಸಂತಸವಿದೆ. ಜಿಲ್ಲೆಯಲ್ಲಿ ಒಟ್ಟಾರೆ 11 ನದಿಗಳಿದ್ದರೂ ಯಾವುದೇ ನದಿಗೆ ಶಾಶ್ವತ ಅಣೆಕಟ್ಟು ಇರದ ಕಾರಣ ನೀರಿನ ಮೂಲಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ, ಉಳಿದ ಜಿಲ್ಲೆಗಳಲ್ಲಿ ಉತ್ತಮ ಅಣೆಕಟ್ಟು ವ್ಯವಸ್ಥೆಗಳಿದ್ದು, ನೀರಿನ ಸಂರಕ್ಷಣೆಯೂ ಸಾಧ್ಯವಾಗುತ್ತಿದೆ.ಭೂಗರ್ಭ ಜಲ ಸಂರಕ್ಷಣೆಗೆ ಅಣೆಕಟ್ಟುಗಳು ಸಹಾಯಕವಾಗಿದ್ದು, ಕೃಷಿಕಾರ್ಯಕ್ಕೂ ಅಣೆಕಟ್ಟು ಸಹಕಾರಿ. ಬಂಬ್ರಾಣ ಅಣೆಕಟ್ಟು ನಿಮರ್ಾಣದ ಜೊತೆಯಲ್ಲಿ ಕುಂಬಳೆ ಹಾಗೂ ಮಂಗಲ್ಪಾಡಿ ಗ್ರಾ.ಪಂ ಗಳನ್ನು ಬೆಸೆಯುವ ಉತ್ತಮ ಸೇತುವೆ ನಿಮರ್ಾಣ ಕಾರ್ಯವು ಕೈಗೂಡಬೇಕಿದೆ. ಶಾಶ್ವತ ಅಣೆಕಟ್ಟಿನ ನಿಮರ್ಾಣದಿಂದ ಉಪ್ಪು ನೀರಿನ ಮಿಶ್ರಣದಿಂದ ಪಾರಾಗಿ ಕೃಷಿ ಹಾಗೂ ಕುಡಿ ನೀರಿನ ಸಮಸ್ಯೆ ಬಗೆಹರಿಸಬಹುದು.
       ಕೆ.ಎಲ್ ಪುಂಡರೀಕಾಕ್ಷ
     ಕುಂಬಳೆ ಗ್ರಾ.ಪಂ ಅಧ್ಯಕ್ಷರು
       



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries