ಕೇರಳ: ದೇಶದಲ್ಲಿ ಮೊದಲ ಬಾರಿಗೆ ನಮಾಜ್ ನೇತೃತ್ವ ವಹಿಸಿದ ಮಹಿಳೆ
ಮಲಪ್ಪುರಂ(ಕೇರಳ): ಕೇರಳದಲ್ಲಿ ಜಮಿತಾ(34) ಎನ್ನುವ ಮಹಿಳೆಯೊಬ್ಬರು ಶುಕ್ರವಾರದ ನಮಾಜ್ (ಜುಮಾ) ನೇತೃತ್ವ ವಹಿಸಿಕೊಳ್ಳುವ ಮೂಲಕ ಇಂತಹಾ ಸಾಧನೆ ಮಾಡಿದ ದೇಶದ ಪ್ರಥಮ ಮಹಿಳೆ ಎನಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಮಾಮ್ ಆಗಿರುವ ಜಮಿತಾ ಪ್ರತಿ ಬಾರಿ ಪುರುಷ ಧರ್ಮ ಗುರುಗಳೇ ನಡೆಸಿಕೊಡುವ ಜುಮಾವನ್ನು ನಡೆಸಿಕೊಟ್ಟಿದ್ದಾರೆ. ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದಶರ್ಿ ಆಗಿರುವ ಜಮಿತಾ ವೃತ್ತಿಯಲ್ಲಿ ಅಧ್ಯಾಪಕಿಯಾಗಿದ್ದಾರೆ.
ಶುಕ್ರವಾರ (ಜ.26) ಸುಮಾರು 80 ಮಂದಿ ಭಾಗವಹಿಸಿದ್ದ ಪ್ರಾರ್ಥನಾ ಸಭೆಯ ನೇತೃತ್ವವನ್ನು ವಹಿಸಿಕೊಂಡಿದ್ದ ಜಮಿತಾ "ಕುರಾನ್ನಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಭಾವನೆ ಇಲ್ಲ. ಇಮಾಮ್ ಆಗಿ ಇದು ನನ್ನ ಕರ್ತವ್ಯ. ಇದೇ ಮೊದಲ ಬಾರಿಗೆ ನಾನು ಪ್ರಾರ್ಥನಾ ಸಭೆ ನೇತೃತ್ವ ವಹಿಸುತ್ತಿದ್ದೇನೆ. ನನ್ನ ಕಛೇರಿಯಲ್ಲಿ ಪ್ರತಿ ಶುಕ್ರವಾರ ಈ ರೀತಿ ಪ್ರಾರ್ಥನೆ ಕಾರ್ಯಕ್ರಮ ನಡೆ3ಸುತ್ತೇನೆ" ಎಂದರು. ಕುರಾನ್ ಸುನ್ನತ್ ಸೊಸೈಟಿಯ ಕಾಯರ್ಾಲಯದಲ್ಲಿ ಈ ಪ್ರಾರ್ಥನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಸೀದಿಯಲ್ಲಿ ಪ್ರತಿ ಶುಕ್ರವಾರ ಪ್ರಾರ್ಥನೆ ನಡೆಯಬೇಕೆನ್ನುವ ನಿಯಮ ಇಲ್ಲ ಎನ್ನುವ ಜಮಿತಾ ತಿರುವನಂತಪುರದ ಮೂಲದವರಾಗಿದ್ದು ಕೆಲ ವರ್ಷಗಳ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆಗಳಿಗೆ ಸಹ ಒಳಗಾಗಿದ್ದರು. ಇದೀಗ ಮಹಿಳೆಯೊಬ್ಬರು ಶುಕ್ರವಾರದ ಪ್ರಾರ್ಥನೆ ನೇತೃತ್ವ ವಹಿಸಿರುವುದು ಕೇರಳ ಸೇರಿ ಇಡೀ ರಾಷ್ಟ್ರದ ಇಸ್ಲಾಂ ಅನುಯಾಯಿಗಳಲ್ಲಿ ತೀವ್ರ ಚಚರ್ೆಗೆ ಕಾರಣವಾಗಿದೆ.