ಎಲ್ಡಿಎಫ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ : ಕುಮ್ಮನಂ
ಕಾಸರಗೋಡು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೇರಳದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 35,000 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಿದ್ದರೂ, ಇದರ ಪ್ರಥಮ ಹಂತದ ಹಣವನ್ನು ಕೂಡ ಇದುವರೆಗೆ ಬಳಸಲಾಗಿಲ್ಲ. ಈ ಮೂಲಕ ರಾಜ್ಯ ಸರಕಾರವು ಜನರನ್ನು ಮೋಸಗೊಳಿಸುತ್ತಿದೆ. ಈ ಮೂಲಕ ಜನವಿರೋಧಿ ಹಾಗೂ ರಾಜ್ಯವಿರೋಧಿಯಾಗಿರುವ ಎಲ್ಡಿಎಫ್ ಸರಕಾರಕ್ಕೆ ಒಂದು ನಿಮಿಷ ಕೂಡ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದರು.
ಕಾಸರಗೋಡು ಜಿಲ್ಲೆಯಲ್ಲಿ ನಡೆಯುವ ವಿಕಾಸಯಾತ್ರೆಯ ಸಲುವಾಗಿ ನಗರದ ಹೊಸ ಬಸ್ ನಿಲ್ದಾಣ ಸಮೀಪವಿರುವ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ಸೋಮವಾರ ಜರಗಿದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ವಿಶೇಷ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಡರಂಗವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಲಾಭ ಪಡೆಯಲು ಷಡ್ಯಂತ್ರ ನಡೆಸುತ್ತಿದೆ. ಇದು ಪ್ರಜಾಪ್ರಭುತ್ವ ಧೋರಣೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ನ್ಯಾಯ, ನೀತಿ, ಸಾಮಾಜಿಕ ವ್ಯವಸ್ಥೆಗೆ ಒಂದಿನಿತೂ ಬೆಲೆ ನೀಡದ ಸಿಪಿಎಂ ಸರಕಾರವು ಜನದ್ರೋಹಿಯಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ಯಾರೋಪಿಸಿದರು.
ಎಲ್ಡಿಎಫ್ನ ಆಡಳಿತದಿಂದ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಜನಸಾಮಾನ್ಯರು ಎಲ್ಲಾ ರಂಗಗಳಲ್ಲೂ ವಿವಿಧ ರೀತಿಯಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕೇರಳದ ಜನತೆಯ ರಕ್ಷಣೆ ಬಿಜೆಪಿಯಿಂದ ಸಾಧ್ಯ. ಅದಕ್ಕಾಗಿ ಬಿಜೆಪಿಯನ್ನು ಬಹುಜನರ ಪಕ್ಷವಾಗಿ ಮಾಪರ್ಾಡು ಗೊಳಿಸಬೇಕು. ಅಂದರೆ ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಬೇಕು. ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರು ಬಿಜೆಪಿ ಬೆಳವಣಿಗೆಗೆ ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯಾಧ್ಯಕ್ಷರು ಕರೆ ನೀಡಿದರು.
ಎಲ್ಲರೂ ಸಮಾನರು ಎಂಬಂತೆ ಏಕಾತ್ಮ ಮಾನವದರ್ಶನ ಬಿಜೆಪಿ ಧ್ಯೇಯವಾಗಿದೆ. ವೈವಿಧ್ಯತೆಯಲ್ಲಿ ಏಕತೆ, ಏಕರಾಷ್ಟ್ರ, ಎಲ್ಲರೂ ಸಮಾನರು ಎಂಬುದು ನಮ್ಮ ಪಕ್ಷದ ಸಂಕಲ್ಪವಾಗಿದೆ. ಆದರೆ ಸಿಪಿಎಂ ಮತ್ತು ಕಾಂಗ್ರೆಸ್ಗೆ ಈ ವಿಚಾರದಲ್ಲಿ ಬದ್ಧತೆಯಿಲ್ಲ ಹಾಗೂ ನಂಬಿಕೆಯಿಲ್ಲ. ಅದರಲ್ಲೂ ಸಿಪಿಎಂ ನೇತಾರರು ತಮ್ಮ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಹುದೊಡ್ಡ ಬಂಡವಾಳಶಾಹಿಗಳಾಗುತ್ತಿದ್ದಾರೆ. ಕಮ್ಯೂನಿಸ್ಟ್ - ಮಾಕ್ಸರ್ಿಸ್ಟ್ ಪ್ರಮುಖರು ಈಗ ಕೋಟ್ಯಾಧಿಪತಿಗಳು. ಇದು ಅವರು ಕಮ್ಯೂನಿಸಂಗೆ ಮಾಡುವ ಬಹುದೊಡ್ಡ ಕ್ರೂರತೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯ, ನ್ಯಾಯವಾದಿ ಕೆ.ಶ್ರೀಕಾಂತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ , ರಾಜ್ಯ ಪ್ರಧಾನ ಕಾರ್ಯದಶರ್ಿ ಎ.ಎನ್.ರಾಧಾಕೃಷ್ಣನ್, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಕ್, ರಾಜ್ಯ ಸಮಿತಿಯ ಸದಸ್ಯರಾದ ರವೀಶ ತಂತ್ರಿ ಕುಂಟಾರು, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಸುರೇಶ್ಕುಮಾರ್ ಶೆಟ್ಟಿ ಪೂಕಟ್ಟೆ, ರಾಜ್ಯ ಸಂಘಟನಾ ಕಾರ್ಯದಶರ್ಿ ಎಂ.ಗಣೇಶನ್, ರಾಜ್ಯ ಕಾರ್ಯದಶರ್ಿ ವಿ.ಕೆ.ಸಜೀವನ್, ಓಬಿಸಿ ಮೋಚರ್ಾದ ರಾಜ್ಯ ಅಧ್ಯಕ್ಷ ಪುಂಜಕನಿ ಸುರೇಂದ್ರನ್, ವಲಯ ಸಂಘಟನಾ ಕಾರ್ಯದಶರ್ಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಪಿ.ರಮೇಶ್ ಸ್ವಾಗತಿಸಿ, ಎ.ವೇಲಾಯುಧನ್ ವಂದಿಸಿದರು.