36 ವರ್ಷಗಳ ಬಳಿಕ ಭಾರತದಲ್ಲಿ ಇಂದು ಸಂಪೂರ್ಣ ಚಂದ್ರಗ್ರಹಣ ಗೋಚರ: ಇವು ಇದರ ವಿಶೇಷಗಳು
ನವದೆಹಲಿ: ಭಾರತ ದೇಶ ಮತ್ತೊಂದು ಖಗೋಳ ಕೌತಕಕ್ಕೆ ಸಾಕ್ಷಿಯಾಗುತ್ತಿದ್ದು, 36 ವರ್ಷಗಳ ಬಳಿಕ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರವಾಗುತ್ತಿದೆ.
ಇಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣ ವಿಶೇಷವಾಗಿದ್ದು, ಬರೊಬ್ಬರಿ 36 ವರ್ಷಗಳ ಬಳಿಕ ಸಂಭವಿಸುತ್ತಿರುವ ಮೊದಲ ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಗ್ರಹಣವನ್ನು ' ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ' ಎಂದೂ ಕರೆಯಲಾಗುತ್ತದೆ. ಸುಮಾರು 36 ವರ್ಷಗಳ ಬಳಿಕ ಗೋಚರಿಸುತ್ತಿರುವ ಈ ಚಂದ್ರಗ್ರಹಣದ ವಿಶೇಷವೇನು ಎಂದು ನೋಡೋಣ ಬನ್ನಿ
ಈ ಸಂಪೂರ್ಣ ಚಂದ್ರ ಗ್ರಹಣ ಮೂರು ಹಂತಗಳಲ್ಲಿ ಗೋಚರವಾಗಲಿದ್ದು, ಈ ಸಂದರ್ಭದಲ್ಲಿ ಚಂದ್ರ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ (ಸಂಪೂರ್ಣ ಚಂದ್ರ ಗ್ರಹಣ)ನಾಗಿ ಗೋಚರಿಸುತ್ತಾನೆ. ಇಂತಹ ಚಂದ್ರಗ್ರಹಣ ಕೊನೆಯ ಬಾರಿಗೆ 1866ರ ಮಾಚರ್್ 31 ರಂದು ಘಟಿಸಿತ್ತು. ಇದಾದ ಬಳಿಕ ಇಂದು ಅಂದರೆ ಬರೊಬ್ಬರಿ 150 ವರ್ಷಗಳ ಬಳಿಕ ಘಟಿಸುತ್ತಿದೆ. ಇಂತಹ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನು ಇಂದಿನ ಸಂಪೂರ್ಣ ಚಂದ್ರಗ್ರಹಣ ಭಾರತವಲ್ಲದೇ ಪಶ್ಚಿಮ ಅಮೆರಿಕ, ಕೆನಡಾದಲ್ಲೂ ಗೋಚರಿಸಲಿದೆ. ಆದರೆ ಅಮೆರಿಕದ ಪೂರ್ವ ಕರಾವಳಿ ಭಾಗ, ಯೂರೋಪ್, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಗ್ರಹಣ ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಂಗಳವಾರ ರಾತ್ರಿ ಹೊತ್ತಿಗೆ ಚಂದ್ರ ಭೂಮಿಯ ಹತ್ತಿರದಲ್ಲಿ ಗೋಚರಿಸಲಿದ್ದು, ಈ ವೇಳೆ ಚಂದ್ರನಿಗೂ ಭೂಮಿಗೂ ಕೇವಲ 3, 59,000 ಕಿ.ಮೀ ಅಂತರ ವಿರುತ್ತದೆ. ಇನ್ನು ಈ ಸಂಪೂರ್ಣ ಟಂದ್ರಗ್ರಹಣ ಪ್ರಕ್ರಿಯೆ ಒಂದು ಗಂಟೆಗೂ ಅಧಿಕ ಸಮಯದಲ್ಲಿ ನಡೆಯಲಿದ್ದು, ಚಂದ್ರಗ್ರಹಣದ ಸಂಪೂರ್ಣ ಪ್ರಕ್ರಿಯೆಯನ್ನುನಾಸಾ ತನ್ನ ವಿಶಿಷ್ಟ ಟೆಲಿಸ್ಕೋಪ್ ಗಳ ಮೂಲಕ ನೇರ ಪ್ರಸಾರ ಮಾಡಲಿದೆ.
ಇಂದು ಸಂಜೆ 6.18ರ ಹೊತ್ತಿಗೆ ಚಂದ್ರಗ್ರಹಣ ಪ್ರಾರಂಭವಾಗಲಿದ್ದು, 7.31ಕ್ಕೆ ಚಂದ್ರ ಕೆಂಪಾಗಿ ಕಾಣುತ್ತಾನೆ. ಸುಮಾರು ರಾತ್ರಿ 9.38ರ ಹೊತ್ತಿಗೆ ಸಂಪೂರ್ಣ ಗ್ರಹಣ ಅಂತ್ಯವಾಗಲಿದ್ದು, ಈ ವೇಳೆ ಚಂದ್ರ ತಾಮ್ರ ಬಣ್ಣಕ್ಕೆ ತಿರುಗುತ್ತಾನ