50 ವರ್ಷಗಳ ಬಳಿಕ ಪಶ್ಚಿಮ ಬಂಗಾಳದ ಭಯಾನಕ ರೈಲ್ವೇ ನಿಲ್ದಾಣದ ರಹಸ್ಯ ಬೇಧಿಸಿದ ವಿಚಾರವಾದಿಗಳು!
ಬಂಗಾಳದ ಬೆಗುಂಕೊಡರ್ ರೈಲ್ವೇ ನಿಲ್ದಾಣದಲ್ಲಿ ದೆವ್ವದ ಕಾಟ, 42 ವರ್ಷಗಳ ಕಾಲ ನಿಲ್ದಾಣಕ್ಕೆ ಬೀಗ
ಕೋಲ್ಕತಾ: ಪಶ್ಚಿಮ ಬಂಗಾಳದ ಭಯಾನಕ ರೈಲ್ವೇ ನಿಲ್ದಾಣ ರಹಸ್ಯವನ್ನು ಬರೊಬ್ಬರಿ 50 ವರ್ಷಗಳ ಬಳಿಕ ವಿಜ್ಞಾನಿಗಳು ಬೇಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಳೆದ 50 ವರ್ಷಗಳಿಂದ ಭೇಧಿಸಲಾಗದೇ ಹಾಗೆಯೇ ಉಳಿದುಕೊಂಡಿದ್ದ ಪುರುಲಿಯಾ ಜಿಲ್ಲೆಯ ಬೆಗುಂಕೊಡರ್ ರೈಲ್ವೇ ನಿಲ್ದಾಣದ ಭಯಾನಕತೆಯ ರಹಸ್ಯಕ್ಕೆ ವಿಚಾರವಾದಿಗಳು ಕೊನೆಗೂ ಬ್ರೇಕ್ ಹಾಕಿದ್ದು, ನಿಲ್ದಾಣದಲ್ಲಿ ಯಾವುದೇ ದೆವ್ವ ಭೂತಗಳ ಕಾಟವಿಲ್ಲ ಎಂದು ಸಾಕ್ಷಿ ಸಮೇತ ಸಾಬೀತುಪಡಿಸಿದ್ದಾರೆ.
ನಿಲ್ದಾಣದ ಕುರಿತಾದ ಭಯಾನಕತೆಯ ಹಿಂದಿನ ರಹಸ್ಯ ಬೇಧಿಸಲೆಂದೇ ಕೆಲ ವಿಚಾರವಾದಿಗಳ ಗುಂಪೊಂದು ಈ ರೈಲ್ವೇ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಠಿಕಾಣಿ ಹೂಡಿತ್ತು. ಇಲ್ಲಿನ ಸ್ಥಳೀಯರ ಭಾವನೆಯಂತೆ ಇಲ್ಲಿ ದೆವ್ವಗಳ ಕಾಟವಿದ್ದು, ರಾತ್ರಿ ವೇಳೆ ಇಲ್ಲಿ ಉಳಿದುಕೊಳ್ಳುವವರಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಈ ಹಿಂದೆ ಈ ರಹಸ್ಯ ಬೇಧಿಸಲು ಬಂದಿದ್ದ ಕೆಲ ಯುವಕರು ಇಲ್ಲಿ ರಾತ್ರಿ ಕಳೆದಿದ್ದಾರಾದರೂ ರಾತ್ರೋರಾತ್ರಿ ಇಲ್ಲಿಂದ ಪರಾರಿಯಾಗಿದ್ದರು. ಅಲ್ಲದೆ ಇವರ ಮೇಲೆ ಗಂಭೀರ ಪ್ರಮಾಣದ ಹಲ್ಲೆ ಕೂಡ ಆಗಿತ್ತು.
ಇದೀಗ ಈ ಭಯಾನಕತೆಯನ್ನು ವಿಚಾರವಾದಿಗಳು ಬೇಧಿಸಿದ್ದು, ಭಯಾನಕತೆ ಏನೂ ಇಲ್ಲ. ಇಲ್ಲಿನ ಸ್ಥಳೀಯರೇ ದೆವ್ವದಂತೆ ಇಲ್ಲಿಗೆ ಬರುವವರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಕಳೆದ ಶುಕ್ರವಾರ ವಿಚಾರವಾದಿಗಳ ಗುಂಪು ಪೊಲೀಸ್ ಭದ್ರತೆಯೊಂದಿಗೆ ಈ ನಿಲ್ದಾಣದಲ್ಲೇ ತಂಗಿದ್ದರು. ಅಲ್ಲದೇ ಬೆಳಗಿನ ಜಾವದವರೆಗೂ ಇವರಿಗೆ ಯಾವುದೇ ರೀತಿಯ ದೆವ್ವದ ತೊಂದರೆಯಾಗಿರಲಿಲ್ಲ. ಆದರೆ ಮಧ್ಯರಾತ್ರಿ ಮಾತ್ರ ನಿಲ್ದಾಣದ ಹಿಂಬದಿಯಲ್ಲಿ ಯಾರೋ ಕೂಗಿದಂತೆ ಶಬ್ದವಾಗಿತ್ತು. ಶಬ್ದ ಬಂದ ಪ್ರದೇಶದತ್ತ ವಿಚಾರವಾದಿಗಳು ತಮ್ಮ ಕೈಯಲ್ಲಿದ್ದ ಟಾಚರ್್ ಎಸೆದಿದ್ದು, ಈ ವೇಳೆ ಕೆಲವರು ಅಲ್ಲಿಂದ ಓಡುತ್ತಿದ್ದರು.
ಹೀಗಾಗಿ ಇದು ಕೇವಲ ಇಲ್ಲಿನ ಕೆಲ ದುಷ್ಕಮರ್ಿಗಳ ಕೆಲಸವಷ್ಟೇ.. ದೆವ್ವ-ಭೂತಗಳಿಲ್ಲ ಎಂದು ವಿಚಾರವಾದಿಗಳು ಸ್ಪಷ್ಚಪಡಿಸಿದ್ದಾರೆ. ಇನ್ನು ಇಲ್ಲಿನ ಕೆಲ ದುಷ್ಕಮರ್ಿಗಳು ನಿಲ್ದಾಣದಲ್ಲಿ ಉಳಿದುಕೊಳ್ಳುವವರ ಮೇಲೆ ದೆವ್ವದ ವೇಷ ಧರಿಸಿ ದಾಳಿ ಮಾಡಿ ಅವರ ಕೈಯಲ್ಲಿರುತ್ತಿದ್ದ ವಸ್ತುಗಳನ್ನು ಲೂಟಿ ಮಾಡುತ್ತಿದ್ದರು. ಹೀಗಾಗಿ ಇದು ದೆವ್ವದ ಕಾಟ ಎಂದು ಭಾವಿಸಿದ್ದ ಇಲ್ಲಿನ ಸ್ಥಳೀಯರು ಕಳೆದ 1967ರಲ್ಲಿ ನಿಲ್ದಾಣವನ್ನು ಮುಚ್ಚಿದ್ದರು. 2009ರಲ್ಲಿ ಮಮತಾ ಬ್ಯಾನಜರ್ಿ ಅವರು ರೈಲ್ವೇ ಸಚಿವರಾಗಿದ್ದ ವೇಳೆ ಈ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದ್ದರು.
ಇದೀಗ ವಿಚಾರವಾದಿಗಳು ನಿಲ್ದಾಣದಲ್ಲಿ ದೆವ್ವವಿಲ್ಲ ಎಂದು ಸಾಬೀತು ಪಡಿಸಿದ್ದಾರೆ.