HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಶಬರಿಮಲೆ ಪಾದಯಾತ್ರೆ ತಂಡಕ್ಕೆ ಹೊಸ ಅತಿಥಿ-ಅಯ್ಯಪ್ಪ (ಶ್ವಾನ) ಸೇರ್ಪಡೆ
   ಮಂಜೇಶ್ವರ: ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಮಾಲಧಾರಾಣೆಗೈದು, ಪವಿತ್ರ 48 ದಿನದ ವೃತವನ್ನು ಆಚರಿಸಿ  ಕಳೆದ ಡಿ. 24 ರಂದು ಪರ್ಾದಯಾತ್ರೆಯ ಮೂಲಕ ಈ ಬಾರಿ ಶಬರಿಮಲೆ ತೆರಳಿದ 9 ಮಂದಿ ಅಯ್ಯಪ್ಪ ವೃತಧಾರಿಗಳ ಜೊತೆ ಈಗ ಹೊಸ ಅತಿಥಿ ಅಯ್ಯಪ್ಪ (ಶ್ವಾನ) ಸೇರ್ಪಡೆಗೊಳ್ಳುವ ಮೂಲಕ ಅಚ್ಛರಿಯೂ, ಭಕ್ತಿಯೂ ಮೂಡಿದೆ.
  ಗುರುವಾರ ಮುಂಜಾನೆ 3.40 ಕ್ಕೆ ಗುರುವಾಯೂರು ಕ್ಷೇತ್ರದಿಂದ ಯಾತ್ರೆ ಹೊರಟ ದಾರಿ ಮಧ್ಯೆ ಕೇವಲ 300 ಮೀಟರ್ ಅಂತರದಲ್ಲಿ ಶ್ವಾನವೊಂದು ಇವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದದ್ದು, ಪಾದಯಾತ್ರೆಯ ಗುರುಸ್ವಾಮಿಯಾದ ಕಾಸರಗೋಡು ಚೌಕಿ ನಿವಾಸಿ ರಾಜೇಶ್ ರ ಗಮನಕ್ಕೆ ಬಂತು.
  ಎಷ್ಟು ಓಡಿಸಿದರೂ ಓಡದ ಶ್ವಾನ ಮತ್ತೂ ಕೂಡ ತಮ್ಮ ತಂಡದ ಜೊತೆ ಬರುತ್ತಿದ್ದು ಸುಮಾರು 10 ಕಿಲೋ ಮೀಟರ್ ಕ್ರಮಿಸಿದ ವೇಳೆ ಸಿಕ್ಕ ಮಂದಿರ ಒಂದರಲ್ಲಿ ಬೆಳಗ್ಗಿನ ಉಪಹಾರ ಪೂರೈಸುತ್ತಿದ್ದಾಗ ಶ್ವಾನ ಕೂಡ ಇವರ ಬಿಟ್ಟು ತೊಲಗಲಿಲ್ಲ.
  ಕಲಿಯುಗ ವರದ ಅಯ್ಯಪ್ಪನೇ ಶ್ವಾನದ ರೂಪದಲ್ಲಿ ತಮ್ಮ ಜೊತೆ ಇರಬಹುದೆಂಬ   ನಂಬಿಕೆಯಲ್ಲಿದ್ದು ಬಳಿಕ ಯಾತ್ರೆ ಮುಂದುವರಿದು ತ್ರಿಪ್ರಯಾರ್ ಕ್ಷೇತ್ರ, ಅಲ್ಲಿಂದ ಸಂಜೆ ಕೂಡಲ್ ಮಾಣಿಕ್ಯದ ಭರತನ ಕ್ಷೇತ್ರದಲ್ಲಿ ತಂಗುವ ವೇಳೆ ಯಾವುದೇ ಮುಲಾಜಿಲ್ಲದೆ ಸ್ವಾಮಿಗಳ ಜೊತೆಗೆ ವಿಶ್ರಾಂತಿಗೈಯ್ದಿತು. ಇರುಮುಡಿ ತಲೆಗಿರಿಸಿ ಹೊರಡುವ ವೇಳೆ ಜೊತೆಗೆ ಸಾಗಿ ದಾರಿ ತೋರುವ ಅಯ್ಯಪ್ಪನೇ ಆಗಿದ್ದಾನೆಯೆ ಎಂಬ ಭಾವ ತಮಡಕ್ಕೆ ಬಲಗೊಂಡಿದೆ.
  ಶ್ವಾನದ ಇಂತಹ ಬಿಡಲಾರದ ಸಂಗಾತಿತನವನ್ನು ಗುರುತಿಸಿ ಗುರುವಾರ ಸಂಜೆ ಸ್ವಾಮಿ ವೃತಧಾರಿಗಳು  ಅಯ್ಯಪ್ಪ ಎಂದು ನಾಮಕರಣ ಮಾಡಿದ್ದು, ಅಯ್ಯಪ್ಪ ಎಂದಾಕ್ಷಣ ತಲೆ ಎತ್ತಿ ನೋಡುವ ಪವಾಡ ಶ್ವಾನವಾಗಿದೆ. ನಡೆಯುವ ವೇಳೆ ದಣಿದು ಕುಡಿಯಲು ನೀರು ಹಾಗೂ ಹಾಲು, ಬ್ರೆಡ್ ನ್ನು ಕೊಡುತ್ತಿದ್ದು, ಹೊಟ್ಟೆ ತುಂಬಾ ತಿಂದ ಬಳಿಕ ಸ್ವಲ್ಪ ದೂರ ಹೋಗಿ ನಿಂತು ತನಗೆ ಹೊಟ್ಟೆ ತುಂಬಿದೆಯೆಂದು ತನ್ನ ಮನದ ಇಂಗಿತವನ್ನು ತೋರ್ಪಡಿಸುತದೆ. ಇನ್ನು ಕೆಲವೇ ದಿನಗಳಲ್ಲಿ ಈ ಪಾದಯಾತ್ರೆ ವೃತಧಾರಿಗಳು ಶಬರಿಮಲೆ ತಲುಪಲಿದ್ದು, ಶ್ವಾನ ಕೂಡಾ ಇವರ ಜೊತೆ ಸಾಗಲಿವೆ.
    (ಇದುವರೆಗೆ ಕಳೆದ ಹಲವು ವರ್ಷಗಳಿಂದ ಪಾದಯಾತ್ರೆಗೈದ  ಹಲವು ತಂಡಗಳಿಗೂ ಶ್ವಾನಗಳು ವಿವಿಧ ಕಡೆಗಳಿಂದ ಸೇರುತ್ತಿದ್ದು ಶಬರಿ ಮಲೆಯ ಪಂಬ ಸನ್ನಿದಿಯ ವರೆಗೆ ಜೊತೆ ಸಾಗಿ, ಕೊನೆಗೆ ಮಾಯಾವಾಗುವುದು ವಾಡಿಕೆ.)
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries