HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

        ರಂಗದಲ್ಲೇ ವೇಶ ಕಳಚಿದ ಕಲಾಮಂಡಲಂ ಗೀತಾನಂದನ್
   ತೃಶೂರ್: ಖ್ಯಾತ ಓಟ್ಟಂ ತುಳ್ಳಲ್ ಕಲಾವಿದ, ಕಲಾಮಮಡಲಂ ನ ಓಟ್ಟಂ ತುಳ್ಳಲ್ ವಿಭಾಗದ ಪ್ರಚಾರ್ಯ, ಚಲನಚಿತ್ರ ನಿದರ್ೇಶಕ, ಮೂಲತಃ ಚೆರ್ವತ್ತೂರು ಪುದುಶ್ಚೇರಿ ನಿವಾಸಿ  ಕಲಾಮಮಡಲಂ ಗೀತಾನಂದನ್(58)ಭಾನುವಾರ ಪ್ರದರ್ಶನದ ವೇಳೆ ವೇದಿಕೆಯಲ್ಲಿ ಕುಸಿದುಬಿದ್ದು ಮೃತರಾದರು.
  ತೃಶೂರಿನ ಇರಿಞಲುಕುಡ ಅವಿಟ್ಟತ್ತೂರು ಮಹಾದೇವ ದೇವಾಲಯದಲ್ಲಿ ಭಾನುವಾರ ರಾತ್ರಿ ಓಟ್ಟಂ ತುಳ್ಳಲ್ ಪ್ರದರ್ಶನವನ್ನು ಗೀತಾನಂದನ್ ಪ್ರದಶರ್ಿಸುತ್ತಿದ್ದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಕುಂಜನ್ ನಂಬ್ಯಾರ್ ಪ್ರಸಸ್ತಿ ಸಹಿತ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಭಾರತದಾತ್ಯಂತ 5 ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ನೀಡಿದ ಖ್ಯಾತಿ ಇವರದು. ಮಲಯಾಳದ ಕಮಲದಳ, ತೂವಲ್ ಕೊಟ್ಟಾರಂ, ಮನಸಿನಕ್ಕರೆ, ನರೇಂದ್ರನ್ ಮಗನ್ ಜಯಕಾಂತನ್ ವಗ, ಇರಟ್ಟಕುಟ್ಟಿಗಳುಡೆ ಅಚ್ಚನ್ ಇವರು ನಿದರ್ೇಶಿಸಿ ಪ್ರಸಿದ್ದ ಚಲನಚಿತ್ರಗಳಾಗಿವೆ. ಪತ್ನಿ ಶೋಭನಾ ಹಾಗೂ ಪುತ್ರ ಸನಲ್ ಕುಮಾರ್, ಪುತ್ರಿ ಶ್ರೀಲಕ್ಷ್ಮೀ ಯನ್ನು ಅಗಲಿದ್ದು, ಇವರೂ ಕಲಾವಿದರೇ ಆಗಿದ್ದಾರೆ.ಪ್ಯಾರಿಸ್ ನಲ್ಲಿ 1984 ರಲ್ಲಿ ಇವರು ಪ್ರಸ್ತುತಪಡಿಸಿದ ತುಳ್ಳಲ್ ಭಾರತದ ಹೊರಗೆ ಪ್ರದರ್ಶನಗೊಮಡ ಮೊದಲ ತುಳ್ಳಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ತುಳ್ಳಲ್ ಪದಕಚೇರಿ ಎಂಬ ಹೊಸ ನಮೂನೆಯ ವಿಭಾಗದ ಹುಟ್ಟಿಗೂ  ಗೀತಾನಂದನ್ ಭಾಜನರಾಗಿದ್ದಾರೆ.
     ಭಾವಪರವಶತೆಯ ಕೊನೆಯ ದೃಶ್ಯ:
   ಭಾನುವರ ರಾತ್ರಿ ಗೀತಾನಂದನ್ ವೇದಿಕೆಯಲ್ಲಿ ಪ್ರದಶರ್ಿಸಿದ ದೃಶ್ಯಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ದೃಶ್ಯಗಳು ಕಣ್ಣೀರುಬರಿಸುತ್ತಿದೆ. ಪ್ರದಶರ್ಿಸುತ್ತಿದ್ದ ವೇಳೆ ವೃದ್ದನಾಗುನ್ನ ಭೀಮಸೇನನ್ ಎನ್ನುತ್ತಿರುವಂತೆ ಗೀತಾನಂದನ್ ಅಭಿನಯದಲ್ಲೇ ಹಾಡುಗಾರಿಕೆ ಸಹಿತ ಹಿಮ್ಮೇಳದವರಿರುವಲ್ಲಿಗೆ ಬಂದು ಕುಸಿದು ಬೀಳುತ್ತಿರುವ ದೃಶ್ಯ ಕಲಾ ಪ್ರೇಮಿಗಳ ಮನಕಲಕಲು ಕಾರಣವಾಯಿತು.
 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries