ಭಾರತದಲ್ಲಿ ಹೊಸ ವರ್ಷದಂದು 69 ಸಾವಿರ ಮಕ್ಕಳ ಜನನ: ಯುನಿಸೆಫ್
ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಹೊಸ ವರ್ಷದ ದಿನ ವಿಶ್ವದಲ್ಲಿ ಎಷ್ಟು ಮಕ್ಕಳು ಜನಿಸಿದ್ದಾರೆ ಎಂಬ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಹೊಸ ವರ್ಷದ ದಿನ ವಿಶ್ವದಲ್ಲಿ ಒಟ್ಟು 386 000 ಮಕ್ಕಳು ಜನಿಸಿದ್ದು, ಭಾರತದ ಮೊದಲ ಸ್ಥಾನದಲ್ಲಿದೆ.
ಭಾರತದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷದಂದು 69070 ಮಕ್ಕಳು ಜನಿಸಿದ್ದಾರೆ. 2ನೇ ಸ್ಥಾನದಲ್ಲಿ ಚೀನಾದಲ್ಲಿ ಹೊಸ ವರ್ಷದಂದು 44,760 ಮಕ್ಕಳು ಜನಿಸಿದ್ದಾರೆ. ಇನ್ನು ನೈಜೀರಿಯಾ ಮೂರನೇ ಸ್ಥಾನದಲ್ಲಿದ್ದು, 20, 210 ಮಕ್ಕಳು ಜನಿಸಿದ್ದಾರೆ. ಉಳಿದಂತೆ ಇಂಡೋನೇಷಿಯಾ ನಾಲ್ಕನೇ ಸ್ಥಾನದಲ್ಲಿದ್ದರೆ ಅಮೆರಿಕವೂ 5ನೇ ಸ್ಥಾನದಲ್ಲಿದೆ.
ಹೊಸ ವರ್ಷದಂದು ಜನಿಸಿದ ಮಕ್ಕಳ ಪೈಕಿ ಶೇ,90ರಷ್ಟು ಮಕ್ಕಳು ಅಭಿವೃದ್ದಿ ಹೊಂದದ ದೇಶಗಳಲ್ಲೇ ಜನಿಸಿವೆ ಎಂದು ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.