ಶ್ರೀ ಸಾರಥಿ ಮಹಿಳಾ ಭಜನಾ ಮಂಡಳಿಯಿಂದ ಗುರುವಂದನೆ
ಕುಂಬಳೆ: ಶ್ರೀ ಸಾರಥಿ ಮಹಿಳಾ ಭಜನಾ ಮಂಡಳಿಯ ಭಜನಾ ಗುರುಗಳಾದ ಪ್ರೇಮಲತಾ ಗೋಕುಲ್ದಾಸ್ ಕುಂಬಳೆ ಅವರಿಗೆ ಗುರುವಂದನೆ ಕಾರ್ಯಕ್ರಮವು ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದಭಿತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಎ.ಪಿ.ಜನಾರ್ಧನ ಶಾನ್ಭಾಗ್ ಕುಳ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಡಳಿಯ ಅಧ್ಯಕ್ಷೆ ಸುಶೀಲ ಕೇಶವ ಭಟ್ ಅಧ್ಯಕ್ಷತೆ ವಹಿಸಿದರು. ಸತೀಶ್ ಗಟ್ಟಿ ನಾಯ್ಕಾಪು ಅತಿಥಿಯಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಗುರುವಂದನೆ ಸ್ವೀಕರಿಸಿದ ಭಜನಾ ಗುರುಗಳಾದ ಪ್ರೇಮಲತಾ ಅವರು ಭಜನೆಯ ಮಹತ್ವವನ್ನು ತಿಳಿದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಹರಿನಾಮ ಸಂಕೀರ್ತನೆ ಮಾಡಬೇಕೆಂದರು. ಈ ಭಜನಾ ತಂಡವು ಉತ್ತಮ ರೀತಿಯಲ್ಲಿ ನಡೆದು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.ಹೇಮಲತಾ ಸ್ವಾಗತಿಸಿ, ನಾಗವೇಣಿ ವಂದಿಸಿದರು. ಕಾರ್ಯಕ್ರಮವನ್ನು ಗೋಪಾಲಕೃಷ್ಣ ಭಟ್ ಮಜಲು ನಿರ್ವಹಿಸಿದರು.ಗಾಯತ್ರಿ ಮತ್ತು ಪ್ರಜ್ಞ ಪ್ರಾರ್ಥನೆ ಹಾಡಿದರು.