HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾರತೀಯ ಕಿಸಾನ್ ಸಂಘದ ಸಭೆ
   ಮಂಜೇಶ್ವರ: ಭಾರತೀಯ ಕಿಸಾನ್ ಸಂಘದ ಸಭೆಯು ಮೀಯಪದವು ಶಾಲಾ ವಠಾರದಲ್ಲಿ ಭಾನುವಾರ ಜರಗಿತು.
     ಜಗನ್ನಾಥ ಶೆಟ್ಟಿ ಸ್ವಾಗತಿಸಿ ಮನೆ ಮನೆ ಅಭಿಯಾನ, ಪ್ರತಿನಿಧಿ ನೋಂದಣಿ ಬಗ್ಗೆ  ಮತ್ತು ಜಿ.ಎಸ್.ಟಿ ಕಾಯರ್ಾಗಾರ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಹಾಗೂ ಕೃಷಿಕರು ಪೂರ್ಣ ರಾಸಾಯನಿಕ ಮುಕ್ತವಾಗಿ ಸಾವಯವ ಗೊಬ್ಬರಗಳನ್ನೇ ಬಳಸಬೇಕು. ಅದಕ್ಕಾಗಿ ಪ್ರತಿ ಮನೆಯವರು ಒಂದು ಊರ ತಳಿ ಹಸುವನ್ನಾದರೂ ಸಾಕಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲಕೃಷ್ಣ ಕೋಡಿ ಇಂದಿನ ಮಾರಕ ರೋಗಗಳಿಗೆ ಆಹಾರ ವಸ್ತುಗಳಲ್ಲಿ ರಾಸಾಯನಿಕ ಅಂಶವಿರುವುದೇ ಮುಖ್ಯ ಕಾರಣವೆಂದು, ರಾಸಾಯನಿಕ ಬಳಕೆಯ ಪೂರ್ಣ ನಿಮರ್ೂಲನವಾಗಬೇಕೆಂದು ತಿಳಿಸಿದರು. ಅಮೇರಿಕಾ, ಯುರೋಪ್ಗಳಲ್ಲಿ ನಿಷೇಧಗೊಂಡ ರಾಸಾಯನಿಕಗಳನ್ನು ಇಲ್ಲಿ ಮುಕ್ತವಾಗಿ ಮಾರಲು ಅನುಕೂಲ ಮಾಡಿ ಕೊಟ್ಡಿರುವರು ಎಂದರು.
   ಮುಖ್ಯ ಅಥಿತಿಯಾಗಿ ರಾಮ ಮಾಸ್ಟರ್ ಕಳತ್ತೂರು ಉಪಸ್ಥಿತರಿದ್ದರು. ಭತ್ತದ ಕೃಷಿ ಮಾಡಲು ಸರಕಾರದಿಂದ ಕೆಲವು ಸವಲತ್ತುಗಳಿದ್ದರೂ ಅದು ಕೃಷಿಕರಿಗೆ ಸಿಗುವುದಿಲ್ಲ ಇನ್ನು ಹೆಚ್ಚಿನ ಸವಲತ್ತುಗಳು ಸಿಗುವಂತಾಗಬೇಕು. ಇಂದಿನ ಕೃಷಿಕರ ಸಮಸ್ಯೆ ನಿವಾರಣೆಗೆ ಭಾರತೀಯ ಕಿಸಾನ್ ಸಂಘವು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಜರಗಿದ ಕಾಯರ್ಾಗಾರದ ಬಗ್ಗೆ ಮಾಹಿತಿ ನೀಡಿದರು. ಜಿ.ಎಸ್.ಟಿ ಯಿಂದ  ಕೃಷಿಕರಿಗೆ ಅತೀ ಹೆಚ್ಚು ಪ್ರಯೋಜನ ಸಿಗಲು ಸಾಧ್ಯವಿದೆ. ಅದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಯ ತತ್ಪರರಾಗಬೇಕೆಂದರು.
  ಪೂವಪ್ಪ ಪೂಜಾರಿ ದೇರಂಬಳ, ಶಿವರಾಮ ಶೆಟ್ಟಿ, ಶಿವ ಪ್ರಸಾದ್.ಡಿ ಸಭೆಯಲ್ಲಿ ಸಲಹೆಗಳನ್ನು ನೀಡಿದರು. ಹರೀಶ. ಡಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries