ಗಿಳಿವಿಂಡುವಿನಲ್ಲಿ ಗಮನ ಸೆಳೆದ ಚಿತ್ರ ಮೇಳ
ಮಂಜೇಶ್ವರ: ಕೇರಳ ವಿಧಾನಸಭೆಯ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಚಿತ್ರ ಮೇಳವು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನಲ್ಲಿ ಸೋಮವಾರ ನಡೆಯಿತು.
ಬೆಳಗ್ಗೆ ಆರಂಭಗೊಂಡ ಮೇಳಕ್ಕೆ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಜಾಕ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇರಳ ವಿಧಾನ ಸಭೆಯ ಜ್ಯುಬಿಲಿ ಕಾರ್ಯಕ್ರಮದಂಗವಾಗಿ ಕಾಸರಗೋಡಿನಲ್ಲಿ ನಡೆಯ ಬೇಕಾದ ಕಾರ್ಯಕ್ರಮವನ್ನು ಒತ್ತಾಯದ ಬಳಿಕ ಬಹು ಭಾಷೆಗಳ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ನಡೆಸುವಂತೆ ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಕಲಾವಿದರಿಂದ ಚಿತ್ರ ಮೇಳವನ್ನು ಆಯೋಜಿಸಲಾಗಿದೆ. ಸುಮಾರು 20 ಕ್ಕಿಂತ ಮಿಕ್ಕ ಚಿತ್ರಕಾರರು ಚಿತ್ರ ಪ್ರದಶರ್ಿಸಲಿದ್ದು, ಇದರ ಸದುಪಯೋಗವನ್ನು ಮಂಜೇಶ್ವರದ ವಿದ್ಯಾಥರ್ಿಗಳು ಹಾಗೂ ನಾಗರಿಕರು ಪಡೆಯಲಿರುವುದಾಗಿ ಅವರು ತಿಳಿಸಿದರು.
ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್ ಪುಣಿಂಚಿತ್ತಾಯ ಚಿತ್ರರಚನೆಗೆ ಚಾಲನೆ ನೀಡಿದರು. ಪೈವಳಿಕೆ ಗ್ರಾ. ಪಂ. ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ, ವಕರ್ಾಡಿ ಗ್ರಾ. ಪಂ. ಅಧ್ಯಕ್ಷ ಬಿ ಎ ಮಜೀದ್ ಸಹಿತ ಗಣ್ಯರು ಉಪಸ್ಥಿತರಿದ್ದರು. ಯೋಜನೆಯ ಸಂಯೋಜಕ ಅಬ್ದುಲ್ಲ ಸ್ವಾಗತಿಸಿ, ಬ್ಲಾಕ್ ಪಂ. ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ವಂದಿಸಿದರು. ರಾಷ್ಟ್ರ ಕವಿ ಗೋವಿಂದ ಪೈ ಸ್ಮಾರಕ ಸಮಿತಿಯಲ್ಲಿ ರಾಜ್ಯಪಾಲರು ಕಾರ್ಯದಶರ್ಿಯವರು ನೇಮಕಗೊಳಿಸಿದ ಕೆ ಆರ್ ಜಯಾನಂದರವರ ಹೆಸರನ್ನು ಕರಪತ್ರದಲ್ಲಿ ಪ್ರಕಟಿಸದೇ ಮೂಲೆಗುಂಪಾಗಿಸಲು ಯತ್ನಿಸಿರುವ ಸಂಘಟಕರ ನಡೆತೆಯ ಬಗ್ಗೆ ಕೆ ಆರ್ ಜಯಾನಂದರವರು ಪತ್ರಿಕೆಯವರಲ್ಲಿ ತನ್ನ ಅಸಮಧಾನವನ್ನು ವ್ಯಕ್ತಪಡಿಸಿದರು. ಚಿತ್ರ ಮೇಳದಲ್ಲಿ ರಚನೆಗೊಂಡ ಚಿತ್ರಗಳನ್ನು ಜ.4 ಮತ್ತು 5ರಂದು ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಚಿತ್ರ ಪ್ರದರ್ಶನದಲ್ಲಿ ಪ್ರದಶರ್ಿತಗೊಳ್ಳಲಿವೆ.