HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                                ರಾಜ್ಯ ಪ್ರಶಸ್ತಿಯತ್ತ ಬದಿಯಡ್ಕ ಯಕ್ಷಗಾನ ತಂಡ-ರಾಜ್ಯ ಕಲೋತ್ಸವಕ್ಕೆ
    ಬದಿಯಡ್ಕ:   ತ್ರಿಶೂರಿನಲ್ಲಿ ನಡೆಯುತ್ತಿರುವ ಕೇರಳ ರಾಜ್ಯ ಮಟ್ಟದ ಕಲೋತ್ಸವದ ಯಕ್ಷಗಾನದಲ್ಲಿ ಭಾಗವಹಿಸಲು ಬದಿಯಡ್ಕ ನವಜೀವನ ಶಾಲೆಯ ತಂಡವು ಸಜ್ಜಾಗಿ ನಿಂತಿದೆ. ಉಪಜಿಲ್ಲೆ ಮತ್ತು ಜಿಲ್ಲೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ತೀಪರ್ುಗಾರರಿಂದ ಮೆಚ್ಚುಗೆ ಪಡೆದ ಈ ತಂಡಕ್ಕೆ ದ.ಕ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ, ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ  ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ನಿದರ್ೇಶನವನ್ನು ನೀಡಿದ್ದಾರೆ. ಕಳೆದ ವರ್ಷವೇ ರಾಜ್ಯ ಮಟ್ಟಕ್ಕೆ ಹೋಗಬೇಕಾದ ಈ ತಂಡ ಹಲವು ಕಾರಣಗಳಿಂದ ಅವಕಾಶ ವಂಚಿತರನ್ನಾಗಿಸಿದರೂ ಈ ವರ್ಷ ಛಲವನ್ನು ಬಿಡದೇ ತಂಡವನ್ನು ಕಟ್ಟಿಕೊಂಡು ಉತ್ತಮ ತೀಪರ್ುಗಾರರಿಂದ ಸೈ ಎನಿಸಿಕೊಂಡು ರಾಜ್ಯ ಮಟ್ಟಕ್ಕೆ ಹೊರಟು ನಿಂತಿದೆ.
     ತಂಡದಲ್ಲಿ ವಿದ್ಯಾಥರ್ಿಗಳಾದ ಚಿನ್ಮಯಕೃಷ್ಣ ಕಡಂದೇಲು(ತಮಡದ ನಾಯಕ), ಧ್ಯಾನ್ ರೈ, ಶಶಾಂಕ್ ಶಂಕರ್, ದತ್ತೇಶ್, ವಿಕಾಸ್, ಪೃಥ್ವಿಗಣಪತಿ ಭಟ್, ಸಂದೇಶ್ ಕುಮಾರ್ ವಿವಿಧ ಪಾತ್ರಗಳ ಮೂಲಕ ಪ್ರದರ್ಶನ ನೀಡುತ್ತಿದ್ದು, ಸತೀಶ್ ಪುಣಿಚಿತ್ತಾಯ ಪೆರ್ಲ, ಬಾಲಕೃಷ್ಣ ಏಳ್ಕಾನ, ಅಂಬೆಮೂಲೆ ಶಿವಶಂಕರ ಭಟ್,ಶಿಕ್ಷಕಿ ಜ್ಯೋಸ್ನ್ಯಾ ಕಡಂದೇಲು  ಸಹಕಾರ ನೀಡುತ್ತಾರೆ. ಜ. 6 ರಂದು ತ್ರಿಶೂರಿನಲ್ಲಿ ಪ್ರದರ್ಶನಗೊಳ್ಳುವ ರಾಜ್ಯ ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲ್ಲಿ ರಾಜ್ಯದ ಇತರ ಹಲವಾರು ಜಿಲ್ಲೆಗಳ ತಂಡಗಳೂ ಸ್ಪಧರ್ಿಸುತ್ತಿವೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries