ರಣಜಿ ಟ್ರೋಫಿ: ದೆಹಲಿ ವಿರುದ್ಧ ವಿದರ್ಭ ತಂಡಕ್ಕೆ ಚೊಚ್ಚಲ ಗೆಲುವು
ರಣಜಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸುವ ಮೂಲಕ ವಿದರ್ಭ ತಂಡ ಮೊದಲ ರಣಜಿ ಟ್ರೋಫಿಗೆ ಮುತ್ತಿಟ್ಟಿದೆ.
ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡ 295 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ ಆರಂಭಿಸಿದ ವಿದರ್ಭ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ 547 ರನ್ ಪೇರಿಸಿತ್ತು. ಇದರೊಂದಿಗೆ ವಿದರ್ಭ ತಂಡ 252 ಮುನ್ನಡೆ ಸಾಧಿಸಿತ್ತು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ದೆಹಲಿ ತಂಡ 280 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ವಿದರ್ಭ ತಂಡಕ್ಕೆ ಗೆಲ್ಲಲು 29 ರನ್ ಗಳ ಗುರಿ ನೀಡಿತು.
ದೆಹಲಿ ತಂಡ ನೀಡಿದ 29 ರನ್ ಗಳ ಗುರಿ ಬೆನ್ನಟ್ಟಿದ ವಿದರ್ಭ ತಂಡ 1 ವಿಕೆಟ್ ನಷ್ಟಕ್ಕೆ 32 ರನ್ ಸಿಡಿಸಿ 9 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು. ಆ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.