HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸಾಮೂಹಿಕವಾಗಿ ಪ್ರಾಥರ್ಿಸುವುದರಿಂದ ಫಲ ಸಿದ್ಧಿ : ಎಡನೀರು ಶ್ರೀ 
   ಕುಂಬಳೆ: ಭಕ್ತರು ಅಚಲ ಶ್ರದ್ಧೆಯಿಂದ ಸಾಮೂಹಿಕವಾಗಿ ಪ್ರಾಥರ್ಿಸುವುದರಿಂದ ಖಂಡಿತವಾಗಿಯೂ ಫಲ ದೊರೆಯುವುದು. ಭಂಡಾರಿ ಸಮುದಾಯದವರು ಒಗ್ಗಟ್ಟಿನಿಂದ ನಡೆಸಿದ ಈ ಪ್ರಯತ್ನ  ಶ್ಲಾಘನೀಯ ಹಾಗೂ ಸಮಾಜಕ್ಕೆ ಮಾದರಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
   ಭಂಡಾರಿ ಸಮಾಜ ಸೇವಾ ಸಂಘದ ವತಿಯಿಂದ ಸೂರಂಬೈಲಿನಲ್ಲಿ  ನೂತನವಾಗಿ ನಿಮರ್ಿಸಲಾದ ಶ್ರೀ  ಗಣೇಶ ಸಭಾಭವನವನ್ನು  ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬಳಿಕ ಕೊಂಜಾರು ಸವಿತಾ ಪೀಠದ ಸ್ವಾಮೀಜಿ ಆಶೀರ್ವಚನವಿತ್ತರು. ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ  ಸಿ.ಕೆ.ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಸ್ಯನಟ, ಸಾಹಿತಿ ಕಾರ್ಕಳ ಶೇಖರ ಭಂಡಾರಿ, ಡಾ.ಕಿಶೋರ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ  ಎಚ್.ಶಿವರಾಮ ಭಟ್ ಭಾಗವಹಿಸಿದ್ದರು. ಆನಂದ ಭಂಡಾರಿ ಸೂರಂಬೈಲು, ಕೇಳು ಭಂಡಾರಿ ಉಡುಪಿ, ಲಲಿತಾ ನೆಲ್ಲಿಕುಂಜೆ, ಬ್ಯಾಂಕ್ನ ಕಾರ್ಯದಶರ್ಿ ಎ.ಕೃಷ್ಣ ಭಟ್ ಉಪಸ್ಥಿತರಿದ್ದರು.
   ಬಾಬು ಭಂಡಾರಿ ಪೆಣರ್ೆ ಮತ್ತು  ಬಾಬು ಭಂಡಾರಿ ಮೈರೆ ಅವರನ್ನು  ಸಮ್ಮಾನಿಸಲಾಯಿತು. ರವೀಂದ್ರ ಪಾಣಾಜೆ ಸ್ವಾಗತಿಸಿ, ಸಂಜೀವ ಭಂಡಾರಿ ಕುಂಬಳೆ ವಂದಿಸಿದರು. ರಾಜೇಶ್ ಸೂರಂಬೈಲು ಕಾರ್ಯಕ್ರಮ ನಿರೂಪಿಸಿದರು.
   ಇದೇ ಸಂದರ್ಭದಲ್ಲಿ ಸೂರಂಬೈಲು ಶ್ರೀ ಗಣೇಶ ಭಜನಾ ಮಂದಿರದ 31ನೇ ವಾಷರ್ಿಕೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಕೀರ್ತನಾ ಸುಧಾ, ನೃತ್ಯ ವೈವಿಧ್ಯ ಮತ್ತು  ಬಪ್ಪನಾಡು ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries