ದಿ.ಕರುಣಾಕರ ಅನಂತಪುರರವರ ಸಂಸ್ಮರಣೆ ಮತ್ತು ಶೈಕ್ಷಣಿಕ ಸಮಾವೇಶ
ಮಧೂರು: ಶಿಕ್ಷಣ ಕ್ಷೇತ್ರದ ಸಮಗ್ರ ಸಮಗ್ರ ವಿಭಾಗಗಳಲ್ಲಿ ಸಕ್ರಿಯರಾಗಿದ್ದು, ಎಲ್ಲರೊಡನೆ ಆರೋಗ್ಯಪೂರ್ಣ ಸಂಬಂಧ ಬೆಳೆಸುವಲ್ಲಿ ಶಿಕ್ಷಕ ಯಶಸ್ವಿಯಾದಾಗ ಸ್ಥಾನದ ಬೆಲೆ ಎತ್ತರಕ್ಕೇರುತ್ತದೆ. ಈ ಹಿನ್ನೆಲೆಯಲ್ಲಿ ದಿ.ಕರುಣಾಕರ ಅನಂತಪುರರು ಇತರರಿಗೆ ಮಾದರಿಯಾಗಿದ್ದವರು ಎಂದು ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರ(ಡಯಟ್)ದ ಹಿರಿಯ ಪ್ರಾಧ್ಯಾಪಕ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಮಾಯಿಪ್ಪಾಡಿಯ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಇತ್ತೀಚೆಗೆ ನಿಧನರಾದ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ದಿ.ಕರುಣಾಕರ ಅನಂತಪುರರವರ ಸಂಸ್ಮರಣೆ ಮತ್ತು ಶೈಕ್ಷಣಿಕ ಸಮಾವೇಶ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಶಿಕ್ಷಣ ವ್ಯವಸ್ಥೆ ಶಿಕ್ಷಕ ಮತ್ತು ಸಮಾಜದ ಸಹಭಾಗಿತ್ವದ ವ್ಯವಸ್ಥೆಯಾಗಿ ರೂಪುಪಡೆಯುತ್ತಿದ್ದು, ಇದು ವಿದ್ಯಾಥರ್ಿಗಳ ಸಮಗ್ರ ಜ್ಞಾನ ಲಭ್ಯತೆಗೆ ಪರಿಣಾಮಕಾರಿಯಾಗಿ ಫಲಪ್ರದವಾಗುತ್ತದೆ. ಶಿಕ್ಷಣವನ್ನು ಸಮಾಜದೊಡನೆ ಸಮರ್ಪಕವಾಗಿ ಜೋಡಿಸುವಲ್ಲಿ ಮಾದರಿ ಶಿಕ್ಷಕರಾಗಿ ಕರುಣಾಕರ ಅನಂತಪುರ ಸ್ತುತ್ಯರ್ಹ ಸೇವೆ ನೀಡಿದ್ದು, ಗಡಿನಾಡ ಕನ್ನಡ ಚಳವಳಿಯಲ್ಲೂ ಸಕ್ರಿಯರಾಗಿದ್ದ ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷ ರವೀಂದ್ರನಾಥ ಕೆ.ಆರ್ ಮಾತನಾಡಿ, ಶಿಕ್ಷಕ-ಶಿಕ್ಷಣಗಳು ಸಮಾಜದ ಕೊಂಡಿಗಳಾಗಿ ರೂಪುಗೊಳ್ಳಬೇಕು. ನಾಲ್ಕುಗೊಡೆಗಳಾಚೆಗಿನ ಅನುಭವ, ಪರಿಸರ-ಸಮಾಜವನ್ನು ವಿದ್ಯಾಥರ್ಿಗಳಿಗೆ ಅನುಭವಗೊಳಿಸುವಲ್ಲಿ ಶಿಕ್ಷಕ ಪೂರ್ವತಯಾರಿಯೊಂದಿಗೆ ನಿರ್ವಹಿಸುವ ಚಟುವಟಿಕೆಗಳು ಯಶಸ್ವಿಯಾಗುತ್ತದೆ. ಇವನ್ನು ಅಥರ್ೈಸಿ ಕಾರ್ಯನಿರ್ವಹಿಸಿದ ಕರುಣಾಕರ ಅನಂತಪುರ ಶಿಕ್ಷಕರಿಗೆ ಮಾದರಿ ಎಂದು ತಿಳಿಸಿದರು.
ಕಾಸರಗೊಡು ಉಪಜಿಲ್ಲಾ ಶಿಕ್ಣಾಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಘಟಕದ ಮಾಜಿ ಅಧ್ಯಕ್ಷ ಮಹಾಲಿಮಗೇಶ್ವರ ಭಟ್ ಎಂ.ವಿ. ಉಪಸ್ಥಿತರಿದ್ದರು. ಕಜಂಪಾಡಿ ಜಿ.ಡಬ್ಲು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗುರುಮೂತರ್ಿ ನಾಯ್ಕಾಪು ಸಂಸ್ಮರಣಾ ಭಾಷಣ ಮಾಡಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದಶರ್ಿ ಕುಮಾರಸುಬ್ರಹ್ಮಣ್ಯ ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಜಬ್ಬಾರ್ ಮಾಸ್ತರ್ ವಂದಿಸಿದರು. ಪುರುಷೋತ್ತಮ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾಸರಗೊಡಿನ ಶೈಕ್ಷಣಿಕ ಸಮಸ್ಯೆಗಳು ಎಂಬ ವಿಷಯದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಪಾಂಡಿ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ದೇಲಂಪಾಡಿ, ಮೊಗ್ರಾಲ್ ಪುತ್ತೂರು ಫ್ರೌಢಶಾಲಾ ಮುಖ್ಯೋಪಾಧ್ಯಾಯ ಅರವಿಂದ ಕೆ, ಎಡನೀರು ಶಾಲಾ ಮುಖ್ಯೋಪಾಧ್ಯಾಯ ಯತೀಶ್ ಕುಮಾರ್ ರೈ ವಿಚಾರ ಮಂಡನೆ ನಡೆಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಸಮನ್ವಯಕರರಾಗಿ ಸಹಕರಿಸಿದರು.