ಎಸ್ಬಿಐ ಕನಿಷ್ಟ ಬ್ಯಾಲೆನ್ಸ್ ರೂ.1 ಸಾವಿರಕ್ಕೆ ಇಳಿಕೆ?
ನಗರ ಪ್ರದೇಶಗಳಲ್ಲಿ 3 ಸಾವಿರ ರು. ಇರುವ ಕನಿಷ್ಟ ಬ್ಯಾಲೆನ್ಸ್ ಅನ್ನು 1 ಸಾವಿರ ರು.ಗೆ ಇಳಿಕೆ ಮಾಡಲು ಎಸ್ ಬಿಐ ಚಿಂತನೆ
ಮುಂಬೈ: ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಗೆ ಶುಲ್ಕವಿಧಿಸುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದ ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ನಗರ ಪ್ರದೇಶಗಳ ಕನಿಷ್ಟ ಬ್ಯಾಲೆನ್ಸ್ ಅನ್ನು 1 ಸಾವಿರ ರು.ಗೆ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ವಾಣಿಜ್ಯ ಕ್ಷೇತ್ರದ ವಾಹಿನಿಯೊಂದು ವರದಿ ಮಾಡಿರುವಂತೆ, ಪ್ರಸ್ತುತ ನಗರ ಪ್ರದೇಶಗಳಲ್ಲಿರುವ ಎಸ್ ಬಿಐ ಗ್ರಾಹಕರು ಖಾತೆಯಲ್ಲಿ ಕನಿಷ್ಚ 3000 ರು.ಬ್ಯಾಲೆನ್ಸ್ ಇಡಬೇಕಿದೆ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಟ 1 ಸಾವಿರ ರು.ಗಳನ್ನು ಇಡಬೇಕಿದೆ. ಎಸ್ ಬಿಐ ಆಡಳಿತ ಮಂಡಳಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಕನಿಷ್ಟ ಬ್ಯಾಲೆನ್ಸ್ ಅನ್ನು ಕೂಡ 1 ಸಾವಿರ ರು.ಗಳಿಗೆ ಇಳಿಕೆ ಮಾಡುವ ಕುರಿತು ಚಿಂತನೆಯಲ್ಲಿ ತೊಡಗಿವೆ ಎನ್ನಲಾಗಿದೆ.
ಇತ್ತೀಚೆಗೆ ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ್ದ ದತ್ತಾಂಶಗಳ ಅನ್ವಯ ಎಸ್ ಬಿಐನ ಆದಾಯ 17.72 ಬಿಲಿಯನ್ ಆಗಿತ್ತು. ಇತ್ತು ಎಸ್ ಬಿಐನ 2017-18ನೇ ಸಾಲಿನ ಎರಡನೆಯ ತ್ರೈಮಾಸಿಕ ಲಾಭಕ್ಕಿಂತಲೂ ಅಧಿಕವಾಗಿದ್ದು, ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಪಡೆಯಲಾಗಿದ್ದ ಶುಲ್ಕಗಳೂ ಈ ಆದಾಯದಲ್ಲಿ ಸೇರಿತ್ತು ಎನ್ನಲಾಗಿದೆ. ಪ್ರಸ್ತುತ ಎಸ್ ಬಿಐನಲ್ಲಿ ಸುಮಾರು 405 ಮಿಲಿಯನ್ ಗ್ರಾಹಕರಿದ್ದು, ಈ ಪೈಕಿ ಸುಮಾರು 17.71 ಬಿಲಿಯನ್ ಹಣವನ್ನು ಕನಿಷ್ಟ ಬ್ಯಾಲೆನ್ಸ್ ಇಲ್ಲದ ಖಾತೆದಾರರಿಂದ ಶುಲ್ಕದ ರೂಪದಲ್ಲಿ ಪಡೆಯಲಾಗಿದೆ.
ಕಳೆದ ಏಪ್ರಿಲ್ 1ರಿಂದ ಈ ನಿಯಮ ಜಾರಿಯಾಗಿತ್ತಾದರೂ, ಎಸ್ ಬಿಐನ ಶುಲ್ಕ ದುಬಾರಿಯಾದ ಕುರಿತು ಗ್ರಾಹಕರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ತೀವ್ರ ಒತ್ತಡದ ಮೇರೆಗೆ ಎಸ್ ಬಿಐ ತನ್ನ ಕನಿಷ್ಟ ಬ್ಯಾಲೆನ್ಸ್ ಮೇಲಿನ ಶುಲ್ಕದಲ್ಲಿ ಕಡಿತ ಮಾಡಿತ್ತು. ಅಲ್ಲದೆ ನಗರ ಪ್ರದೇಶಗಳಲ್ಲಿದ್ದ ಕನಿಷ್ಟ ಬ್ಯಾಲೆನ್ಸ್ ಮಿತಿಯನ್ನು 5 ಸಾವಿರ ರು.ಗಳಿಂದ 3 ಸಾವಿರ ರು.ಗಳಿಗೆ ಇಳಿಕೆ ಮಾಡಿತ್ತು.