HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ವೈದ್ಯರ ಮುಷ್ಕರ : ರಾಜ್ಯದಲ್ಲಿ ಸರಕಾರಿ, ಖಾಸಗಿ ವೈದ್ಯರಿಂದ ಕರಾಳ ದಿನಾಚರಣೆ
  ಕುಂಬಳೆ: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಹೊಸ ಮಸೂದೆಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಪ್ರಸ್ತಾಪವನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ನೇತೃತ್ವದಲ್ಲಿ ವೈದ್ಯರುಗಳು ದೇಶ ವ್ಯಾಪಕವಾಗಿ ಮುಷ್ಕರ ನಡೆಸುತ್ತಿದ್ದು, ಇದರ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಖಾಸಗಿ ಹಾಗೂ ಸರಕಾರಿ ವೈದ್ಯರು ಕರಾಳ ದಿನಾಚರಣೆಯನ್ನು ಮಂಗಳವಾರ ಆಚರಿಸಿದರು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರಿದೆ.
   ಭಾರತೀಯ ವೈದ್ಯಕೀಯ ಮಂಡಳಿಯನ್ನು ವಜಾ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್.ಎಂ.ಸಿ) ಜಾರಿಗೆ ತರಲು ಕೇಂದ್ರ ಸರಕಾರ ಹೊಸ ಮಸೂದೆಗೆ ರೂಪು ನೀಡಿದ್ದು, ಅದನ್ನು ಪ್ರತಿಭಟಿಸಿ ವೈದ್ಯರು ಮಂಗಳವಾರ ಮುಷ್ಕರ ನಡೆಸಿದರು. ಆದರೆ ತುತರ್ು ಸೇವೆ ಮತ್ತು ಇತರ ಗಂಭೀರ ಆರೋಗ್ಯ ಸೇವಾ ವಿಭಾಗಗಳು ಕಾರ್ಯನಿರ್ವಹಿಸಿತು.
   ಮುಷ್ಕರದಿಂದಾಗಿ ಕೇರಳದಲ್ಲಿ ಖಾಸಗಿ ವಲಯಗಳ ವೈದ್ಯರುಗಳು ಕರಾಳ ದಿನವನ್ನಾಗಿ ಆಚರಿಸಿದರು. ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಕೆ.ಜಿ.ಎಂ.ಎ.ಗೆ ಸೇರಿದ ಸರಕಾರಿ ವೈದ್ಯರುಗಳು ಸರಕಾರಿ ಆಸ್ಪತ್ರೆಗಳಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ 10 ಗಂಟೆಯ ವರೆಗೆ ಹೊರ ರೋಗಿಗಳ ವಿಭಾಗವನ್ನು ಬಹಿಷ್ಕರಿಸಿದರು. ಇದರಿಂದ ಕಾಸರಗೋಡು ಜನರಲ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಸಹಿತ ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಒಂದು ತಾಸು ಕಾಲ ಸಾಲು ನಿಲ್ಲಬೇಕಾಗಿ ಬಂತು. 10 ಗಂಟೆ ಬಳಿಕ ವೈದ್ಯರು ಒಪಿಡಿಯಲ್ಲಿ ಹಾಜರಾದ ಬಳಿಕ ವೈದ್ಯ ಸೇವೆ ಸುಗಮಗೊಂಡಿತು.
   ಖಾಸಗಿ ಪ್ರಾಕ್ಟೀಸನ್ನು ಸರಕಾರಿ ವೈದ್ಯರು ನಡೆಸದೇ ಇರುವ ತೀಮರ್ಾನವನ್ನು ಕೈಗೊಂಡಿದ್ದಾರೆ. ಕೇರಳ ಗವಮರ್ೆಂಟ್ ಸ್ಪೆಷಲಿಸ್ಟ್ ಡಾಕ್ಟರ್ ಅಸೋಸಿಯೇಶನ್ ವೈದ್ಯರುಗಳೂ ಮುಷ್ಕರಕ್ಕೆ ಬೆಂಬಲ ನೀಡಿ 12 ತಾಸುಗಳ ಮುಷ್ಕರದಲ್ಲಿ ಪಾಲ್ಗೊಂಡರು. ಅವರು ಸೇವೆಗೆ ಹಾಜರಾಗಿಲ್ಲ. ಆದರೆ ತುತರ್ು ಸೇವೆಗಳನ್ನು ಮಾತ್ರವೇ ನಡೆಸಿದರು. ಮುಷ್ಕರ ನಿರತ ಖಾಸಗಿ ವೈದ್ಯರುಗಳು ತಿರುವನಂತಪುರದಲ್ಲಿ ರಾಜ್ಭವನಕ್ಕೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆಡಿಕಲ್ ವಿದ್ಯಾಥರ್ಿಗಳು ಮುಷ್ಕರದಲ್ಲಿ ಪಾಲ್ಗೊಂಡರು.
   ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ವೈದ್ಯರು ಮುಷ್ಕರದಲ್ಲಿ ಭಾಗವಹಿಸಿದ್ದಾರೆಂದು ಐಎಂಎ ಜಿಲ್ಲಾ ಘಟಕ ತಿಳಿಸಿದೆ. ಸರಕಾರಿ ಮತ್ತು ಖಾಸಗಿ ವಲಯಗಳಲ್ಲಾಗಿ ಜಿಲ್ಲೆಯಲ್ಲಿ ಒಟ್ಟು 650 ವೈದ್ಯರುಗಳಿದ್ದಾರೆ. ಅವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಸರಕಾರಿ ಆಸ್ಪತ್ರೆಗಳ ವೈದ್ಯರು ಬೆಳಗ್ಗೆ 9 ರಿಂದ 10 ಗಂಟೆಯ ತನಕ ಒ.ಪಿ. ಬಹಿಷ್ಕರಿಸಿ ಮುಷ್ಕರಕ್ಕೆ ಬೆಂಬಲ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries